×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಮಲ್ಪೆ : ಮೀನುಗಾರರ ಬಲೆಗೆ ಬಿದ್ದ 2 ಕೆ.ಜಿ ತೂಕದ ಕಾರ್ಗಿಲ್ ಮೀನು

ಮಲ್ಪೆಯಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟಿನವರಿಗೆ ಬೃಹತ್ ಗಾತ್ರದ ಕಾರ್ಗಿಲ್ ಮೀನು ಬಲೆಗೆ ಬಿದ್ದಿದೆ. ಯಕ್ಷೇಶ್ವರೀ ಕೃಪಾ ಎಂಬ ಹೆಸರಿನ ಆಳಸಮುದ್ರ ಬೋಟಿನಲ್ಲಿ ಮೀನು ಇಳಿಸುವಾಗ ಸುಮಾರು 2ಕೆ.ಜಿ.ತೂಕದ ಕಾರ್ಗಿಲ್ ಮೀನು ದೊರಕಿದೆ. ಸಾಮಾನ್ಯವಾಗಿ ಕಾರ್ಗಿಲ್ ಮೀನು ಹೆಚ್ಚೆಂದರೆ 250 ಗ್ರಾಂನ ತೂಗುತ್ತದೆ. ಆದರೆ ಇಷ್ಟು ದೊಡ್ಡ ಮೀನು ಕಂಡು ಬರುವುದು ಬಲು ಅಪರೂಪ  ಈ ಮೀನಿನ ಸಾಮಾನ್ಯ ಹೆಸರು ರೆಡ್‌ಟೂತೆಡ್ ಟ್ರಿಗ್ಗರ್‌ಫಿಶ್, ಓಡೋನಸ್ ನಗರ್ ಇದರ ವೈಜ್ಞಾನಿಕ ಹೆಸರು.ಬಲಿಸಿಡೆಗೆ ಸೇರಿದ ಈ ಮೀನುಗಳಲ್ಲಿ ಸುಮಾರು 80 ಜಾತಿಗಳಿವೆ. ಇದು ಸೈನಿಕ ಸಮವಸ್ತ್ರ ಮಾದರಿಯ ಬಣ್ಣ ಹೊಂದಿರುವುದರಿಂದ ಕರ್ನಾಟಕ ಕರಾವಳಿಯಲ್ಲಿ ಇದನ್ನು ಕಾರ್ಗಿಲ್ ಎಂಬುದಾಗಿ ಕರೆಯುತ್ತಾರೆ. 

Leave a Reply

Your email address will not be published. Required fields are marked *