×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಉಡುಪಿ | ವಿಪಿ ಬಿಲ್ಡರ್ಸ್‌ನ ‘ರೆಡ್‌ಸ್ಟೋನ್ ಎನ್‌ಕ್ಲೇವ್’ ವಸತಿ ಸಮುಚ್ಚಯ ಉದ್ಘಾಟನೆ

ಉಡುಪಿ ಆಧುನಿಕ ಸೌಲಭ್ಯಗಳೊಂದಿಗೆ 40 ಫ್ಲ್ಯಾಟ್‌ಗಳ ನೂತನ ಯೋಜನೆ ಲೋಕಾರ್ಪಣೆ

ಉಡುಪಿ ನಗರದ ಹೃದಯ ಭಾಗದಲ್ಲಿ ವಿಪಿ ಬಿಲ್ಡರ್ಸ್ ಸಂಸ್ಥೆ ನಿರ್ಮಿಸಿರುವ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ‘ರೆಡ್‌ಸ್ಟೋನ್ ಎನ್‌ಕ್ಲೇವ್’ ರೆಸಿಡೆನ್ಸಿಯಲ್ ಅಪಾರ್ಟ್‌ಮೆಂಟ್ ಶನಿವಾರ ಭವ್ಯ ಸಮಾರಂಭದಲ್ಲಿ ಉದ್ಘಾಟನೆಗೊಂಡಿತು.

ಗುಣಮಟ್ಟದ ನಿರ್ಮಾಣ ಮತ್ತು ಗ್ರಾಹಕರ ವಿಶ್ವಾಸಕ್ಕೆ ಹೆಸರಾದ ವಿಪಿ ಬಿಲ್ಡರ್ಸ್ ಸಂಸ್ಥೆಯ 9ನೇ ವಸತಿ ಯೋಜನೆಯಾದ ಈ ಸಮುಚ್ಚಯವು ಆಧುನಿಕ ಜೀವನಶೈಲಿಗೆ ಪೂರಕವಾಗುವ ಎಲ್ಲ ಸೌಲಭ್ಯಗಳನ್ನು ಒಳಗೊಂಡಿದೆ. ದೀಪ ಬೆಳಗಿಸುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಆರ್‌ಸಿಸಿ ಫ್ರೇಮ್ ಸ್ಟ್ರಕ್ಚರ್ ಮಾದರಿಯಲ್ಲಿ ನಿರ್ಮಾಣಗೊಂಡಿರುವ ಈ ವಸತಿ ಸಮುಚ್ಚಯದಲ್ಲಿ ಒಟ್ಟು 40 ಫ್ಲ್ಯಾಟ್‌ಗಳಿದ್ದು, ಅದರಲ್ಲಿ 20 ಎರಡು ಬಿಎಚ್‌ಕೆ ಹಾಗೂ 20 ಮೂರು ಬಿಎಚ್‌ಕೆ ಫ್ಲ್ಯಾಟ್‌ಗಳಿವೆ. ಕಟ್ಟಡದ ಗೋಡೆಗಳನ್ನು ಕೆಂಪುಕಲ್ಲಿನಿಂದ ನಿರ್ಮಿಸಲಾಗಿದ್ದು, ಮುಖ್ಯದ್ವಾರ ಮತ್ತು ಒಳಬಾಗಿಲುಗಳಿಗೆ ಗುಣಮಟ್ಟದ ಟೀಕ್‌ವುಡ್ ಬಳಸಲಾಗಿದೆ.

ರೆರಾ ಅನುಮೋದನೆ ಪಡೆದಿರುವ ಈ ಯೋಜನೆಯಲ್ಲಿ ಪ್ರತಿ ಫ್ಲ್ಯಾಟ್‌ಗೆ ನಿರಂತರ ಪವರ್ ಬ್ಯಾಕ್‌ಅಪ್ ವ್ಯವಸ್ಥೆ, 24 ಗಂಟೆಗಳ ನೀರಿನ ಸರಬರಾಜು, ಎಲೆವೇಟರ್, ಸಿಸಿ ಕ್ಯಾಮೆರಾ ಕಣ್ಗಾವಲು, ಭದ್ರತಾ ಸಿಬ್ಬಂದಿ ಹಾಗೂ 40ಕ್ಕೂ ಅಧಿಕ ವಾಹನಗಳ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿದೆ. ಬಾವಿಯ ಜತೆಗೆ ನಗರಸಭೆಯ ನಿರಂತರ ನೀರಿನ ಸಂಪರ್ಕ ವ್ಯವಸ್ಥೆಯೂ ಲಭ್ಯವಿದೆ.

