
ಮಾನ್ಯ ಶಾಸಕರಾದ ಲಾಲಾಜಿ ಆರ್ ಮೆಂಡನ್ ರವರು ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನರ ಬಹುಬೇಡಿಕೆಯ 7 ಕೋಟಿ 21 ಲಕ್ಷ ರೂಗಳಲ್ಲಿ ನಿರ್ಮಾಣಗೊಂಡಿರುವ ಜಾರಾಕುದ್ರು ಸೇತುವೆಯನ್ನು ಹಾಗೂ 5 ಕೋಟಿ ಮೊತ್ತದಲ್ಲಿ ಅಭಿವೃದ್ಧಿ ಪಡಿಸಿದ ಸಂಪಿಗೆನಗರ – ಪಿತ್ರೋಡಿ ರಸ್ತೆಯನ್ನು ಲೋಕಾರ್ಪಣೆ ಮಾಡಿದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ರಾಧಾಕೃಷ್ಣ, ಗ್ರಾಮ ಪಂಚಾಯತ್ ಸದಸ್ಯರಾದ ಗಿರೀಶ್ ಪಿತ್ರೋಡಿ, ಚೇತನ್ ಕುಮಾರ್, ರಾಜೇಶ್ ಪಡುಕೆರೆ, ಮಿತೇಶ್ ಸುವರ್ಣ, ಮಾಲತಿ, ರೇಖಾ ಹಾಗೂ ಪಕ್ಷದ ಪ್ರಮುಖರಾದ ಕಿರಣ್ ಕುಮಾರ್, ಗಣೇಶ್ ಕುಮಾರ್, ವಿಲ್ಸನ್ ರಾಜಕುಮಾರ್, ವಿಜಯ ಕುಮಾರ್, ಯೋಗೀಶ್ ಪಡುಕೆರೆ, ಗಂಗಾಧರ್, ಶಾಂತರಾಜ್ ಉದ್ಯಾವರ ಗುತ್ತಿಗೆದಾರರು ರೋಹಿತ್ ಕುಮಾರ್, ಹಾಗೂ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು

