×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಪಡುಬಿದ್ರಿ ಸೊಸೈಟಿಯ ಆಶ್ರಯದಲ್ಲಿ ನ.14 ರಿಂದ 20 ರವರೆಗೆ ಸಹಕಾರಿ ಸಪ್ತಾಹ –

69” ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಜಿಲ್ಲೆಯಲ್ಲಿಯೇ
ಪ್ರಪ್ರಥಮ ಬಾರಿಗೆ ಪಡುಬಿದ್ರಿ ಸಹಕಾರಿ ವ್ಯವಸಾಯ್ತಿಕ ಸೊಸೈಟಿಯು ಸಪ್ತಾಹದ 7 ದಿನಗಳಲ್ಲೂ
ವಿವಿಧ ಕಾರ್ಯಕ್ರಮಗಳನ್ನು ಅಯೋಜಿಸುವ ಮೂಲಕ ಸಹಕಾರ ಸಪ್ತಾಹವನ್ನು ವಿಶಿಷ್ಟ ರೀತಿಯಲ್ಲಿ
ಆಚರಿಸಲು ನಿರ್ಧರಿಸಿದೆ ಎಂದು ಶುಕ್ರವಾರ ಸಂಘದ ಕಚೇರಿಯ ಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಡುಬಿದ್ರಿ ವ್ಯಾವಸಾಯಿಕ ಸಂಘದ ಅಧ್ಯಕ್ಷ ವೈ.ಸುಧೀರ್ ಕುಮಾರ್ ಮಾಹಿತಿ ನೀಡಿದರು.
ದಿನಾಂಕ: 14.11.2022ರ ಸೋಮವಾರ ಅಪರಾಹ್ನ 3:00 ಗಂಟೆಗೆ “69” ನೇ ಅಖಿಲ ಭಾರತ
ಸಹಕಾರ ಸಪ್ತಾಹ ಉದ್ಘಾಟನಾ ಕಾರ್ಯಕ್ರಮ, ರೈತರ ಸಮಾವೇಶ ಹಾಗೂ ರೈತರಿಂದ ಡಾ| ಎಮ್.
ಎನ್. ರಾಜೇಂದ್ರ ಕುಮಾರ್ ಅವರಿಗೆ ಸನ್ಮಾನ, ಕೃಷಿ ಸಹಾಯಧನ ವಿತರಣೆ, ಶೀತಲೀಕರಣ ಶವ
ಪೆಟ್ಟಿಗೆ ಸಾರ್ವಜನಿಕ ಉಪಯೋಗಕ್ಕೆ ಹಸ್ತಾಂತರವು ವೈ. ಲಕ್ಷ್ಮಣ ಸಭಾಂಗಣ, ಸಹಕಾರ ಸಂಗಮ,
ಪಡುಬಿದ್ರಿ ಇಲ್ಲಿ ಏರ್ಪಡಿಸಲಾಗಿದೆ.. “69” ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟನಾ
ಕಾರ್ಯಕ್ರಮವನ್ನು ಡಾ| ಎಮ್. ಎನ್. ರಾಜೇಂದ್ರ ಕುಮಾರ್‌, ಅಧ್ಯಕ್ಷರು, ಕರ್ನಾಟಕ ರಾಜ್ಯ ಸಹಕಾರ
ಮಾರಾಟ ಮಹಾ ಮಂಡಳ ನಿ. ಬೆಂಗಳೂರು. ಅಧ್ಯಕ್ಷರು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.
