×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಅದಮಾರಿನ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯಲ್ಲಿ ವಾರ್ಷಿಕ ಕ್ರೀಡಾಕೂಟ

ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯಲ್ಲಿ ವಾರ್ಷಿಕ ಕ್ರೀಡಾಕೂಟ ಗುರುವಾರ ಬೆಳಿಗ್ಗೆ ಉದ್ಘಾಟನೆಗೊಂಡಿತು. ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಎರ್ಮಾಳು ಉದಯ ಕೆ ಶೆಟ್ಟಿ ಕ್ರೀಡಾ ಜ್ಯೋತಿಯನ್ನು ಬೆಳಗಿಸುವ ಮೂಲಕ ವಾರ್ಷಿಕ ಕ್ರೀಡಾ ಕೂಟಕ್ಕೆ ಚಾಲನೆ ನೀಡಿದರು. ಈ ಸಂರ‍್ಭ ಎರ್ಮಾಳು ಉದಯ ಕೆ ಶೆಟ್ಟಿಯವರು ಮಾತನಾಡಿ ‘ಕ್ರೀಡೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಭಾಗವಹಿಸಬೇಕು. ಅದು ವಿದ್ಯಾಭ್ಯಾಸಕ್ಕೆ ಪೂರಕವೇ ಹೊರತು ಮಾರಕವಲ್ಲ’ ಎಂದರು. ಪಿಪಿಸಿ ಸಂಸ್ಥೆಯ ಕೋಶಾಧಿಕಾರಿ ಗಣೇಶ್ ಹೆಬ್ಬಾರ್‌ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ರಾಮಕೃಷ್ಣ ಪೈ, ಆದರ್ಶ ಯುವಕ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಬರ್ಪಾಣಿ, ಶ್ರೀಕಾಂತ್ ರಾವ್, ಶ್ರೀಮತಿ ಲಕ್ಷಿö್ಮÃ ನಾಯಕ್, ಶ್ರೀಮತಿ ನಿಶ್ಮಿತಾ ಶೆಟ್ಟಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಸಂಜೀವ ನಾಯ್ಕ್ ಸ್ವಾಗತಿಸಿದರು. ಶ್ರೀಮತಿ ಪ್ರತಿಮಾ ಭಟ್ ನಿರೂಪಿಸಿದರು. ದೈಹಿಕ ಶಿಕ್ಷಣ ಉಪನ್ಯಾಸಕರಾದ ಚಂದ್ರ ಶೇಖರ್ ಶೆಟ್ಟಿ ವಂದಿಸಿದರು. ಶಾಂತಿ, ಸ್ಫೂರ್ತಿ, ಕೀರ್ತಿ, ಕಾಂತಿಗಳೆAಬ ನಾಲ್ಕು ವಿಭಾಗಗಳ ಮೂಲಕ ಆಕರ್ಷಕ ಪಥಸಂಚಲನ ಸಭಾಕಾರ್ಯಕ್ರಮದ ಮೊದಲಿಗೆ ನಡೆಯಿತು. ವಿಜೇತರಿಗೆ ಪದಕಗಳನ್ನು ನೀಡಲಾಯಿತು. 

video link

 

https://youtu.be/4sFjehCZtjQ

Leave a Reply

Your email address will not be published. Required fields are marked *