
ಇಂದು ಮಾನ್ಯ ಶಾಸಕರಾದ ಲಾಲಾಜಿ ಆರ್ ಮೆಂಡನ್ ರವರು ಕೊಡಿಬೆಟ್ಟು ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 3.14 ಕೋಟಿ ರೂಗಳ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರು ಕೊಡಿಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 21 ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದ್ದು. ಬಿಜೆಪಿ ನೇತೃತ್ವದ ಕೊಡಿಬೆಟ್ಟು ಗ್ರಾಮ ಪಂಚಾಯತ್ ಉತ್ತಮವಾಗಿ ಜನರ ಆಶೋತ್ತರಗಳಿಗೆ ಸ್ಪಂದಿಸುತಿದ್ದು ಅವರುಗಳ ಅಪೇಕ್ಷೆ ಮೇರೆಗೆ ಈಗಾಗಲೇ ಸುಮಾರು 23 ಕೋಟಿ ಗಳ ಕಾಮಗಾರಿಗಳನ್ನು ನೀಡಲಾಗಿದ್ದು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ಪಂಚಾಯತ್ ವ್ಯಾಪ್ತಿಯು ಗ್ರಾಮೀಣ ಪ್ರದೇಶವನ್ನು ಒಳಗೊಂಡಿರುದರಿಂದ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಆಶಾಲತಾ ಶೆಟ್ಟಿ, ಉಪಾಧ್ಯಕ್ಷರು ಸದಾನಂದ ಪ್ರಭು, ಬೆಳ್ಳೆ ಗ್ರಾಮ ಪಂಚಾಯತ್ ಅಧ್ಯಕ್ಷರು ಸುಧಾಕರ್ ಪೂಜಾರಿ, ಕೊಡಿಬೆಟ್ಟು ಗ್ರಾಮ ಪಂಚಾಯತ್ ಸದಸ್ಯರಾದ ವಿನಯ ಕುಮಾರ್, ಯಶೋಧ, ಸಂದೀಪ್ ಕುಮಾರ್, ಇಂದಿರಾ, ವಸಂತಿ, ಸಂದೀಪ್ ಮಡಿವಾಳ, ಗಣಪತಿ ಪ್ರಭು, ವಿಜಯಲಕ್ಷ್ಮಿ, ರಾಮಾ ನಾಯ್ಕ್, ಅರುಣ್ ಶೆಟ್ಟಿ, ಎಡ್ನ ಲೋಬೊ, ಜಯಶ್ರೀ ಹಾಗೂ ಸ್ಥಳೀಯ ಮುಖಂಡರಾದ ಕಾಪು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಿಲ್ ಶೆಟ್ಟಿ, ರಾಜ್ ಕುಮಾರ್, ಗಣೇಶ್ ಕುಲಾಲ್, ಲಕ್ಷ್ಮಣ್ ಕುಲಾಲ್, ರಮೇಶ್ ನಾಯಕ್, ಮಂಜುನಾಥ್ ನಾಯ್ಕ್, ಹೆನ್ರಿ ಪರ್ನ0ಡಿಸ್, ವೈದ್ಯಾಧಿಕಾರಿ ರವೀಂದ್ರ ಬೋರ್ಕರ್, ಸುಂದರ್ ಪೂಜಾರಿ, ಭಾಸ್ಕರ್ ಶೆಟ್ಟಿ, ಶ್ರೀನಿವಾಸ ಪೂಜಾರಿ, ಭಾರತಿ ಶೆಟ್ಟಿ, ಕೃಷ್ಣ ಪೂಜಾರಿ, ಪ್ರಕಾಶ್ ಪುತ್ರನ್, ಸಂದೀಪ್ ಮಡಿವಾಳ, ಬೇಬಿ ಟೀಚರ್, ರಾಜೇಶ್, ರಾಮಕೃಷ್ಣ ಆಚಾರ್ಯ, ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಸೋಮನಾಥ್ ಹಾಗೂ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರರು ಸತೀಶ್ ಶೆಟ್ಟಿ ಬೈರಂಪಳ್ಳಿ ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು

