
ಇಂದು ಮಾನ್ಯ ಶಾಸಕರಾದ ಲಾಲಾಜಿ ಆರ್ ಮೆಂಡನ್ ರವರು ಕುರ್ಕಾಲು ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 3 ಕೋಟಿ 11 ಲಕ್ಷ ರೂಗಳ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರು ಕುರ್ಕಾಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 20 ಕಾಮಗಾರಿಗಳಿಗೆ ಗುದ್ದಲಿ ಪೂಜೆ ಹಾಗೂ ಲೋಕಾರ್ಪಣೆ ಮಾಡಲಾಗಿದ್ದು. ಈಗಾಗಲೇ ಪಂಚಾಯತ್ ವ್ಯಾಪ್ತಿಯಲ್ಲಿ ಹೆಚ್ಚಿನ ಮಟ್ಟದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದ್ದು. ಈಗಾಗಲೇ 65 ಕೋಟಿ ಅನುದಾನದಲ್ಲಿ ಕುರ್ಕಾಲು ಪಂಚಾಯತ್ ವ್ಯಾಪ್ತಿಯಲ್ಲಿ ಹೆಚ್ಚಿನ ರಸ್ತೆಗಳಿಗೆ ಹೊಸ ಕಾಯಕಲ್ಪ ನೀಡಲಾಗಿದ್ದು, ದೇವಸ್ಥಾನ – ದೈವಸ್ಥಾನಗಳಿಗೆ ಹೆಚ್ಚಿನ ಮೊತ್ತದ ಅನುದಾನ ಮಿಸಲಿರಿಸಿದೆ, ಈ ಭಾಗದ ಜನರ ಬಹು ಬೇಡಿಕೆಯ ಅಂಬಿಗುರಿ ರಸ್ತೆಗೆ 1.50 ಕೋಟಿ ರೂ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಲಾಗಿದ್ದು ಇನ್ನು ಹೆಚ್ಚಿನ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು ಈ ಸಂದರ್ಭದಲ್ಲಿ ಕುರ್ಕಾಲು ಗ್ರಾಮ ಪಂಚಾಯತ್ ಅಧ್ಯಕ್ಷರು & ಉಪಾಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯೋಗೀತಾ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ಗೀತಾಂಜಲಿ ಸುವರ್ಣ, ಕಟಪಾಡಿ ಮಹಾಶಕ್ತಿಕೇಂದ್ರ ಅಧ್ಯಕ್ಷರು ವಿಶ್ವನಾಥ್ ಕುರ್ಕಾಲು, ಕಾಪು ಮಂಡಲ ಬಿಜೆಪಿ ಕಾರ್ಯದರ್ಶಿ ಚಂದ್ರ ಮಲ್ಲಾರು, ಗ್ರಾಮ ಪಂಚಾಯತ್ ಸದಸ್ಯರಾದ ಪ್ರವೀಣ್ ಕುಮಾರ್, ಮಲ್ಲಿಕಾ, ಸರಿತಾ, ಸುದರ್ಶನ್ ರಾವ್ ಪಕ್ಷದಲ್ಲಿ ಅನನ್ಯ ಜವಾಬ್ದಾರಿ ನಿರ್ವಹಿಸುತ್ತಿರುವ ಪ್ರಮುಖರಾದ ಭುವನೇಶ್, ಗಿರಿಧರ್ ಐತಾಲ್, ಪರಶುರಾಮ ಭಟ್, ಗಣೇಶ್ ಕಾರಂತ್, ರಾಜೇಂದ್ರ ರಾವ್, ಸುನಂದಾ, ಶಾಂತಾ ಕುಳೆದು, ಪ್ರಮೋದ್, ಅಶೋಕ್ ಶೆಟ್ಟಿ, ನವೀನ್ ಭಟ್, ಪ್ರಮೀಳಾ ಕುರ್ಕಾಲು, ನಾರಾಯಣ ಶೆಟ್ಟಿ, ಪುಷ್ಪಲತಾ, ಪ್ರಕಾಶ್ ಶೆಟ್ಟಿ, ಸಂತೋಷ್ ವಿಠಲ ಭಟ್, ಅಶೋಕ್ ಪೂಜಾರಿ, ಕಮಲ ಭಟ್, ಅಭಿರಾಜ್ ಸುವರ್ಣ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರರು ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು
ಶಿಲಾನ್ಯಾಸಗೊಂಡ ಕಾಮಗಾರಿಗಳು
1. ಬಿಜಂಟ್ಲ ರಸ್ತೆ ಅಭಿವೃದ್ಧಿ 20 ಲಕ್ಷ 2. ಮೆನ್ನಲ ನಾರಾಯಣ ತಿಂಗಳಾಯ ಮನೆ ಬಳಿ ರಸ್ತೆ ಅಭಿವೃದ್ಧಿ 20 ಲಕ್ಷ
3. ಶಂಖ ತೀರ್ಥ ರಸ್ತೆ ಅಭಿವೃದ್ಧಿ 20 ಲಕ್ಷ
4. ಸುಭಾಷ್ ನಗರ ರಜತಗಿರಿ ರಸ್ತೆ ಅಭಿವೃದ್ಧಿ 20 ಲಕ್ಷ
5. ಅಂಬಡೆಪಾದೆ ಬರ್ಕನ್ ತೋಟ ರಸ್ತೆ ಅಭಿವೃದ್ಧಿ 10 ಲಕ್ಷ
6. ಬಿಜಂಟ್ಲ ಸ ಕಿ.ಪ್ರಾ ಶಾಲಾ ಕಟ್ಟಡ ದುರಸ್ತಿ ಹಾಗೂ ಶೌಚಾಲಯ ನಿರ್ಮಾಣ 6 ಲಕ್ಷ
7. ಪಾಜೈ ಕೊಟ್ಟೆಕೆರೆ ಬಳಿ ಕಾಲು ಸಂಕ 5 ಲಕ್ಷ
8. ಕುಂಜಾರುಗಿರಿ ತ್ರಿವಿಕ್ರಮ ದೇವಸ್ಥಾನ ಬಳಿ ಕಾಲು ಸಂಕ ರಚನೆ 5 ಲಕ್ಷ
9. ರಾಮಚಂದ್ರ ಮನೆ ಬಳಿ ರಸ್ತೆ ಅಭಿವೃದ್ಧಿ 5 ಲಕ್ಷ
10. ಪ.ಜಾತಿ ಮಾಧವ ಮನೆಯಿಂದ ಸುರೇಶ್ ಮನೆವರೆಗಿನ ರಸ್ತೆ ಅಭಿವೃದ್ಧಿ 3 ಲಕ್ಷ
11. ಕುಂಜಾರುಗಿರಿ ಅಶ್ವಥಕಟ್ಟೆ ಪ ಜಾತಿ ಕಾಲೋನಿಗೆ ದಾರಿ ದೀಪ 2.50 ಲಕ್ಷ
12. ಆರೋಗ್ಯ ಉಪ ಕೇಂದ್ರ ಕಟ್ಟಡ ದುರಸ್ತಿ 2 ಲಕ್ಷ
13. ಕುಳೇದು ಪ.ಪಂಗಡ ಕಾಲೋನಿಗೆ ದಾರಿ ದೀಪ ಅಳವಡಿಕೆ 2 ಲಕ್ಷ
14. ಸುಭಾಷ್ ನಗರ ಪ.ಜಾತಿ ಕಾಲೋನಿ ದಾರಿ ದೀಪ 1 ಲಕ್ಷ
15. ಅಂಬಿಗುರಿ ರಸ್ತೆ ಅಭಿವೃದ್ಧಿ 150 ಲಕ್ಷ
16. ಮುತ್ತು ನಿವಾಸ ರಸ್ತೆ ಅಭಿವೃದ್ಧಿ 15 ಲಕ್ಷ
17. ನಯನ ಐಸ್ ಕ್ರೀಮ್ ಬಳಿ ರಸ್ತೆ ಅಭಿವೃದ್ಧಿ 10 ಲಕ್ಷ
18. ಸಾನದ ಮನೆ ರಸ್ತೆ ಅಭಿವೃದ್ಧಿ 5 ಲಕ್ಷ
19. ಸುಮಾ ಶೆಟ್ಟಿ ಮನೆ ಬಳಿ ರಸ್ತೆ ಅಭಿವೃದ್ಧಿ 5 ಲಕ್ಷ
20. ತಂಬಾಡಗುಂದಿ ರಸ್ತೆ ಅಭಿವೃದ್ಧಿ 5 ಲಕ್ಷ

