
ದೇಶಪ್ರೇಮಿಗಳ ಪಾಲಿಗೆ ನವರಾತ್ರಿ ಸಂದರ್ಭದಲ್ಲಿ ಮತೀಯ ರಾಷ್ಟ್ರವಿರೋಧಿ ಸಂಘಟನೆಗಳನ್ನು ನಿಷೇಧಿಸುವ ಮೂಲಕ ಶುಭ ಸುದ್ದಿ ನೀಡಿದ ಕೇಂದ್ರ ಸರಕಾರ ಹೈಕೋರ್ಟ್ ತೀರ್ಪು ವಿರೋಧಿಸಿ ಬಂದ್ ಕರೆ ನೀಡಿದ ಸಂದರ್ಭದಲ್ಲೇ ಅವರ ದೇಶ ವಿರೋಧಿ ನಿಲುವು ಬಹಿರಂಗ ನರೇಂದ್ರ ಮೋದಿ ನೇತೃತ್ವಲ್ಲಿ ಗೃಹ ಸಚಿವ ಅಮಿತ್ ಷಾ ರವರ ದಿಟ್ಟ ನಿರ್ಧಾರ ಕೋಟ್ಯಾಂತರ ದೇಶಪ್ರೇಮಿಗಳಿಗೆ ಸಿಹಿಸುದ್ದಿ ಶರತ್ ಮಡಿವಾಳ, ಪ್ರವೀಣ್ ನೆಟ್ಟಾರ್, ರುದ್ರೇಶ್ ಕೊಲೆ ಪ್ರಕರಣದಲ್ಲಿ ನೇರ ಭಾಗಿಯಾದ ಸಂಘಟನೆ ಕಾರ್ಯಕರ್ತರ ಹೆಡೆಮುರಿ ಕಟ್ಟಿ ಹಿಂದೂ ಕಾರ್ಯಕರ್ತರ ಕೊಲೆಗೆ ನ್ಯಾಯ ಸಲ್ಲಿಸುವ ಕಾರ್ಯ… ದೇಶದಾದ್ಯಂತ ಎನ್ ಐ ಎ ಧಾಳಿ ಮೂಲಕ ದೇಶ ವಿರೋಧಿ ಪಿ ಎಫ್ ಐ, ಎಸ್ ಡಿ ಪಿ ಐ ಸಂಘಟನೆಯ ಮುಖವಾಡ ಕಳಚಿಬಿದ್ದಿದೆ. ಉಡುಪಿ ಸರಕಾರಿ ಬಾಲಕಿಯರ ಕಾಲೇಜಿನಲ್ಲಿ ಹಿಜಾಬ್ ವಿವಾದ ಸೃಷ್ಟಿಸಿ ದೇಶದಾದ್ಯಂತ ಕೋಲಾಹಲ ಸೃಷ್ಟಿಸಿದ ಈ ಮತಾಂಧ ಶಕ್ತಿಗಳ ರಾಷ್ಟ್ರವಿರೋಧಿ ಚಟುವಟಿಕೆಯ ಬಗ್ಗೆ ಜನವರಿ ತಿಂಗಳಲ್ಲೇ ತನಿಖೆಗೆ ಆಗ್ರಹ ಮಾಡಿದ್ದೆ… ಹಿಜಾಬ್ ವಿವಾದದ ವಿದ್ಯಾರ್ಥಿನಿಯರು ಭಯೋತ್ಪಾದನೆ ಸಂಘಟನೆಯ ಸದಸ್ಯೆಯರು ಎಂದು ನಾನು ಹೇಳಿದ ಮಾತಿಗೆ ಈಗ ಪುರಾವೆ ಸಿಕ್ಕಿದಂತಾಗಿದೆ. ಮಂಗಳೂರಿನಲ್ಲಿ ಸಮಾವೇಶ ನಡೆಸಿ ಕೆಜಿಎಫ್ ವೈಲೆಂಟ್ ಡೈಲಾಗ್ ಹೇಳಿದ್ದ ತಾಂಟ್ ಮೊಂಟ್ ನಾಯಕ ಇದೀಗ ಎನ್ ಐ ಎ ಮುಂದೆ ಸೈಲೆಂಟ್ ಆಗಿದ್ದಾನೆ. ಮಳಲಿ ದೇವಸ್ಥಾನದ ಒಂದು ಹಿಡಿ ಮಣ್ಣು ಮುಟ್ಟಲು ಬಿಡುವುದಿಲ್ಲ ಎಂದವರನ್ನು ಇದೀಗ ರಾಷ್ಟ್ರವಿರೋಧಿ ಚಟುವಟಿಕೆ ಆರೋಪದಲ್ಲಿ ಅವರ ಮನೆಯಿಂದಲೇ ಬಂಧಿಸುತ್ತಿರುವ ಎನ್ ಐ ಎ… ಗಡಿಯಾಚೆಗಿನ ಉಗ್ರರಿಗಿಂತ ದೇಶದೊಳಗಿನ ಇಂತಹ ಐಸಿಸ್ ಮನಸ್ಥಿತಿಯ ಸಂಘಟನೆಗಳೇ ದೇಶದ ಆಂತರಿಕ ಭದ್ರತೆಗೆ ದೊಡ್ಡ ಸವಾಲು.. ಲವ್ ಜೆಹಾದ್, ಭಯೋತ್ಪಾದನೆ ಚಟುವಟಿಕೆಗಳನ್ನು ನಡೆಸಿ ಮುಸ್ಲಿಂ ರಾಷ್ಟ್ರಗಳ ಮೂಲಕ ಹಣ ಸಂಗ್ರಹಿಸುವ ಜಾಲವನ್ನು ಎನ್ ಐ ಎ ತನಿಖೆ ಮೂಲಕ ಬಯಲಿಗೆಳೆದಿದೆ. ವಕ್ಫ್ ಅಕ್ರಮದ ಹಣ ಈ ಸಂಘಟನೆಯ ಕಾರ್ಯಕರ್ತರ ದೇಶ ದ್ರೋಹಿ ಚಟವಟಿಕೆಗಳಿಗಾಗಿ ಬಳಕೆಯಾಗುತ್ತಿದೆ. ಕೂಡಲೇ ಸರ್ಕಾರ ವಕ್ಫ್ ಬೋರ್ಡ್ ರದ್ದುಗೊಳಿಸಿ ಆಸ್ತಿಯನ್ನು ಸರಕಾರ ವಶ ಪಡಿಸಬೇಕು. ಕರಾವಳಿ ಜಿಲ್ಲೆಯಲ್ಲಿ ಕಗ್ಗೊಲೆಯಾದ ಹಿಂದೂ ಕಾರ್ಯಕರ್ತರ ಕೇಸ್ ಬಗ್ಗೆ ತನಿಖೆ ನಡೆಸಿ ಈ ಮತೀಯ ಸಂಘಟನೆಗಳ ಕಾರ್ಯಕರ್ತರ ಪಾತ್ರ ಶೀಘ್ರ ಬಯಲಾಗಲಿದೆ. ಈ ಎಲ್ಲಾ ಬೆಳವಣಿಗೆಯ ಬಗ್ಗೆ ದಿವ್ಯ ಮೌನ ತಾಳಿರುವ ಕಾಂಗ್ರೆಸ್ ನಾಯಕರ ನಡೆ ಅನುಮಾನ ಸೃಷ್ಟಿಸಿದೆ. ಈ ರಾಷ್ಟ್ರವಿರೋಧಿ ಸಂಘಟನೆಗಳಿಗೆ ಪರೋಕ್ಷ ಬೆಂಬಲ ಸೂಚಿಸಿದಂತಿದೆ. ನಯವಾದ ಮಾತುಗಳ ಮೂಲಕ ಸಜ್ಜನರ ಮುಖವಾಡ ಧರಿಸಿರುವ ಈ ಮತಾಂಧರೊಂದಿಗೆ ಬಹುಸಂಖ್ಯಾತ ಹಿಂದೂ ಸಮಾಜ ಎಚ್ಚರಿಕಯಿಂದಿರಬೇಕು. ಈ ಕಾರ್ಯಕರ್ತರ ಹಿಂದೆ ತೆರೆಮರೆಯಲ್ಲಿ ಸಹಕಾರ ನೀಡುವ ಸಮಾಜದಲ್ಲಿ ಗಣ್ಯರ ಸೋಗಿನಲ್ಲಿ ಓಡಾಡುತ್ತಿರುವ ಬಗ್ಗೆಯೂ ತನಿಖೆ ನಡೆಯಬೇಕು. ಈ ಬೆಳವಣಿಗೆಯ ಮೂಲಕ ಜನಸಾಮಾನ್ಯರು ಯಾರನ್ನು ನಂಬುವ ಸ್ಥಿತಿಯಲ್ಲಿ ಇಲ್ಲ… ಬೇರೆ ಬೇರೆ ಹೆಸರಿನಿಂದ ನಾಯಿಕೊಡೆಯಂತೆ ಸೃಷ್ಟಿಯಾಗುವ ಈ ಮತೀಯ ಸಂಘಟನೆಯನ್ನು ನಿಷೇಧಕ್ಕೆ ಕೇಂದ್ರ ಸರ್ಕಾರದಿಂದ ಗಂಭೀರ ಚಿಂತನೆ ನಡೆದಿದೆ. ಉಡುಪಿ ಜಿಲ್ಲೆಯ ಪ್ರಜ್ಞಾವಂತ ಜನತೆ ಈ ಮತಾಂಧ ಸಂಘಟನೆಗಳ ಬಗ್ಗೆ ಸ್ವಯಂ ಬಹಿಷ್ಕರಿಸಿ ತಕ್ಕ ಪಾಠ ಕಲಿಸಬೇಕು.

