×
Our website is made possible by displaying online advertisements to our visitors. Please consider supporting us by whitelisting our website.
  • 9880645340

ವಿಮೆನ್ ಇಂಡಿಯಾ ಮೂವ್ಮೆಂಟ್ ಉಡುಪಿ ಜಿಲ್ಲಾ ಸಮಿತಿಗೆ ನೂತನ ಸಾರಥ್ಯ: ಜಿಲ್ಲಾಧ್ಯಕ್ಷೆಯಾಗಿ ನೌಶೀನ್ ಹಸ್ರತ್ ಆಯ್ಕೆ.

ಉಡುಪಿ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಮಹಿಳಾ ವಿಭಾಗವಾದ ವಿಮೆನ್ ಇಂಡಿಯಾ ಮೂವ್ಮೆಂಟ್ ಉಡುಪಿ ಜಿಲ್ಲಾ ಸಮಿತಿಯ 2026–29ರ ಅವಧಿಗೆ ನೂತನ ಜಿಲ್ಲಾಧ್ಯಕ್ಷೆಯಾಗಿ ನೌಶೀನ್ ಹಸ್ರತ್ ಅವರನ್ನು ಆಯ್ಕೆ ಮಾಡಲಾಯಿತು.

ಉಡುಪಿಯ ಖಾಸಗಿ ಸಭಾಂಗಣದಲ್ಲಿ ನಡೆದ ವಿಮೆನ್ ಇಂಡಿಯಾ ಮೂವ್ಮೆಂಟ್ ಉಡುಪಿ ಜಿಲ್ಲಾ ಪ್ರತಿನಿಧಿ ಸಭೆಯಲ್ಲಿ ಆಂತರಿಕ ಚುನಾವಣೆಯ ಮೂಲಕ ನೂತನ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮವು ಧ್ವಜಾರೋಹಣದೊಂದಿಗೆ ಆರಂಭಗೊಂಡಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಮೆನ್ ಇಂಡಿಯಾ ಮೂವ್ಮೆಂಟ್ ಉಡುಪಿ ಜಿಲ್ಲಾ ಸಮಿತಿಯ ಪ್ರಸ್ತುತ ಅಧ್ಯಕ್ಷೆ ನಾಝಿಯ ನಸ್ರುಲ್ಲ ಅವರು ವಹಿಸಿದ್ದರು.

ಕಾರ್ಯಕ್ರಮಕ್ಕೆ ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯಾಧ್ಯಕ್ಷರಾದ ಫಾತಿಮಾ ನಸೀಮ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾಧ್ಯಕ್ಷರಾದ ಆಸಿಫ್ ಕೋಟೇಶ್ವರ ಹಾಗೂ ಜಿಲ್ಲಾ ಕಾರ್ಯದರ್ಶಿ ನಸೀಮ್ ಫಾತಿಮಾ ಅವರು ಅತಿಥಿಗಳಾಗಿ ಆಗಮಿಸಿದ್ದರು. ರಾಜ್ಯಾಧ್ಯಕ್ಷರಾದ ಫಾತಿಮಾ ನಸೀಮ ಅವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

ಸಭೆಯಲ್ಲಿ ವಿಮೆನ್ ಇಂಡಿಯಾ ಮೂವ್ಮೆಂಟ್ ಉಡುಪಿ ಜಿಲ್ಲಾ ಸಮಿತಿಯ 2023–26ರ ಅವಧಿಯ ವರದಿಯನ್ನು ಮಂಡಿಸಿ, ಕಳೆದ ಅವಧಿಯಲ್ಲಿ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ನಡೆಸಲಾದ ಶೈಕ್ಷಣಿಕ, ಸಾಮಾಜಿಕ, ಮಹಿಳಾ ಸಬಲೀಕರಣ ಹಾಗೂ ಜನಪರ ಚಟುವಟಿಕೆಗಳ ಕುರಿತು ಚರ್ಚೆ ನಡೆಸಲಾಯಿತು. ಅಲ್ಲದೆ, ಮುಂದಿನ ಅವಧಿಯಲ್ಲಿ ಸಂಘಟನೆಯ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸುವ ಕುರಿತು ಪ್ರತಿನಿಧಿಗಳೊಂದಿಗೆ ವಿಚಾರ ವಿನಿಮಯ ನಡೆಯಿತು.

2026–29ರ ಅವಧಿಗೆ ನೂತನ ಜಿಲ್ಲಾ ಸಮಿತಿಯಲ್ಲಿ ಜಿಲ್ಲಾಧ್ಯಕ್ಷೆಯಾಗಿ ನೌಶೀನ್ ಹಸ್ರತ್, ಪ್ರಧಾನ ಕಾರ್ಯದರ್ಶಿಯಾಗಿ ರಹ್ಮತುನ್ನಿಸಾ, ಉಪಾಧ್ಯಕ್ಷೆಯಾಗಿ ಹಾಜಿರಾ, ಕಾರ್ಯದರ್ಶಿಯಾಗಿ ನಸೀರಾ ಹಾಗೂ ಕೋಶಾಧಿಕಾರಿಯಾಗಿ ಲುತ್ಫಿಯಾ ಆಯ್ಕೆಯಾದರು.

ಜಿಲ್ಲಾ ಸಮಿತಿ ಸದಸ್ಯರಾಗಿ ಅಲ್ಫಿಯಾ, ಆಸಿಯಾ ತಲ್ಝಾರ್, ಹಸೀನಾ, ಸನಾ ಸಿಕಂದರ್, ನಸೀಮ್ ಮುಬೀನ್, ಫರ್ಹಾ, ಫೌಸಿಯಾ ಹಾಗೂ ಶಂಶಾದ್ ಆಯ್ಕೆಯಾದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಹ್ಮತುನ್ನಿಸಾ ಸ್ವಾಗತಿಸಿ. ಆಸಿಯಾ ತಲ್ಝಾರ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲೆಯ ವಿವಿಧ ಕ್ಷೇತ್ರ ಹಾಗೂ ಬ್ರಾಂಚ್ ಸಮಿತಿಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು..

Leave a Reply

Your email address will not be published. Required fields are marked *