
ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಪ್ರತೀ ಕಾರ್ಯಕರ್ತನೂ, ಪ್ರತೀ ಮನೆಯನ್ನು ಸಂಪರ್ಕಿಸುವ ಮೂಲಕ ಸರಕಾರದ ಸಾಧನೆಯನ್ನು ಮನೆ ಮನಕ್ಕೆ ಮುಟ್ಟಿಸುವ ಹಾಗೂ ಸಂಘಟನೆಯ ಚಟುವಟಿಕೆಗಳಲ್ಲಿ ಪ್ರತೀ ಮತದಾರನನ್ನೂ ಜೋಡಿಸುವ ಕಾರ್ಯದಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿ ಜ21 ರಿಂದ ಜ 29 ರವರೆಗೆ ವಿಜಯ ಸಂಕಲ್ಪ ಯಾತ್ರೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್ ಕಾಪುವಿನ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿಯನ್ನು ನೀಡಿದರು ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಅಂಗಾರ ರವರು ಜನವರಿ 22ರಂದು ಭಾನುವಾರ ಸಂಜೆ 4 ಗಂಟೆಗೆ ತೆಂಕ ಗ್ರಾಮದ ಇನ್ಸ್ಟಂಟ್ ಸೀ ಬೀಚ್ ರೆಸಾರ್ಟ್ ನಲ್ಲಿ ಉದ್ಘಾಟಿಸಲಿದ್ದಾರೆ ಜಿಲ್ಲಾಧ್ಯಕ್ಷರಾಧ ಸುರೇಶ ನಾಯಕ್ ಶಾಸಕ ಲಾಲಾ ಜಿ ಆರ್ ಮೆಂಡನ್ ಕಾಪು ಮಂಡಲದ ಅಧ್ಯಕ್ಷ ಶ್ರೀಕಾಂತ್ ನಾಯಕ್ ಕಾರ್ಯಕ್ರಮ ಸಂಚಾಲಕ ಅನಿಲ್ ಶೆಟ್ಟಿ ಮತ್ತು ಪಕ್ಷದ ನಾಯಕರು ಭಾಗವಹಿಸಲಿದ್ದಾರೆ ಕ್ಷೇತ್ರದಲ್ಲಿ ಬೂತ್‌ನಲ್ಲಿರುವ ಎಲ್ಲ ಮನೆಗಳ ಸಂಪರ್ಕ ಪ್ರತೀ ಮನೆಗೆ ಸರ್ಕಾರದ ಸಾಧನೆಗಳ ಕರಪತ್ರ ಮತ್ತು ಸ್ಪಿಕ್ಕ ವಿತರಣೆ. ಸದಸ್ಯತ್ವ ಅಭಿಯಾನ. (ಮಿಸ್ ಕಾಲ್ ಕೊಡುವ ಮೂಲಕ) ಫಲಾನುಭವಿಗಳ ಸಂಪರ್ಕ ಪ್ರತೀ ಬೂತ್ ವ್ಯಾಪ್ತಿಯಲ್ಲಿ 10 ಗೋಡೆ ಬರಹಗಳು ಹಾಗೂ 1 ಡಿಜಿಟಲ್ ಗೋಡೆ ಬರಹವನ್ನು ಮಾಡುವುದು, ಗೋಡೆ ಬರಹಗಳ ಮಾದರಿಯನ್ನು ರಾಜ್ಯದಿಂದ ಕಳುಹಿಸಲಾಗುವುದು ಪ್ರತೀ ಬೂತ್‌ನಲ್ಲಿ ಜನವರಿ 29 ರಂದು ‘ಮನ್ ಕಿ ಬಾತ್’ ಕಾರ್ಯಕ್ರಮವನ್ನು ವಿಶೇಷವಾಗಿ ವೀಕ್ಷಿಸುವ ಬಗ್ಗೆ ಯೋಜನೆ. ಎಂದು ತಿಳಿಸಿದರು ಪತ್ರಿಕಾಗೋಷ್ಠಿಯಲ್ಲಿ ಕಾಪು ಶಾಸಕ ಲಾಲಾ ಜಿ ಆರ್ ಮೆಂಡನ್ ಪ್ರತಾಪ್ ಶೆಟ್ಟಿ ಪ್ರಕಾಶ್ ಶೆಟ್ಟಿ ಪಾದಬೆಟ್ಟು ಅನಿಲ್ ಶೆಟ್ಟಿ ಗೋಪಾಲ್ ರಾವ್ ಉಪಸ್ಥಿತರಿದ್ದರು

