
1992 ರಲ್ಲಿ ಸ್ಥಾಪನೆಯಾದ ಕಾಪುವಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ನವಂಬರ್ 18 ಮತ್ತು ನವಂಬರ್ 19ರಂದು ರಾಷ್ಟ್ರೀಯ ಮೌಲ್ಯಮಾಪನ ಹಾಗೂ ಮೌಲ್ಯಂಕನ ಮಂಡಳಿ ಭೇಟಿ ನೀಡಲಿದ್ದು, ಕಾಲೇಜಿನ ನಿರಂತರ ಗುಣಮಟ್ಟ ಮೌಲ್ಯಮಾಪನದ ಕಾರ್ಯ ಯೋಜನೆಯಲ್ಲಿ ಇದೊಂದು ಮಹತ್ವದ ಬೆಳವಣಿಗೆ ಎಂದು ಕಾಲೇಜ್ ಪ್ರಾಂಶುಪಾಲ ಸ್ಟೀವನ್ ಕ್ವಾಡ್ರಸ್ ಹೇಳಿದ್ದಾರೆ. ಅವರು ಬುಧವಾರ ಬೆಳಗ್ಗೆ ಕಾಪು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.ನವಂಬರ್ 21ರಂದು 2002/ 23ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಕಾಲೇಜು ಪ್ರಾರಂಭವಾಗಿ ೩೦ವರ್ಷ ಆದ ಹಿನ್ನೆಲೆಯಲ್ಲಿ ಮುತ್ತಿನ ವರ್ಷಚರಣೆ ಹಾಗೂ ಹೊಸ ಕಟ್ಟಡ “ಮುತ್ತು” ವಿಗೆ ಶಿಲಾನ್ಯಾಸ ನೆರವೇರಲಿದೆ ಎಂದು ಸ್ಟೀವನ್ ಕ್ವಾಡ್ರಸ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಉಪನ್ಯಾಸಕಿಯರಾದ ಸಂಧ್ಯಾ ಎಂ, ರೊಶ್ನಿ ಯಶ್ವಂತ್, ಕಾಲೇಜ್ ವಿದ್ಯಾರ್ಥಿ ಮುಖಂಡ ಗೌರವ್, ಕಾಲೇಜ್ ಅಭಿವೃದ್ಧಿ ಸಮಿತಿಯ ಸದಸ್ಯರಾದ ಅನಿಲ್ ಕುಮಾರ್ ಮತ್ತು ನಾಗೇಶ್ ಕಾಪು ಉಪಸ್ಥಿತರಿದ್ದರು.

