×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಾರ್ಕಳ: ಮನೆಗೆ ನುಗ್ಗಿ ಅಂಗಳದಲ್ಲಿ ಇಟ್ಟಿದ್ದ ಹೊಂಡಾ ಆಕ್ಟಿವಾ ಸ್ಕೂಟರ್ ಕಳವು

ಕಾರ್ಕಳ: ತಾಲೂಕು ಮಿಯಾರು ಗ್ರಾಮದ ಬಲಿಪರಹಾಡಿ ಚಂದ್ರಶೇಖರ ಕೆ , ಪ್ರಾಯ 51 ವರ್ಷ ಎಂಬುವರ ಮನೆಯಲ್ಲಿ ದಿನಾಂಕ 21-12-2022 ರಂದು ರಾತ್ರಿ 11 : 30 ಗಂಟೆಯಿಂದ 22-12-2022ರ ಬೆಳಿಗ್ಗೆ 6:00 ಗಂಟೆಗೆ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಪಕ್ಕದಲ್ಲಿರುವ ನಿರ್ಮಾಣ ಹಂತದ ಮನೆಯಿಂದ ಏಣಿಯನ್ನು ತಂದು ಅಡುಗೆ ಕೋಣೆಯ ಯುಟಿಲಿಟಿ ಕೋಣೆಯ ಹತ್ತಿರ ಇಟ್ಟು ಮಹಡಿಯ ಮೇಲೆ ಹೋಗಿ , ಮಹಡಿಯ ಮೇಲೆ ಕಿಟಿಕಿಯ ಮೂಲಕ ಮಹಡಿಯ ಬಾಗಿಲನ್ನು ತೆರೆದು ಒಳಪ್ರವೇಶಿಸಿ ಮನೆಯೊಳಗೆ ಹುಡುಕಾಡಿ ಶೆಲ್ಫ್ ಮೇಲೆ ಇಟ್ಟಿದ್ದ ಪರ್ಸಿನಲ್ಲಿದ್ದ ರೂ 800/ರೂ ನಗದು ಹಣವನ್ನು ಕಳವು ಮಾಡಿ ಶೆಲ್ಪ್ ನಲ್ಲಿ ಇದ್ದ ಸ್ಕೂಟರ್ ಕೀ ಯನ್ನು ತೆಗೆದುಕೊಂಡು ಅಂಗಳದಲ್ಲಿ ಇಟ್ಟಿದ್ದ ನೀಲಿ ಬಣ್ಣದ ಹೊಂಡಾ ಆಕ್ಟಿವಾ KA20EV3717 ನಂಬ್ರದ ಸ್ಕೂಟರನ್ನು ಕಳವು ಮಾಡಿಕೊಂಡು ಹೋಗಿದ್ದು ಸ್ಕೂಟರ್‌ನ ಅಂದಾಜು ಮೌಲ್ಯ 50,000/ಆಗಬಹುದು ಕಳವಾದ ಸೊತ್ತುಗಳ ಒಟ್ಟು ಮೌಲ್ಯ 50,800/ ಆಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *