×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಸುರತ್ಕಲ್ ಟೋಲ್ ತೆರವು ವಿಳಂಭ ನೀತಿ ಖಂಡಿಸಿ ಕಾಪು ಪೇಟೆಯಲ್ಲಿ ಕಾಂಗ್ರೆಸ್ ಧರಣಿ ಪ್ರತಿಭಟನೆ

ಕಾಪು, ಸುರತ್ಕಲ್ ಟೋಲ್ ಗೇಟ್ ತೆರವುಗೊಳಿಸಲು ವಿಳಂಭ ನೀತಿ ಅನುಸರಿಸುವಿಕೆ, ಭವಿಷ್ಯದಲ್ಲಿ ಸರತ್ಕಲ್ ಟೋಲ್‌ನ್ನು ಹೆಜಮಾಡಿ ಟೋಲ್‌ಗೇಟ್‌ನ ಜೊತೆಗೆ ವಿಲೀನಗೊಳಿಸಿ ದರ ಏರಿಸುವ ಸಾಧ್ಯತೆಯನ್ನು ವಿರೋಧಿಸಿ ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರ ನೇತೃತ್ವದಲ್ಲಿ ಕಾಪು ಪೇಟೆಯಲ್ಲಿ ಧರಣಿ ಸತ್ಯಾಗ್ರಹ ನಡೆಯಿತು ಈ ಸಂದರ್ಭದಲ್ಲಿ ಮಾತಾಡಿದ ಮುನೀರ್ ಕಾಟಿಪಳ್ಳ ಟೋಲ್ ಗೇಟ್ ಹೊರಟಕ್ಕೆ ಆರಂಭದಿಂದಲೂ ಕಾಪು ಕ್ಷೇತ್ರದಿಂದ ಹೆಚ್ಚಿನ ಬಲವನ್ನು ತುಂಬಿದೆ ಹೆಜಮಾಡಿ ಟೋಲ್ ಗೇಟ್ ನಲ್ಲಿ ಕೂಡ ದೌರ್ಜನ್ಯ ನಡಿತಾಇದೆ ಎಂದು ತಿಳಿಸಿದರು ಸುರತ್ಕಲ್‌ನಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿರುವ ಟೋಲ್ ಗೇಟ್‌ನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಈಗಾಗಲೇ ಪ್ರತಿಭಟನೆ, ಧರಣಿ ನಡೆಸಲಾಗಿದ್ದು ಸರಕಾರ ಇನ್ನೂ ಎಚ್ಚೆತ್ತುಕೊಂಡಿಲ್ಲ. ಟೋಲ್ ತೆರವುಗೊಳಿಸುವುದಾಗಿ ಭರವಸೆ ನೀಡಿದ್ದರೂ ಇನ್ನೂ ತೆರವಾಗಿಲ್ಲ. ಮುಂದೆ ಸುರತ್ಕಲ್ ಟೋಲ್ ಹೆಜಮಾಡಿ ಟೋಲ್ ಜತೆ ವಿಲೀನಗೊಂಡರೆ ಅದರಿಂದ ವಾಹನ ಸವಾರರಿಗೆ ತೀವ್ರ ಬರೆ ಬೀಳಲಿದೆ. ಹೆಜಮಾಡಿ ಟೋಲ್‌ನ ಸುತ್ತಮುತ್ತಲಿನ ವ್ಯಾಪ್ತಿಗೆ ಬರುವ 5-7 ಕಿ.ಮೀ. ವ್ಯಾಪ್ತಿಯ ಜನರಿಗೆ ಉಚಿತ ಪಾಸ್ ನೀಡುವ ಬಗ್ಗೆ ನೀಡಿರುವ ಮನವಿಗೂ ಯಾವುದೇ ಪುರಸ್ಕಾರ ದೊರಕಿಲ್ಲ ಎಂದು ತಿಳಿಸಿದರು  ಧರಣಿಯಲ್ಲಿ ವಿನಯ್ ಕುಮಾರ್ ಸೊರಕೆ  ಅಶೋಕ್ ಕುಮಾರ್ ಕೊಡವುರು ಶೇಖಬ್ಬ ಉಚ್ಚಿಲ ವಿನಯ್ ಬಲ್ಲಾಳ್  ಗಣೇಶ್ ಕೋಟ್ಯಾನ್,ಪ್ರಶಾಂತ್ ಜತ್ತನ್ನ ನವೀನ್ ಶೆಟ್ಟಿ ಪಡುಬಿದ್ರಿ  ಶೇಖರ್ ಹೆಜಮಾಡಿ ನಾಗೇಶ್ ಉದ್ಯಾವರ ಕಿಶೋರ್ ಎರ್ಮಾಳ್ ರಮೀಝ್ ಹುಸೇನ್, ಶರ್ಫುದ್ದೀನ್, ಅಮೀರ್ ಕಾಪು ಶಾಂತಲಾ ಶೆಟ್ಟಿ ಪ್ರಭಾ ಶೆಟ್ಟಿ  ಜ್ಯೋತಿ ಮೆನನ್ ಸತೀಶ್ ದೇಜಡಿ ಕೇಶವ ಪಲಿಮಾರು ಉಸ್ಮಾನ್ ಕಾಪು      ನಾಗರಿಕರು, ಪಕ್ಷದ ಪದಾಽಕಾರಿಗಳು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿದರು

Leave a Reply

Your email address will not be published. Required fields are marked *