×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಸಹಬಾಳ್ವೆ ಕಾಪು ಘಟಕದ ವತಿಯಿಂದ ಸಬ್ಕೊ ಸನ್ಮತಿ ದೇ ಭಗವಾನ್ ಸಾಮರಸ್ಯ ನಡಿಗೆ

ಸಬ್ಕೊ ಸನ್ಮತಿ ದೇ ಭಗವಾನ್ ಎಂದು ಜಗತ್ತಿಗೆ ಸಾರಿದ ಮಹತ್ಮ ಗಾಂಧಿಯವರ ಜನ್ಮ ದಿನದ ಅಂಗವಾಗಿ ಈ ನಾಡಿನ ಸಾಮರಸ್ಯದ ಬದುಕಿನ ಉಳಿವಿಗಾಗಿ ಸಹಬಾಳ್ವೆ ಕರ್ನಾಟಕ ರಾಜ್ಯಾದ್ಯಂತ ಸಾಮರಸ್ಯ ನಡಿಗೆ ಕಾರ್ಯಕ್ರಮ ಆಯೋಜಿಸಿದ್ದು ಆ ಪ್ರಯುಕ್ತ ಸಹಬಾಳ್ವೆ ಕಾಪು ತಾಲೂಕು ಘಟಕ ಸಾಮರಸ್ಯ ನಡಿಗೆಯನ್ನು ಆಯೋಜಿಸಿದೆ ಸಾಮರಸ್ಯ ನಡಿಗೆಯು ತಾರೀಕು 01-10-2022 ಶನಿವಾರ ಸಂಜೆ 4.30 ಕ್ಕೆ ಕಾಡು ಜನಾರ್ಧನ ದೇವಸ್ಥಾನದಿಂದ ಪ್ರಾರಂಭಗೊಂಡು ಕಾಪು ಪೇಟೆಯಲ್ಲಿ ಸಮಾಪನಗೊಳ್ಳುವುದು ಸಮಾಪನಾ ಸಭೆಯಲ್ಲಿ ವಿವಿಧ ಧರ್ಮಗಳ ಮುಖಂಡರು ಭಾಗವಹಿಸಿ ಮಾತನಾಡಲಿರುವುದು. ಈ ನಾಡಿನ ಸಾಮರಸ್ಯದ ಬದುಕಿನ ಉಳಿವಿಗಾಗಿ ಸಾರ್ವಜನಿಕರು ಹೆಮ್ಮೆಯಿಂದ ಭಾಗವಹಿಸಿ ಹೆಜ್ಜೆ ಹಾಕಿ ನಾವು ಇಡುವ ಒಂದೊಂದು ಹೆಜ್ಜೆಯು ಕೂಡ ಈ ನಾಡನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸುವಲ್ಲಿ ಮಹತ್ತರವಾದ ಹೆಜ್ಜೆಯಾಗುತ್ತದೆ. ಆದ್ದರಿಂದ ಈ ಕಾರ್ಯಕ್ರಮಕ್ಕೆ ಕಾಪು ತಾಲೂಕಿನ ಸರ್ವದ ಜನರನ್ನು ಹಾಗೂ ತಮ್ಮೆಲ್ಲರನ್ನು ಆದರ ಪೂರ್ವಕವಾಗಿ ಆಹ್ವಾನಿಸುತ್ತೇನೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು

Leave a Reply

Your email address will not be published. Required fields are marked *