
ಪಡುಬಿದ್ರಿ ಗ್ರಾಮ ಪಂಚಾಯತ್‌ಗೆ 53ಲಕ್ಷ ರೂ. ವೆಚ್ಚದ ಸಭಾಭವನದ ನಿರ್ಮಾಣಕ್ಕೆ ಕಾಪು ಶಾಸಕ ಲಾಲಾಜಿ ಮೆಂಡನ್ ಶಿಲಾಪೂಜನವನ್ನು ನೆರವೇರಿಸಿದರು. ಪಂಚಾಯತ್ ನಿಧಿಯ ಈ ಕಾಮಗಾರಿಗೆ ಜಿ.ಪಂ. ಎಂಜೀನಿಯರಿಂಗ್ ವಿಭಾಗದ ಅನುಮೋದನೆಯು ದೊರೆತಿದ್ದು, ಕಾಮಗಾರಿಯನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳಲಾಗುವುದೆಂದು ಗ್ರಾ. ಪಂ. ಅಧ್ಯಕ್ಷ ರವಿ ಶೆಟ್ಟಿ ಪಾದೆಬೆಟ್ಟು ತಿಳಿಸಿದರು. ಗ್ರಾ.ಪಂ.ಅಧ್ಯಕ್ಷ ರವಿ ಶೆಟ್ಟಿ ಪಾದೆಬೆಟ್ಟು, ಉಪಾಧ್ಯಕ್ಷೆ ಯಶೋದಾ ಪೂಜಾರಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ, ಗ್ರಾ. ಪಂ. ಸದಸ್ಯ ಮಹೇಂದ್ರ ಅಮೀನ್, ಕೃಷ್ಣಶೆಣೈ, ಚಂದ್ರಶೇಖರ ಆಚಾರ್ಯ, ರಾಜೇಂದ್ರ ಶೆಣೈ, ಸುನಿಲ್ ಕುಮಾರ್ ರಮೀಝ್ ಹುಸೇನ್ ಶಶಿಕಾಂತ್ ಪಡುಬಿದ್ರಿ ಎಂಎಸ್ ಶಾಪಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