ಮಂಗಳೂರು ಇವರು ಉದ್ಘಾಟಿಸಲಿದ್ದು, ಶ್ರೀ ವೈ ಸುಧೀರ್‌ ಕುಮಾರ್‌ ಅಧ್ಯಕ್ಷರು ಪಡುಬಿದ್ರಿ ಸಹಕಾರಿ
ವ್ಯವಸಾಯಿಕ ಸೊಸೈಟಿ (ನಿ.) ಇವರು ಅಧ್ಯಕ್ಷತೆ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಸನ್ಮಾನ್ಯ ಶ್ರೀ
ವಿನಯ್‌ ಕುಮಾರ್‌ ಸೊರಕೆ, ಮಾಜಿ ಸಚಿವರು, ಕರ್ನಾಟಕ ಸರಕಾರ, ಶ್ರೀ ಬಿ. ಜಯಕರ ಶೆಟ್ಟಿ
ಇಂದ್ರಾಳಿ, ಅಧ್ಯಕ್ಷರು, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿ., ನಿರ್ದೆಶಕರು, ಕರ್ನಾಟಕ ರಾಜ್ಯ
ಸಹಕಾರ ಮಹಾಮಂಡಳ ನಿ. ಬೆಂಗಳೂರು, ಶ್ರೀ ಲಕ್ಷ್ಮೀನಾರಾಯಣ ಜಿ. ಎನ್., ಸಹಕಾರ ಸಂಘಗಳ
ಉಪನಿಬಂಧಕರು, ಉಡುಪಿ ಜಿಲ್ಲೆ, ಶ್ರೀಮತಿ ಲಾವಣ್ಯ ಕೆ. ಆರ್., ಸಹಕಾರ ಸಂಘಗಳ ಸಹಾಯಕ
ನಿಬಂಧಕರು, ಕುಂದಾಪುರ ಉಪ ವಿಭಾಗ, ಶ್ರೀ ರಾಮಕೃಷ್ಣ ಬಂಟಕಲ್, ಅಧ್ಯಕ್ಷರು, ಉಡುಪಿ ಜಿಲ್ಲಾ
ಕೃಷಿಕ ಸಂಘ ಇವರು ಉಪಸ್ಥಿತರಿರುವರು. ಹಾಗೂ ಡಾ| ಐ. ದೇವಿ ಪ್ರಸಾದ್ ಶೆಟ್ಟಿ, ನಿರ್ದೆಶಕರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ. ಬೆಂಗಳೂರು, ನಿರ್ದೇಶಕರು ದ. ಕ.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಮಂಗಳೂರು, ಶ್ರೀ ಮಂಜುನಾಥ್ ಎಸ್. ಕೆ. ನಿರ್ದೇಶಕರು,
ರಾಜ್ಯ ಸಹಕಾರ ಸೌಹಾರ್ದ ಮಹಾಮಂಡಳ ನಿ., ಬೆಂಗಳೂರು, ಶ್ರೀ ಗಿರೀಶ್ ಪಲಿಮಾರ್, ಉಡುಪಿ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ನಿರ್ದೇಶಕರು, ಪಡುಬಿದ್ರಿ ಸಹಕಾರಿ ವ್ಯವಸಾಯಿಕ
ಸೊಸೈಟಿ. ನಿ., ಶ್ರೀ ಎ. ರಾಮಚಂದ್ರ ಆಚಾರ್ಯ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು
ವರದಿಗಾರರು, ಉದಯವಾಣಿ ದಿನ ಪತ್ರಿಕೆ. ಇವರು ಗೌರವ ಅಭಿನಂದನೆಯನ್ನು ಪಡೆಯಲಿರುವರು.
