×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಮಲಬಾರ್ ಗೋಲ್ಡ್ ವತಿಯಿಂದ ‘ತನ್ವಿಕಾ’ ನೂತನಆಭರಣ ಸಂಗ್ರಹ ಅನಾವರಣ

ಉಡುಪಿ, ಎ.28: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ‘ಡಿವೈನ್’ ಎಂಬ ವಿಶೇಷ ಬ್ರಾಂಡಿನಡಿ ಹೊರತರಲಾದ ‘ತನ್ವಿಕಾ’ ನೂತನ ಆಭರಣ ಸಂಗ್ರಹವನ್ನು ಸೋಮವಾರ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಅನಾವರಣಗೊಳಿಸಲಾಯಿತು. ಈ ಹೊಸ ಸಂಗ್ರಹವನ್ನು ಆರ್ಕಿಟೆಕ್ಟರ್ ಎ.ಆರ್.ಚಿನ್ಮಯಿ ಹಾಗೂ ರೂಪದರ್ಶಿ ಶುಭ ಪ್ರಶಾಂತ್ ಅನಾವರಣಗೊಳಿಸಿ ಶುಭ ಹಾರೈಸಿದರು. ಇವರು ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತನ್ವಿಕಾ ಆಭರಣದ ಕುರಿತು ಮಾತನಾಡಿದ ಸಿಬ್ಬಂದಿ ನಿತ್ಯಾನಂದ, ದೈವಿಕಥೆಯಿಂದ ಕೂಡಿದ ಈ ನೂತನ ಸಂಗ್ರಹವು ದೈವತ್ತವನ್ನು ಸಾರುವ ಆಭರಣವಾಗಿದೆ. ಇದರಲ್ಲಿ ಸಾಂಪ್ರದಾಯಿಕವಾಗಿ ಹಾಗೂ ಅದೃಷ್ಟ ತರುವ ಲಕ್ಷ್ಮೀ ದೇವತೆಯನ್ನು ಅಳವಡಿಸಲಾಗಿದೆ. ಚಂದರಸಿ ಮತ್ತು ಪಿಲಿಗ್ರಿ ಕುಶಲತೆ ಇದೆ. ಇದೊಂದು ಅದ್ಭುತವಾದ ಸಂಗ್ರಹ ಪ್ರತಿಯೊಂದು ಆಭರಣವು ‘ಕರಕುಶಲತೆಯನ್ನು ದೇವಾಲಯದ ವಾಸ್ತುಶಿಲ್ಪ-ಪ್ರೇರಿತ ವಿನ್ಯಾಸಗಳೊಂದಿಗೆ ಸುಂದರವಾಗಿ ವಿಲೀನಗೊಳಿಸುತ್ತದೆ,’ ಸಂಪ್ರದಾಯ ಮತ್ತು ಭಕ್ತಿಯನ್ನು ಸಂಕೇತಿಸುತ್ತದೆ ಆಗಿದೆ ಎಂದರು. ತನ್ವಿಕಾ ಆಭರಣಗಳು ಎಲ್ಲ ವಯೋಮಾನದವರಿಗೆ ತಕ್ಕಂತೆ ಹಬ್ಬಗಳು, ಮದುವೆ ಇತರ ಸಮಾರಂಭಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ನೆಕ್ಲೇಸ್, ಓಲೆಗಳು, ಬಳೆಗಳು ಮತ್ತು ಉಂಗುರಗಳ ಸಾಕಷ್ಟು ಸಂಗ್ರಹ ಗಳು ಲಭ್ಯ ಇದೆ ಎಂದು ಅವರು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ ಉಡುಪಿ ಶಾಖೆಯ ಮುಖ್ಯಸ್ಥ ಹಫೀಝ್ ರೆಹಮಾನ್, ಶಾಖಾ ವ್ಯವಸ್ಥಾಪಕ ಪುರಂದರ ತಿಂಗಳಾಯ, ಸೇಲ್ಸ್ ಮೆನೇಜರ್ ಮುಸ್ತಾಫ ಎ.ಕೆ., ಮಾರುಕಟ್ಟೆ ವ್ಯವಸ್ಥಾಪಕ ತಂಝೀಮ್ ಶಿರ್ವ,ಸಂದೀಪ್ ಸಪಾಳ್ಯ ಉಪಸ್ಥಿತರಿದ್ದರು. ವಿಘ್ನೇಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು

Leave a Reply

Your email address will not be published. Required fields are marked *