25 ವರ್ಷಗಳಿಂದ ರಕ್ತದಾನ ಶಿಬಿರ ಆಯೋಜನೆಯ ಮೂಲಕ ಸಾಕಷ್ಟು ಜನರ ಪ್ರಾಣ ಉಳಿಸಿದ ಶ್ರೇಷ್ಠ ಕೆಲಸ ಮಾಡಿದೆ ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಹೇಳಿದರು.
ಗಾಂಧಿ ಆಸ್ಪತ್ರೆ 32ನೇ ವರ್ಷದ ಪ್ರಯುಕ್ತ ಪಂಚಮಿ ಟ್ರಸ್ಟ್ ಪಂಚಲಹರಿ ಫೌಂಡೇಶನ್ ಸಹಯೋಗದೊಂದಿಗೆ ಆಸ್ಪತ್ರೆಯ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾದ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ರಕ್ತದಾನ ಎಲ್ಲ ದಾನಗಳಿಗಿಂತ ಶ್ರೇಷ್ಠವಾದುದು. ಇಂದಿನ ದಿನಗಳಲ್ಲಿ ರಕ್ತದ ಆವಶ್ಯಕತೆಯಿದ್ದು ಹೆಚ್ಚೆಚ್ಚು ಸ್ವಯಂಪ್ರೇರಿತ ರಕ್ತದಾನ ಶಿಬಿರಗಳು ನಡೆಯಬೇಕಾಗಿದೆ. ಛಾಯಾಚಿತ್ರ ಪ್ರದರ್ಶನದಲ್ಲಿ ಮಾರಾಟವಾದ ಚಿತ್ರಗಳಿಂದ ಬಂದ ಹಣವನ್ನು ‘ಹೋಮ್ ಡಾಕ್ಟರ್‌ಫೌಂಡೇಶನ್’ ಸಂಸ್ಥೆಗೆ ನೀಡುವ ಡಾ। ವ್ಯಾಸರಾಜರ ಆಶಯ ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಗಾಂಧಿ ಆಸ್ಪತ್ರೆಯ ಸ್ಥಾಪಕ ಎಂ. ಹರಿಶ್ಚಂದ್ರ ಮಾತನಾಡಿ, ಆಸ್ಪತ್ರೆ ನಿರಂತರವಾಗಿ ರಕ್ತದಾನ ಶಿಬಿರ, ವಿವಿಧ ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿರುವುದಕ್ಕೆ ಹೆಮ್ಮೆಯಾಗುತ್ತದೆ. 25 ಬೆಡ್ ನಿಂದ ಆರಂಭಗೊಂಡ ಆಸ್ಪತ್ರೆ ಪ್ರಸ್ತುತ 100 ಬೆಡ್ ಗಳ ಸುಸಜ್ಜಿತ ಆಸ್ಪತ್ರೆಯಾಗಿ ಮುಂದುವರಿಯುತ್ತಿದೆ ಎಂದು ತಿಳಿಸಿದರು.ಭಾರತೀಯ ವೈದ್ಯ ಮಂಡಳಿ ಉಡುಪಿ ಕರಾವಳಿ ಘಟಕ ಅಧ್ಯಕ್ಷ ಡಾ| ಅಶೋಕ್ ಕುಮಾರ್‌ಕಾಮತ್ ಶುಭಾಶಂಸನೆಗೈದರು.
ಡಾ| ವ್ಯಾಸರಾಜ ತಂತ್ರಿ ಅವರಿಂದ ಆಯೋಜಿಸಲಾದ ಬಹುಚಿತ್ರ ಜಗತ್’ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಲಾಯಿತು

ಡಾ. ವ್ಯಾಸರಾಜ ತಂತ್ರಿ ಸ್ವಾಗತಿಸಿ, ಪ್ರಸ್ತಾವನೆಗೈದು, ಆಸ್ಪತ್ರೆ ವತಿಯಿಂದ ರಾಜಾಂಗಣದಲ್ಲಿ ಶೀರೂರು ಮಠಾಧೀಶರಾದ ಶ್ರೀ ವೇದವರ್ಧನತೀರ್ಥ ಶ್ರೀಪಾದರ ಅನುಗ್ರಹದಿಂದ, ಬಾಲ ಪ್ರತಿಭೆ ಗಂಗಾ ಶಶಿಧರನ್ ಅವರಿಂದ ವಯೋಲಿನ್ ಸಂಗೀತ ಳಜಿಲ್ಲಾ ರಕ್ತನಿಧಿ ಮುಖ್ಯಸ್ಥೆ ಡಾ। ವೀಣಾ ಕುಮಾರಿ, ಲಕ್ಷ್ಮೀ ಹರಿಶ್ಚಂದ್ರ, ಡಾ| ವಿದ್ಯಾ ವ್ಯಾಸರಾಜ ತಂತ್ರಿ, ಡಾ। ಪಂಚಮಿ ಉಪಸ್ಥಿತರಿದ್ದರು ಕಛೇರಿ ನಡೆಯಲಿದೆ. ಇದೇ ಸಂದರ್ಭ ಅವರ ಸಾಧನೆ ಗುರುತಿಸಿ ‘ನಾದಗಂಗಾ ಲಹರಿ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಗುವುದು ಎಂದರು

