×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಮೆಸ್ಕಾಂ ನೌಕರರೊಬ್ಬರಿಗೆ ಸಾಲ ಕೊಡಿಸುವುದಾಗಿ ವಂಚಿಸಿದ ಮಹಿಳೆ

ಮೆಸ್ಕಾಂ ಸಿಬ್ಬಂದಿಗೆ ಸಾಲ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ಮಹಿಳೆಯೊಬ್ಬರು ವಂಚಿಸಿರುವುದಾಗಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಬೊಮ್ಮರಬೆಟ್ಟು ಗ್ರಾಮದ ಗುರುಪ್ರಸಾದ್ ಅವರು ಮೆಸ್ಕಾಂ ಇಲಾಖೆಯಲ್ಲಿ ಶಿಫ್ಟ್ ಹೆಲ್ಪರ್ ಆಗಿ ತಾತ್ಕಾಲಿಕ ನೌಕರರಾಗಿ ಕೆಲಸ ಮಾಡಿಕೊಂಡಿದ್ದಾರೆ. ಇವರಿಗೆ ತಂಗಿಯ ಮದುವೆ ನಿಮಿತ್ತ ಹಣಕಾಸಿನ ಅವಶ್ಯಕತೆ ಇದ್ದು, ಪಿಪಿಸಿ ಬಳಿ ಕಛೇರಿಯನು ಹೊಂದಿರುವ ಆಪಾದಿತೆ ತಬಸಂ ಎಂಬಾಕೆಯು ಇವರಿಗೆ ಸಾಲ ಕೊಡಿಸುವುದಾಗಿ ನಂಬಿಸಿ ಅವರಿಂದ ಅ. 30 ರಂದು ರೂ.7,000 ಹಣವನ್ನು ಹಾಗೂ ದಾಖಲೆಗಳನ್ನು ಪಡೆದು ಕೊಂಡಿದ್ದಳು. ಆದರೆ ಸಾಲ ಮಾಡಿಸಿಕೊಡದೆ, ಪಡೆದ ಹಣವನ್ನೂ ಈವರೆಗೂ ವಾಪಾಸು ನೀಡದೇ ಮೋಸ ಮಾಡಿದ್ದಾಳೆ ಎಂಬುದಾಗಿ ಗುರುಪ್ರಸಾದ್ ಅವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *