×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಮೂರು ಮಾರ್ಗ – ಅನೆಕೆರೆ ರಸ್ತೆ ದುರಸ್ತಿ ವಿಳಂಬ ಸಚಿವರ ನಿರ್ಲಕ್ಷದಿಂದ ಇಲಾಖೆಗಳ ಹೊಂದಾಣಿಕೆ ಕೊರತೆ ಮತ್ತೊಮ್ಮೆ ಪ್ರತಿಭಟನೆಗೆ ಸಿದ್ದತೆ ಶುಭದರಾವ್ ‌ಎಚ್ಚರಿಕೆ

ಮೂರು ಮಾರ್ಗ ಅನೆಕೆರೆ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ರಸ್ತೆಯೆಲ್ಲಾ ದೂಳಿನಿಂದ ಕೂಡಿದೆ ಇದರ ಪರಿಣಾಮವಾಗಿ ರಸ್ತೆಗೆ ನೀರು ಹಾಯಿಸುವುದೇ ವ್ಯಾಪಾರಸ್ತರ ಪ್ರತಿನಿತ್ಯದ ಕೆಲಸವಾಗಿದೆ, ಸಚಿವರು ಈ ಬಗ್ಗೆ ನಿರ್ಲಕ್ಷವಹಿಸಿದ್ದು ಮತ್ತೊಮ್ಮೆ ಪ್ರತಿಭಟನೆ ಅನಿವಾರ್ಯವಾಗಿದೆ ಎಂದು ಕಾಂಗ್ರೇಸ್ ವಕ್ತಾರ ಪುರಸಭಾ ಸದಸ್ಯ ಶುಭದರಾವ್ ಎಚ್ಚರಿಕೆ ನೀಡಿದ್ದಾರೆ. ಈ ರಸ್ತೆ ದುರಸ್ತಿಯ ಬಗ್ಗೆ ಪುರಸಭೆಯನ್ನು ಕೇಳಿದರೆ ಲೋಕೋಪಯೋಗಿ ಇಲಾಖೆ ಹೊಣೆ ಎನ್ನುತಾರೆ ಲೋಕೋಪಯೋಗಿ ಇಲಾಖೆಯನ್ನು ಕೇಳಿದರೆ ಟೆಂಡರ್ ಆಗಿದೆ ಏತ ನಿರಾವರಿ ಯೋಜನೆಯ ಪೈಪ್ ಲೈನ್ ಕೆಲಸವಾಗದೆ ಡಾಮರೀಕರಣ ಅಸಾದ್ಯವೆನ್ನುತ್ತಾರೆ ನೀರಾವರಿ ಇಲಾಖೆಯವರನ್ನು ಕೇಳಿದರೆ ಪೈಪ್ ಲೈನ್ ಎಲ್ಲಿಂದ ಹೋಗಬೇಕು ಎಂದು ಇನ್ನೂ ಅಂತಿಮ ಆಗಿಲ್ಲ ಎನ್ನುತಾರೆ, ಇಲಾಖೆಗಳ ನಡುವೆಯೇ ಹೊಂದಾಣಿಕೆಯ ಕೊರತೆ ಇದೆ ಯಾರ ಬಳಿಯೂ ಸಮರ್ಪಕ ಉತ್ತರವಿಲ್ಲ ಈ ಮದ್ದೆ ಜವಾಬ್ದಾರಿ ಸ್ಥಾನದಲ್ಲಿರುವ ಸಚಿವರು ಮೌನವಾಗಿದ್ದಾರೆ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಶೀಘ್ರ ಕಾಮಗಾರಿಗೆ ಸೂಚಿಸುವುದು ಅವರ ಜವಾಬ್ದಾರಿಯಲ್ಲವೇ? ಇಲ್ಲವಾದರೆ ಜನರ ನೋವಿಗೆ ಸ್ಪಂದಿಸುವವರು ಯಾರು? ಎಂದು ಪ್ರಶ್ನಿಸಿದ್ದಾರೆ. ಒಂದು ವೇಳೆ ನೀರಾವರಿ ಇಲಾಖೆಯ ಪೈಪ್ ಲೈನ್ ಕಾಮಗಾರಿ ಕೆಲಸ ಇದ್ದರೂ ಅವರು ಇಷ್ಟು ದಿನ ಏನು ಮಾಡುತಿದ್ದರು? ಇದಕ್ಕೆ ಸಚಿವರ ನಿರ್ಲಕ್ಷವೇ ಕಾರಣವಲ್ಲವೇ? ಈ ಹಿಂದೆ ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ ನಡೆದಾಗ ಹೇಳಿಕೆಗಳನ್ನು ನೀಡಿ ಪ್ರತಿಭಟನಾಕಾರರನ್ನು ಅವಮಾನಿಸುತ್ತಿದ್ದ ಬಿಜೆಪಿ ನಾಯಕರು ಕಾಣೆಯಾಗಿದ್ದಾರೆ ಅವರಿಗೆ ಜನರು ಸಂಕಷ್ಟ ಕಾಣುದಿಲ್ಲವೇ? ಸಚಿವರು ತಕ್ಷಣ ಈ ಬಗ್ಗೆ ಕ್ರಮ ಜರುಗಿಸಬೇಕು ಇಲ್ಲವಾದರೆ ಮತ್ತೊಮ್ಮೆ ಪ್ರತಿಭಟನೆ ಅನಿವಾರ್ಯವಾದಿತು ಎಂದು ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *