×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಉಚ್ಚಿಲ : ಬೆರಳೆಣಿಕೆಯ ಗ್ರಾಮಸ್ಥರ ಮಧ್ಯೆ ಗ್ರಾಮ ಸಭೆ

ಕೇವಲ ಬೆರಳೆಣಿಕೆಯ ಗ್ರಾಮಸ್ಥರ ಮಧ್ಯೆಯೇ ಕಾಪು ತಾಲೂಕಿನ 56ನೇ ಉಚ್ಚಿಲ ಬಡಾ ಗ್ರಾಮ ಪಂಚಾಯತ್ ನ  ಪ್ರಥಮ ಗ್ರಾಮ ಸಭೆ, ಉಚ್ಚಿಲದ ಶ್ರೀ ಮಹಾಲಕ್ಷಿಸಭಾಭವನದಲ್ಲಿ  ನೆರವೇರಿದೆ. ಸಭಾಭವನದಲ್ಲಿ ಸೂಕ್ತ ಧ್ವನಿವರ್ಧಕದ ವ್ಯವಸ್ಥೆ ಇಲ್ಲದೆ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯತ್ ಸದಸ್ಯರ ಮಧ್ಯೆಯ ಮಾತುಕತೆ ಅರ್ಥವೇ ಆಗುತ್ತಿರಲಿಲ್ಲ. ಗ್ರಾಮ ಸಭೆಯಲ್ಲಿ ಗ್ರಾಮಸ್ಥರಿಲ್ಲದೆ ಹತ್ತು ಹಲವು ಸಮಸ್ಯೆಗಳು ನೆನೆಗುದಿಗೆ ಬಿದ್ದಿದೆ.15 ಮಂದಿ ಗ್ರಾಮಸ್ಥರು, ಆಶಾ ಕಾರ್ಯಕರ್ತೆಯರು, ಅಧಿಕಾರಿ ವರ್ಗ ಮಾತ್ರ ಉಪಸ್ಥಿತರಿದ್ದರು.ಕೆಲ ಅಧಿಕಾರಿಗಳು ಆಗಮಿಸಿ ಗ್ರಾಮಸ್ಥರಿಗೆ ಮಾಹಿತಿ ನೀಡಿದರಾದರೂ, ಕೇವಲ 15-20 ಗ್ರಾಮದ ಸದಸ್ಯರು ಇದ್ದುದರಿಂದ ಅದು ಫಲ ಇಲ್ಲದಂತಾಗಿದೆ.21 ಗ್ರಾಮ ಪಂಚಾಯತ್ ಸದಸ್ಯರಿರುವ ಗ್ರಾಮ ಪಂಚಾಯತಿಯಲ್ಲಿ 5 ಮಂದಿ ಸದಸ್ಯರೇ ಗೈರು ಹಾಜರಾಗಿದ್ದರು.ಒಟ್ಟಾರೆಯಾಗಿ ಗ್ರಾಮ ಸಭೆ ಕಾಟಾಚಾರಕ್ಕೆ ನಡೆದಂತಿತ್ತು. ನೋಡಲ್ ಅಧಿಕಾರಿಯಾಗಿ ಆಗಮಿಸಿದ ವಿವೇಕಾನಂದ ಗಾಂವರ್ ರವರು ಮೂಕ ಪ್ರೇಕ್ಷಕರಾಗಿದ್ದರು. 

Leave a Reply

Your email address will not be published. Required fields are marked *