ಇದಲ್ಲದೆ ನಿವಾಸಿಗಳ ಆರೋಗ್ಯ ಮತ್ತು ಮನರಂಜನೆಯನ್ನು ಗಮನದಲ್ಲಿಟ್ಟುಕೊಂಡು ಯೋಗ ಕೊಠಡಿ, ಜಿಮ್, ಪಾರ್ಟಿ ಹಾಲ್ ಸೇರಿದಂತೆ ಪ್ರತ್ಯೇಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಕಟ್ಟಡದಲ್ಲಿ ಅಳವಡಿಸಲಾಗಿರುವ ಎಲ್ಲ ಉಪಕರಣಗಳು ಹಿಂಡ್‌ವೇರ್ ಸಂಸ್ಥೆಯವುಗಳಾಗಿದ್ದು, ಡಬ್ಲ್ಯುಪಿಸಿ ಬಾತ್‌ರೂಂ ಬಾಗಿಲುಗಳು, ಆರ್‌ಆರ್ ಕೇಬಲ್‌ಗಳು ಸೇರಿದಂತೆ ಎಲ್ಲ ವಸ್ತುಗಳಲ್ಲಿ ಐಎಸ್‌ಐ ಪ್ರಮಾಣಿತ ಉತ್ಪನ್ನಗಳನ್ನು ಬಳಸಲಾಗಿದೆ. ಫ್ಲ್ಯಾಟ್ ಖರೀದಿಸುವವರಿಗೆ ಬ್ಯಾಂಕ್ ಸಾಲ ಸೌಲಭ್ಯವನ್ನೂ ಒದಗಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಸಮಾರಂಭದಲ್ಲಿ ಉದ್ಯಮಿ ಕಿಶೋರ್ ಮಯ್ಯ ಅವರು ಜನರೇಟರ್ ವಿಭಾಗವನ್ನು ಉದ್ಘಾಟಿಸಿದರು. ಬಾರ್ಕೂರು ಕಾಳಿಕಾಂಬ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಧರ ಆಚಾರ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಕಟ್ಟಡದ ಮುಖ್ಯ ದ್ವಾರವನ್ನು ಗೀತಾ ಶೆಟ್ಟಿಗಾರ್ ಉದ್ಘಾಟಿಸಿದರೆ, ಲಿಫ್ಟ್ ವಿಭಾಗವನ್ನು ಲೆಕ್ಕಪರಿಶೋಧಕ ಪ್ರಶಾಂತ್ ಹೊಳ್ಳ, ಜಿಮ್ ವಿಭಾಗವನ್ನು ಕರ್ನಾಟಕ ಬ್ಯಾಂಕ್ ಮಂಗಳೂರು ಕೇಂದ್ರದ ವ್ಯವಸ್ಥಾಪಕ ಕೌಶರಿ ಗೋಪಾಲಕೃಷ್ಣ ಎಂ., ಯೋಗ ವಿಭಾಗವನ್ನು ವಕೀಲ ಲಕ್ಷಣ್ ಶೆಣೈ ಹಾಗೂ ಪಾರ್ಟಿ ಹಾಲ್ ಅನ್ನು ಉದ್ಯಮಿ ದಾಮೋದರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರವರ್ತಕರಾದ ಕೆ. ಪ್ರಸಾದ್ ಆಚಾರ್ಯ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಪಿ ಬಿಲ್ಡರ್ಸ್ ಸಂಸ್ಥೆಯ ಅಧ್ಯಕ್ಷ ಕೆ. ವಿಶ್ವನಾಥ ಆಚಾರ್ಯ ವಹಿಸಿದ್ದರು. ಸಂಸ್ಥೆಯು ಇದುವರೆಗೆ ನಿರ್ಮಿಸಿರುವ ವಿ.ಪಿ. ಪ್ಯಾಲೇಸ್, ವಿನಾಯಕ ಪ್ಯಾಲೇಸ್, ವಿನಾಯಕ ಪ್ಯಾರಡೈಸ್, ವೈಷ್ಣವಿ ಪ್ಯಾರಡೈಸ್ ಹಾಗೂ ಶ್ರೀ ವೆಂಕಟೇಶ್ ವಸತಿ ಸಮುಚ್ಚಯಗಳ ಕುರಿತು ವಿವರಿಸಿ ಸಂಸ್ಥೆಯ ಬೆಳವಣಿಗೆಯ ಪಯಣವನ್ನು ಅವರು ವಿವರಿಸಿದರು. ಗ್ರಾಹಕರ ವಿಶ್ವಾಸ ಮತ್ತು ಗುಣಮಟ್ಟದ ನಿರ್ಮಾಣವೇ ಸಂಸ್ಥೆಯ ಯಶಸ್ಸಿನ ಮೂಲ ಎಂದು ಹೇಳಿದರು. ಪಿಪಿಸಿ ಕಾಲೇಜು ಸಮೀಪ ಸಂಸ್ಥೆಯ 10ನೇ ವಸತಿ ಯೋಜನೆಯ ನಿರ್ಮಾಣ ಕಾರ್ಯ ಈಗಾಗಲೇ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗಣ್ಯರು, ಗ್ರಾಹಕರು, ಹೂಡಿಕೆದಾರರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ನೂತನ ವಸತಿ ಸಮುಚ್ಚಯಕ್ಕೆ ಶುಭ ಹಾರೈಸಿದರು.

Leave a Reply

Your email address will not be published. Required fields are marked *