ದಿನಾಂಕ : 15.11.2022ನೇ ಮಂಗಳವಾರ ಪೂರ್ವಾಹ್ನ 11:00 ಗಂಟೆಗೆ “ಸಹಕಾರ ಮಾರುಕಟ್ಟೆ,
ಗ್ರಾಹಕ, ರೂಪಾಂತರ ಮತ್ತು ಮೌಲ್ಯವರ್ಧನೆ” ದಿನದ ಕಾರ್ಯಕ್ರಮವನ್ನು ಶ್ರೀ ಬಿ. ಜಯಕರ ಶೆಟ್ಟಿ
ಇಂದ್ರಾಳಿ ಅಧ್ಯಕ್ಷರು, ಜಿಲ್ಲಾ ಸಹಕಾರಿ ಯೂನಿಯನ್ ನಿ ಉಡುಪಿ, ನಿರ್ದೇಶಕರು, ಕರ್ನಾಟಕ ರಾಜ್ಯ
ಸಹಕಾರ ಮಹಾಮಂಡಳ ನಿ., ಬೆಂಗಳೂರು ಇವರು ಉದ್ಘಾಟಿಸಲಿದ್ದು, ಶ್ರೀ ವೈ ಸುಧೀರ್ ಕುಮಾರ್
ಅಧ್ಯಕ್ಷರು ಪಡುಬಿದ್ರಿ ವ್ಯವಸಾಯ ಸೇವಾ ಸಹಕಾರ ಸಂಘ ನಿ., ಇವರು ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶ್ರೀ ಯಶ್‌ಪಾಲ್ ಸುವರ್ಣ, ಅಧ್ಯಕ್ಷರು ಮಹಾಲಕ್ಷ್ಮೀ ಕೋ-ಆಪರೇಟಿವ್
ಬ್ಯಾಂಕ್‌, ಉಡುಪಿ, ಅಧ್ಯಕ್ಷರು, ದ.ಕ. ಹಾಗೂ ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಷನ್ ನಿ.,
ಮಂಗಳೂರು, ನಿರ್ದೇಶಕರು ಜಿಲ್ಲಾ ಸಹಕಾರಿ ಯೂನಿಯನ್ ನಿ ಉಡುಪಿ, ಶ್ರೀ ಲಕ್ಷ್ಮೀನಾರಾಯಣ
ಜಿ.ಎನ್, ಸಹಕಾರ ಸಂಘಗಳ ಉಪನಿಬಂಧಕರು ಉಡುಪಿ ಜಿಲ್ಲೆ, ಶ್ರೀಮತಿ ಲಾವಣ್ಯ ಕೆ. ಆರ್.,
ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಕುಂದಾಪುರ
ವಿಭಾಗ, ದಿಕೂಚಿ
ಭಾಷಣಗಾರರಾಗಿ ಡಾ| ಗಣನಾಥ ಎಕ್ಕಾರು, ನಿವೃತ್ತ ಪ್ರೊಫೆಸರ್, ಜಾನಪದ ವಿದ್ವಾಂಸರು, ಇವರು
ಉಪಸ್ಥಿತರಿರುವರು. ಈ ಕಾರ್ಯಕ್ರಮವನ್ನು ವೈ. ಲಕ್ಷ್ಮಣ ಸಭಾಂಗಣ, ಸಹಕಾರ ಸಂಗಮ, ಪಡುಬಿದ್ರಿ
ಇಲ್ಲಿ ಏರ್ಪಡಿಸಲಾಗಿದೆ.
ದಿನಾಂಕ: 16.11.2022ನೇ ಬುಧವಾರ ಅಪರಾಹ್ನ 4:00 ಗಂಟೆಗೆ ಪಡುಬಿದ್ರಿ ಆರಕ್ಷಕರ ಠಾಣೆಗೆ
ಧ್ವನಿವರ್ಧಕ ಹಾಗೂ ಸಂಚಾರ ನಿರ್ವಹಣೆ ಬೂತ್ ಅನ್ನು ಶ್ರೀ ಬಿ. ಜಯಕರ ಶೆಟ್ಟಿ ಇಂದ್ರಾಳಿ,
ಅಧ್ಯಕ್ಷರು, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿ., ನಿರ್ದೇಶಕರು, ಕರ್ನಾಟಕ ರಾಜ್ಯ ಸಹಕಾರ
ಮಹಾಮಂಡಳ ನಿ. ಬೆಂಗಳೂರು, ಹಸ್ತಾಂತರಿಸಲ್ಲಿದ್ದು, ಶ್ರೀ ವೈ ಸುಧೀರ್ ಕುಮಾರ್‌ ಅಧ್ಯಕ್ಷರು
ಪಡುಬಿದ್ರಿ ವ್ಯವಸಾಯ ಸೇವಾ ಸಹಕಾರ ಸಂಘ ನಿ., ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ
ಅತಿಥಿಗಳಾಗಿ ಶ್ರೀ ಪೂವಯ್ಯ ಕೆ.ಸಿ., ವೃತ್ತ ನಿರೀಕ್ಷಕರು, ಕಾಪು, ಶ್ರೀ ಪುರುಷೋತ್ತಮ್, ಠಾಣಾಧಿಕಾರಿ,
ಪಡುಬಿದ್ರಿ ಆರಕ್ಷಕ ಠಾಣೆ ಇವರು ಉಪಸ್ಥಿತರಿರುವರು. ದಿನಾಂಕ:
17.11.2022ನೇ ಗುರುವಾರ ಪೂರ್ವಾಹ್ನ 11:00 ಗಂಟೆಗೆ ಪಡುಬಿದ್ರಿ ಸಹಕಾರಿ
ವ್ಯವಸಾಯಿಕ ಸೊಸೈಟಿ ನಿ. ಪಡುಬಿದ್ರಿ ಹಾಗೂ ಪ್ರಜಾವಾಣಿ ಹಾಗೂ ಡೆಕ್ಕನ್ ಹೆರಾಲ್ಡ್ ವಾರ್ತಾ
ದಿನಪತ್ರಿಕೆ ಸಹಯೋಗದೊಂದಿಗೆ “ಮಾಸ್ಟರ್ ಮೈಂಡ್”, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಸೂಕ್ತ
ಡಿಜಿಟಲ್ ಕೈಪಿಡಿ ಯೋಜನೆಯನ್ನು ಶ್ರೀ ಶ್ರೀನಿವಾಸ ಮೂರ್ತಿ ಕುಲಕರ್ಣಿ, ತಹಶೀಲ್ದಾರರು, ಕಾಪು
ತಾಲೂಕು ಕಚೇರಿ ಇವರು ಉದ್ಘಾಟಿಸಲಿದ್ದು, ಶ್ರೀ ವೈ ಸುಧೀರ್ ಕುಮಾರ್ ಅಧ್ಯಕ್ಷರು ಪಡುಬಿದ್ರಿ
ವ್ಯವಸಾಯ ಸೇವಾ ಸಹಕಾರ ಸಂಘ ನಿ., ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ
ಶ್ರೀ ಸುಕುಮಾರ್ ಶ್ರೀಯಾನ್, ಸಂಚಾಲಕರು, ಸಾಗರ ವಿದ್ಯಾಮಂದಿರ ರಿ., ಪಡುಬಿದ್ರಿ, ಶ್ರೀ ಶರತ್
ಶೆಟ್ಟಿ, ಅಧ್ಯಕ್ಷರು, ಜೆ.ಸಿ.ಐ ಪಡುಬಿದ್ರಿ ಇವರು ಉಪಸ್ಥಿತರಿರುವರು.
ದಿನಾಂಕ: 18.11.2022ನೇ ಶುಕ್ರವಾರ “ಉದ್ಯಮಶೀಲತೆ ಅಭಿವೃದ್ಧಿ, ಸಾರ್ವಜನಿಕ ಖಾಸಗಿ- ಸಹಕಾರಿ
ಸಹಭಾಗಿತ್ವವನ್ನು ಬಲಗೊಳಿಸುವುದು” ದಿನದ ಸಹಕಾರ ರಾಜ್ಯ ಮಟ್ಟದ ಸಪ್ತಾಹದ
ಕಾರ್ಯಕ್ರಮವನ್ನು ಈ ಬಾರಿ ಮಂಗಳೂರಿನ ಮಂಗಳ ಕ್ರೀಡಾಂಗಣ, ಮಂಗಳೂರು ಇಲ್ಲಿ ಸಹಕಾರ
ಸಚಿವರು, ಜಿಲ್ಲೆಯ ಶಾಸಕರು, ಗಣ್ಯ ಸಹಕಾರಿಗಳ ಉಪಸ್ಥಿತಿಯಲ್ಲಿ ಪೂರ್ವಾಹ್ನ 10:00ಕ್ಕೆ
ನಡೆಯಲಿರುವುದು, ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದು
ದಿನಾಂಕ: 19.11.2022ನೇ ಶನಿವಾರ ಪೂರ್ವಾಹ್ನ 10:00 ಗಂಟೆಗೆ ಪಡುಬಿದ್ರಿ ಸಹಕಾರಿ ವ್ಯವಸಾಯಿಕ
ಸೊಸೈಟಿ ನಿ. ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಪಡುಬಿದ್ರಿ ಹಳೇ ವಿದ್ಯಾರ್ಥಿ ಸಂಘ, ಗಣಪತಿ
ಪ್ರೌಢಶಾಲೆ, ಪಡುಬಿದ್ರಿ ಇವರ ಜಂಟಿ ಆಶ್ರಯದಲ್ಲಿ ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ
ನೀಡಿದ ಶೀತಲೀಕೃತ ಶವಗಾರ ಉದ್ಘಾಟನೆ, ವೈದ್ಯಕೀಯ ಶಿಬಿರ ಕಾರ್ಯಕ್ರಮವನ್ನು ಶ್ರೀ ಲಾಲಾಜಿ
ಆರ್. ಮೆಂಡನ್, ಶಾಸಕರು, ಕಾಪು ಕ್ಷೇತ್ರ ಇವರು ಉದ್ಘಾಟಿಸಲಿದ್ದು, ಶ್ರೀ ವೈ ಸುಧೀರ್ ಕುಮಾರ್
ಅಧ್ಯಕ್ಷರು ಪಡುಬಿದ್ರಿ ವ್ಯವಸಾಯ ಸೇವಾ ಸಹಕಾರ ಸಂಘ ನಿ., ಇವರು ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಡಾ. ನಾಗಭೂಷಣ ಉಡುಪ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ, ಉಡುಪಿ,
ಡಾ. ವಾಸುದೇವ್ ಉಪಾಧ್ಯಾಯ, ತಾಲೂಕು ವೈದ್ಯಾಧಿಕಾರಿ, ಉಡುಪಿ, ಶ್ರೀ ಬಿ. ಜಯಕರ ಶೆಟ್ಟಿ
ಇಂದ್ರಾಳಿ, ಅಧ್ಯಕ್ಷರು, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿ., ನಿರ್ದೇಶಕರು, ಕರ್ನಾಟಕ ರಾಜ್ಯ
ಸಹಕಾರ ಮಹಾಮಂಡಳ ನಿ. ಬೆಂಗಳೂರು, ಶ್ರೀ ಕೆ. ವಿನಾಯಕ ರಾವ್, ಅಧ್ಯಕ್ಷರು, ಸೇವಾಭಾರತಿ
ರಿ., ಬೆಳ್ತಂಗಡಿ ತಾಲೂಕು ಹಾಗೂ ಗೌರವ ಉಪಸ್ಥಿತಿಯಲ್ಲಿ ಶ್ರೀ ರವಿ ಶೆಟ್ಟಿ, ಅಧ್ಯಕ್ಷರು, ಪಡುಬಿದ್ರಿ
ಗ್ರಾಮ ಪಂಚಾಯತ್, ಶ್ರೀ ಪಾಂಡುರಂಗ ಸಿ. ಕರ್ಕೇರ, ಅಧ್ಯಕ್ಷರು, ಹೆಜಮಾಡಿ ಗ್ರಾಮ ಪಂಚಾಯತ್, ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷೆ
ಶ್ರೀಮತಿ ಗಾಯತ್ರಿ ಪ್ರಭು, ಅಧ್ಯಕ್ಷರು ಎರ್ಮಾಳು ತೆಂಕ ಗ್ರಾಮ ಪಂಚಾಯತ್ ಇವರು
ಉಪಸ್ಥಿತರಿರುವರು.
ದಿನಾಂಕ: 20.11.2022 ರಂದು ಸಹಕಾರ ಸಪ್ತಾಹದ ಸಮಾರೋಪದ ಕಾರ್ಯಕ್ರಮವು ಜರಗಲಿರುವುದು ಎಂದು ಮಾಹಿತಿ ನೀಡಿದರು.
ಪತ್ರಿಕಾ ಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ವೈ ಸುಧೀರ್ , ಕಾರ್ಯ ನಿರ್ವಹಣಾಧಿಕಾರಿ ಸುಶ್ಮಿತಾ ಟಿಹೆಚ್, ಸದಸ್ಯ ಗಿರೀಶ್ ಪಲಿಮಾರ್, ಶಿವರಾಮ್ ಶೆಟ್ಟಿ , ಸುರಚಿತ, ಬಾಲಕೃಷ್ಣರಾವ್ , ಪ್ರಮೋದ್ ಚಂದ್ರ ಮೊದಲಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *