×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಾಪು : ಮಹಾಲಕ್ಷ್ಮೀ ಟ್ರೇಡರ್ಸ್’ನಲ್ಲಿ ಕೆಎಂಎಫ್ ಡೈರಿ ನೇತೃತ್ವದಲ್ಲಿ ಸಿಹಿ ಉತ್ಪನ್ನಗಳ ಮಾರಾಟಕ್ಕೆಚಾಲನೆ

ಕಾಪು : ಮಹಾಲಕ್ಷ್ಮೀ ಟ್ರೇಡರ್ಸ್’ನಲ್ಲಿ ಕೆಎಂಎಫ್ ಡೈರಿ ನೇತೃತ್ವದಲ್ಲಿ ಸಿಹಿ ಉತ್ಪನ್ನಗಳ ಮಾರಾಟಕ್ಕೆ ಕರ್ನಾಟಕ ರಾಜ್ಯ ಹಾಲು ಮಹಾಮಂಡಲದ ನಿರ್ದೇಶಕ ಕಾಪು ದಿವಾಕರ ಶೆಟ್ಟಿ ಚಾಲನೆ ನೀಡಿದ್ದಾರೆ. ಈ ಸಂದರ್ಭ ಅವರು ಡಿಸೆಂಬರ್ 18 ರಿಂದ ಜನವರಿ 18 ರವರೆಗೆ ನಂದಿನಿ ಸಿಹಿ ಉತ್ಸವ ಜರಗಲಿದೆ. ನಂದಿನಿ ಸಿಹಿ ಉತ್ಪನ್ನಗಳಿಗೆ ಶೇ. 20 ರಿಯಾಯಿತಿ ದೊರೆಯಲಿದೆ ಇದರ ಸದುಪಯೋಗ ಸಾರ್ವಜನಿಕರು ಪಡೆಯಬಹುದು. ಉತ್ಪನ್ನಗಳ ಮಾರಾಟದ ಮೂಲಕ ಇದ್ದ ಗ್ರಾಹಕರನ್ನು ಉಳಿಸಿ ಹೊಸ ಗ್ರಾಹಕರನ್ನು ಸಿಹಿಯಾಗಿ ಸೆಳೆಯುವುದು. ಕರ್ನಾಟಕ ರಾಜ್ಯದಲ್ಲಿ 58 ಬಗೆಯ ಸಿಹಿ ಉತ್ಪನ್ನವನ್ನು ಮಾರಾಟ ಮಾಡಿದೆ ಎಂದರು ಈ ಸಂದರ್ಭ ದಕ್ಷಿಣ ಕನ್ನಡ ಹಾಲು ಮಹಾಮಂಡಲ ಇದರ ಉಪರಾದ ಸುಧಾಕರ್,  ಕೆಎಂಎಫ್ ಮಾರ್ಕೆಟಿಂಗ್ ಆಫೀಸರ್ ಸಿ ಎಚ್ ಮೋಹನ್, ಕೆಎಂಎಫ್ ಪ್ರಭಾರ ಜಂಟಿ ನಿರ್ದೇಶಕ ರಮೇಶ್ ಬೂದಗತ್ತಿ, ಉದ್ಯಮಿ ಕೆ ಕಮಲಾಕ್ಷ ನಾಯಕ್, ಮಹಾಲಕ್ಷ್ಮಿ ಟ್ರೇಡರ್ಸ್ ನ ಹರೀಶ್ ಕೆ ನಾಯಕ್, ಅನುಪೂರ್ವಿ ಸಮೂಹ ಸಂಸ್ಥೆಯ ಪ್ರವರ್ತಕರಾದ ಪ್ರೀತಿ ನಾಯಕ್, ದಕ್ಷಿಣ ಕನ್ನಡ ಹಾಲು ಒಕ್ಕೂಟದ ಮಾರ್ಕೆಟಿಂಗ್ ಆಫೀಸರ್ ಸಂದೀಪ್ ಮುಂತಾದವರು ಉಪಸ್ಥಿತರಿದ್ದರು 

Leave a Reply

Your email address will not be published. Required fields are marked *