
ತುರುವೇಕೆರೆ ಯಲ್ಲಿ ನಡೆದ ಕಾಂಗ್ರೆಸ್ ನ ಭಾರತ್ ಜೋಡೊ ಯಾತ್ರೆಯಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಬ್ಲಾಕ್ ಕಾಂಗ್ರೆಸ್ ನ ಸಾವಿರಾರು ಕಾರ್ಯಕರ್ತರು ಭಾಗವಹಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ್ದರು 30 ದಿನಗಳು, 720 ಗಂಟೆಗಳು 700+ ಕಿಲೋಮೀಟರ್, 3 ರಾಜ್ಯಗಳು ಲಕ್ಷಾಂತರ ಜನರು.. ಕೋಟ್ಯಂತರ ಹೆಜ್ಜೆಗಳು.. ಲೆಕ್ಕಕ್ಕೆ ಸಿಗದ ಜನ ಮನಗಳು.. ಮನತಣಿಸಿದ ನೂರಾರು ಸಂಗತಿಗಳು.. ಊಹೆಗೂ ಮೀರಿದ ಜನರ ಸ್ಪಂದನೆಗಳು. “ಜನಸಾಗರ” ಎಂಬ ಪದಕ್ಕೆ ಭಾರತ ಐಕ್ಯತಾ ಯಾತ್ರೆಯಲ್ಲಿ ನೈಜ ಅರ್ಥ ಸಿಗುತ್ತಿದೆ. ದಿನದಿನಕ್ಕೂ ಯಾತ್ರೆಗೆ ಪಾಲ್ಗೊಳ್ಳುವವರ ಸಂಖ್ಯೆ ಏರುತ್ತಲೇ ಇದೆ.. ರಾಹುಲ್ ಗಾಂಧಿ ಮಾತನಾಡಿ ಹಿಂಸೆ, ದ್ವೇಷದಿಂದ ಮಾನಸಿಕವಾಗಿ ವಿಭಜನೆಯಾಗುತ್ತಿರುವ ಭಾರತವನ್ನು ಒಗ್ಗೂಡಿಸುವುದು ನಮ್ಮ ಧ್ಯೇಯ ಆರ್ಥಿಕ ಅಸಮಾನತೆ, ನಿರುದ್ಯೋಗ, ಬೆಲೆ ಏರಿಕೆಯಿಂದ ಜನ ಸಾಮಾನ್ಯರ ಬದುಕು ದುಸ್ಥರವಾಗುತ್ತಿರುವುದರ ವಿರುದ್ಧ ನಮ್ಮ ಯಾತ್ರೆ. ಸೌಹಾರ್ದ ಭಾರತವನ್ನು ಸಾಕಾರಗೊಳಿಸುವುದು #ಭಾರತಐಕ್ಯತಾಯಾತ್ರೆ ಯ ಉದ್ದೇಶ. ಏಕೆ ನಮ್ಮ ಜೀವನ, ಇತಿಹಾಸ, ಭಾಷೆ, ಸಂಸ್ಕೃತಿ, ಕನ್ನಡ ಇವುಗಳ ಮೇಲೆ ದಾಳಿಯಾಗುತ್ತಿದೆ? ದೇಶದಲ್ಲಿ ದ್ವೇಷ ಮತ್ತು ಹಿಂಸಾಚಾರ ಹರಡುವುದು ದೇಶ ವಿರೋಧಿ ಕೃತ್ಯವಾಗಿದೆ. ದೇಶದಲ್ಲಿ ಯಾರೇ ದ್ವೇಷ ಹಬ್ಬಿಸಿ ಅಶಾಂತಿ ಸೃಷ್ಟಿಸಿದರೂ ಅವರು ಯಾವುದೇ ಸಮುದಾಯದವರಾದರೂ ಅವರನ್ನು ನಾವು ವಿರೋಧಿಸುತ್ತೇವೆ. ಕಾಂಗ್ರೆಸ್ ಪಕ್ಷ ಸರ್ವಾಧಿಕಾರಿ ಮನಸ್ಥಿತಿಯ ಪಕ್ಷವಲ್ಲ. ಎಲ್ಲರಿಗೂ ತಮ್ಮ ಅಭಿಪ್ರಾಯ, ಭಾವನೆಗಳನ್ನು ವ್ಯಕ್ತಪಡಿಸುವ ಅವಕಾಶವಿದೆ. ನಮ್ಮ ಪಕ್ಷ ವಿಭಿನ್ನ ಆಲೋಚನೆ, ಅಭಿಪ್ರಾಯಗಳನ್ನು ಸ್ವಾಗತಿಸುತ್ತದೆ. ಹಾಗೆಯೇ ಚುನಾವಣೆಯ ಗೆಲುವಿಗಾಗಿ ಎಲ್ಲಾ ನಾಯಕರು ಒಟ್ಟಾಗಿ ಕೆಲಸ ಮಾಡುತ್ತಾರೆ. ಎಂದು ತಿಳಿಸಿದರು ಕಾರ್ಯಕ್ರಮದಲ್ಲಿ ನವೀನ್ ಚಂದ್ರ ಸುವರ್ಣ ಶೇಖಬ್ಬ ಉಚ್ಚಿಲ ಗಣೇಶ್ ಕೋಟ್ಯಾನ್ ಗಣೇಶ್ ಮುಲ್ಲಗುಡ್ಡೆ ಪಂಚಾಯತ್ ಸಾಧ್ಯಸೆ ಲೀಲಾ ಶರ್ಫುದ್ದೀನ್, ಅಮೀರುದ್ದೀನ್ ಜೊತಿ ಮನನ್, ಸಾದಿಕ್, , ಕೇಶವ ಸಾಲ್ಯಾನ್, ಉಸ್ಮಾನ್ ಕಾಪು ಲಕ್ಷ್ಮೀಶ್ ತಂತ್ರಿ ಪುಭಾಕರ ಆಚಾರ್ಯ, ಯಶವಂತ್ ಅಮೀನ್, ಕರುಣಾಕರ್ ಪೂಜಾರಿ, , ಮತ್ತಿತರರು ಉಪಸ್ಥಿತರಿದ್ದರು.

