ಬೆಳ್ಳೆ ವ್ಯವಸಾಯ ಸೇವಾ ಸಹಕಾರಿ ಸಂಘದ (ನಿ.) ವಾರ್ಷಿಕ ಮಹಾಸಭೆಯು ಗೀತಾ ಮಂದಿರದಲ್ಲಿ ಜರುಗಿತು. ಸಂಘದ ಅಧ್ಯಕ್ಷರಾದ ಶಿವಾಜಿ ಸುವರ್ಣ, ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ, ಸಂಸ್ಥೆಯು ಸಾಧಿಸಿರುವ ಅಭಿವೃದ್ಧಿ ಹಾಗೂ ಆರ್ಥಿಕ ಪ್ರಗತಿಯನ್ನು ಪರಿಶೀಲಿಸಿ, ಶೇ. 15ರಷ್ಟು ಡಿವಿಡೆಂಟ್ (ಲಾಭಾಂಶ) ಘೋಷಿಸಲಾಯಿತು.
: ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸದಸ್ಯರ ಪ್ರತಿಭಾವಂತ 32 ಮಕ್ಕಳಿಗೆ ಪ್ರೋತ್ಸಾಹಕ ಪ್ರತಿಭಾ ಪುರಸ್ಕಾರ ಮತ್ತು ನಗದು ಬಹುಮಾನ ನೀಡಿ ಗೌರವಿಸಲಾಯಿತು

ಬೆಳ್ಳೆ ವ್ಯವಸಾಯ ಸೇವಾ ಸಹಕಾರಿ ಸಂಘದ ಆರ್ಥಿಕ ಪ್ರಗತಿ ಮತ್ತು ಬಲವರ್ಧನೆಗೆ ಬೆನ್ನೆಲುಬಾಗಿ ನಿಂತು, ಸಂಘದಲ್ಲಿ ಹೆಚ್ಚಿನ ಮೊತ್ತದ ಠೇವಣಿ ಸಂಗ್ರಹಣೆಗೆ ಹಾಗೂ ಹೂಡಿಕೆಗೆ ವಿಶೇಷವಾಗಿ ಸಹಕರಿಸಿದ ಸಂಸ್ಥೆಯ ಇಬ್ಬರು ಹಿರಿಯ ಸದಸ್ಯರಾದ ರಿಚಾರ್ಡ್ ರೊಡ್ರಿಗಸ್ ಮತ್ತು ಜೋನ್ ಬ್ಯಾಪ್ಟಿಸ್ಟ್ ಡಿ ಅಲ್ಮೇಡಾ ಅವರನ್ನು ಸಭೆಯಲ್ಲಿ ಶಾಲಾ, ಹೂಮಾಲೆ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.”

ಸಂಘದ ಅಧ್ಯಕ್ಷರಾದ ಶಿವಾಜಿ ಸುವರ್ಣ ಮಾತನಾಡಿ, “ನಮ್ಮ ಸಂಘವು ಕೇವಲ ಒಂದು ಹಣಕಾಸು ಸಂಸ್ಥೆಯಾಗಿ ಉಳಿಯದೆ, ಗ್ರಾಮೀಣ ಪ್ರದೇಶದ ಜನರ ಬದುಕಿಗೆ ಆಸರೆಯಾಗಿ ಬೆಳೆಯುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ನಿಮ್ಮೆಲ್ಲರ ನಿರಂತರ ನಂಬಿಕೆ, ಬೆಂಬಲ ಹಾಗೂ ಸಿಬ್ಬಂದಿ ವರ್ಗದ ಶ್ರಮದಿಂದಾಗಿ ಈ ವರ್ಷವೂ ನಮ್ಮ ಸಂಸ್ಥೆಯು ನಿವ್ವಳ ಲಾಭದಲ್ಲಿ ಶೇಕಡಾ 15 ರಷ್ಟು ಡಿವಿಡೆಂಟ್ (ಲಾಭಾಂಶ) ಘೋಷಿಸಲು ನಮಗೆ ಅತ್ಯಂತ ಸಂತೋಷವಾಗುತ್ತಿದೆ ಆಧುನಿಕ ತಂತ್ರಜ್ಞಾನ ಆಧಾರಿತ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ಇನ್ನಷ್ಟು ವಿಸ್ತರಿಸಲು ಆಡಳಿತ ಮಂಡಳಿ ಯೋಜಿಸಿದೆ ಎಂದು ತಿಳಿಸಿದರು

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ಮೈಮುನಾ ನಿರ್ದೇಶಕರುಗಳಾದ: ಶ್ರೀ ಆ್ಯಂಡ್ರು ಗ್ರೆಗರಿ ಡಿ’ಸೋಜ, ಶ್ರೀ ರಿತೇಶ್ ಎಸ್. ಸುವರ್ಣಶ್ರೀ ವಿನ್ಸೆಂಟ್ ಫೆರ್ನಾಂಡೀಸ್, ಶ್ರೀಮತಿ ರಂಜಿನಿ ಹೆಗ್ಡೆ,ದಯಾನಂದ ಶೆಟ್ಟಿ, ಶ್ರೀ ರಜನೀಶ್ ಅಲ್ಫೋನ್ಸ್ ಕುಲಚಂದ್ರ ರಾಜೇಂದ್ರ ಕುಮಾರ್, ಮೊಹಮ್ಮದ್ ಹನೀಫ್ ಕರುಣಾಕರ ಪಾನರ, ಶ್ರೀ ಬಾಲ ಗೋಪಾಲ ಬಲ್ಲಾಳ್ ಪ್ರಧಾನ ವ್ಯವಸ್ಥಾಪಕ ಇಸ್ಮಾಯಿಲ್,ಸದಸ್ಯರು ಉಪಸ್ಥಿತರಿದ್ದರು.

