ಭವಿಷ್ಯ ನಿಧಿ ಪಿಂಚಣಿದಾರರ ಉಡುಪಿ ವಲಯ ಸಮಿತಿ (ಸಿಐಟಿಯು)ನೇತ್ರತ್ವದಲ್ಲಿ ಪಿಂಚಣಿದಾರರ ಹಲವು ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿ ಉಡುಪಿಯ ಭವಿಷ್ಯ ನಿಧಿ ಕಛೇರಿ ಮುಂದೆ ಪ್ರತಿಭಟನೆ ಮಾಡಿ ಪ್ರಾದೇಶಿಕ ಆಯುಕ್ತರಿಗೆ ಮನವಿ ನೀಡಿ ಕೆಲವು ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಚರ್ಚಿಸಲಾಯಿತು
ಪ್ರತಿಭಟನೆ ಸಭೆಯನ್ನು ಉದ್ದೇಶಿಸಿ ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್ ಜಿಲ್ಲಾ ಅಧ್ಯಕ್ಷ ರಾದ ಸುಕುಮಾರ್ ತೊಕ್ಕೊಟ್ಟು ಮತ್ತು ಉಡುಪಿ ಜಿಲ್ಲಾ ಹಂಚು ಕಾರ್ಮಿಕರ ಸಂಘದ ಜಿಲ್ಲಾ ಕಾರ್ಯದರ್ಶಿ ಎಚ್.ನರಸಿಂಹ ಮಾತನಾಡಿದರು, ಉಡುಪಿ ಜಿಲ್ಲಾ ಬೀಡಿ ಫೆಡರೇಶನ್ ಕಾರ್ಯದರ್ಶಿ ಕವಿರಾಜ್. ಎಸ್.ಕಾಂಚನ್,ಕೋಶಾಧಿಕಾರಿ ಬಲ್ಕೀಸ್,ಕಾರ್ಕಳ ತಾಲೂಕು ಬೀಡಿ ಕಾರ್ಮಿಕ ಸಂಘದ ಅಧ್ಯಕ್ಷರಾದ ಸುನೀತ ಶೆಟ್ಟಿ, ಬೀಡಿ ಎಂಡ್ ಟೊಬ್ಯಾಕೋ ಲೇಬರ್ ಯೂನಿಯನ್ ಉಡುಪಿ ಅಧ್ಯಕ್ಷ ರಾದ ನಳಿನಿ.ಎಸ್, ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ,ಸಿಐಟಿಯು ಉಡುಪಿ ಜಿಲ್ಲಾ ಅಧ್ಯಕ್ಷರಾದ ಶಶಿಧರ್ ಗೊಲ್ಲ,ಸಿಐಟಿಯು ಮುಖಂಡರಾದ ನಾಗೇಶ್ ಬೆಳ್ಮಣ್,ಉಡುಪಿ ಕಟ್ಟಡ ಸಂಘದ ಮುಖಂಡರಾದ ದಯಾನಂದ ಕೋಟ್ಯಾನ್,ಭವಿಷ್ಯ ನಿಧಿ ಪಿಂಚಣಿದಾರರ ಸಂಘದ ಅಧ್ಯಕ್ಷರಾಅದ ಲಲಿತ ಸುವರ್ಣ,ಕೋಶಾಧಿಕಾರಿ ಸರೋಜ.ಎಸ್,ಮುಖಂಡರಾದ ಗಿರಿಜಾ,ವಂಸತಿ,ವಾರಿಜ,ಇಂದಿರಾ,ಸುಂದರಿ,ರಮೇಶ್ ಜತ್ತನ್ನ,ಸುಮತಿ ಕಾರ್ಕಳ,ವಿಶಾಲ,ಲಕ್ಷೀ ಕಾರ್ಕಳ ಉಪಸ್ಥಿತರಿದ್ದರು.

