ಶಿರ್ವ: ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿ ಝನುಲ್ ಉಲಮಾ ಮಾಣಿ ಉಸ್ತಾದ್ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಉಡುಪಿ ಜಿಲ್ಲೆ ಇದರ ವತಿಯಿಂದ ತಾಜುಲ್ ಉಲಮಾ ಉಳ್ಳಾಲ ತಂಬಳ್ ಹಾಗೂ ಉಡುಪಿ ಜಿಲ್ಲಾ ಖಾಝಿಯಾಗಿದ್ದ ತಾಜುಲ್ ಫುಖಹಾ ಬೇಕಲ್ ಇಬ್ರಾಹೀಂ ಮುಸ್ಲಿಯಾರ್ ಅನುಸ್ಮರಣೆ ಸಂಗಮವು ಆ.11ರಂದು ಬೆಳಗ್ಗೆ 10ಕ್ಕೆ ಶಿರ್ವ ಸುನ್ನೀ ಜಾಮಿಯಾ ಮಸೀದಿಯಲ್ಲಿ ನಡೆಯಲಿದೆ.
ಕಾರ್ಯಕ್ರಮವು ಅಸ್ಪೃದ್ ಜಾಫರ್ ಅಸ್ಸಖಾಫ್ ತಂಬಳ್ ಕೋಟೇಶ್ವರ ನೇತೃತ್ವದಲ್ಲಿ ನಡೆಯಲಿದ್ದು, ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಪಿ.ಅಬೂಬಕರ್ ನೇಜಾರು ಅಧ್ಯಕ್ಷತೆ ವಹಿಸಲಿರುವರು.
ನಾಯಿಬ್ ಖಾಝಿ ಬಿ.ಕೆ.ಅಬ್ದುರಹ್ಮಾನ್ ಮದನಿ ಮೂಳೂರು ಉದ್ಘಾಟಿಸಲಿರುವರು. ವಾಗಿ ಎಮ್ಮೆಸ್ಸೆಮ್ ಅಬ್ದುರಶೀದ್ ಝನಿ ಕಾಮಿಲ್ ಅನುಸ್ಮರಣಾ ಭಾಷಣ ಮಾಡಲಿರುವರು. ಉಡುಪಿ ಜಿಲ್ಲಾ ಉಲಮಾ ಒಕ್ಕೂಟದ ಅಧ್ಯಕ್ಷ ಇಸ್ಮಾಯೀಲ್ ಮದನಿ ಮಾವಿನಕಟ್ಟೆ, ಶಿರ್ವ ಮಸೀದಿಯ ಖತೀಬ್ ಸಿರಾಜುದ್ದೀನ್ ಝನಿ, ಜಮಾಅತ್ ಅಧ್ಯಕ್ಷ ಝುಬೈರ್ ಅಹ್ಮದ್ ಅಲಿ, ಜಿಲ್ಲಾ ಸುನ್ನೀ ಕೋ-ಆರ್ಡಿನೇಷನ್ ಅಧ್ಯಕ್ಷ ಕೆ.ಎ.ಅಬ್ದುರಹ್ಮಾನ್ ರಝಿ ಅಲ್ ಫುರ್ಖಾನಿ ಕಲ್ಕಟ್ಟ ಭಾಗವಹಿಸಲಿರುವರು ಎಂದು ಸಂಯುಕ್ತ ಜಮಾಅತ್ ಕಾರ್ಯದರ್ಶಿ ಹಾಜಿ ಎಂ.ಎ.ಬಾವು ಮೂಳೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ

