×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಹೆಜಮಾಡಿ ಟೋಲ್ ವಿನಾಯಿತಿ ಹೋರಾಟ: ರೂಪರೇಷೆ ಸಿದ್ಧತೆಗೆ ಪೂರ್ವಭಾವಿ ಆಲೋಚನಾ ಸಭೆ

ಹೆಜಮಾಡಿ ಮತ್ತು ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ವತಿಯಿಂದ ಹೆಜಮಾಡಿ ಹಾಗೂ ನಡ್ಸಾಲು ಪ್ರದೇಶದ ನಿವಾಸಿಗಳಿಗೆ ಹೆಜಮಾಡಿ ಟೋಲ್ ಪ್ಲಾಜಾದಲ್ಲಿ ಆಧಾರ್ ಕಾರ್ಡ್ ಮೂಲಕ ಟೋಲ್ ಶುಲ್ಕ ವಿನಾಯಿತಿಯನ್ನು ಮುಂದುವರಿಸುವಂತೆ ಹಾಗೂ ಪಡುಬಿದ್ರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಟೋಲ್ ಶುಲ್ಕ ವಿನಾಯಿತಿಯನ್ನು ನೀಡುವಂತೆ ಒತ್ತಾಯಿಸಿ ಟೋಲ್ ಪ್ಲಾಜಾದಲ್ಲಿ ಪ್ರತಿಭಟನೆಯನ್ನು ಜಂಟಿಯಾಗಿ ನಡೆಸುವ ಬಗ್ಗೆ ಪೂರ್ವ ತಯಾರಿ ಸಭೆಯು ಹೆಜಮಾಡಿ ನ್ಯೂ ಕೋಟೆ ಬಿಲ್ಡಿಂಗ್, ಮಹಾಲಕ್ಷ್ಮಿ ಬ್ಯಾಂಕ್ ಕೆಳಗಡೆ ನಡೆಯಿತ್ತು.
ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಪಕ್ಷದ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿ ತಮ್ನ ತಮ್ಮ ಅಭಿಪ್ರಾಯವನ್ನು ಮಂಡಿಸಿದರು..
✅ ಸಾವಿರಕ್ಕೂ ಮಿಕ್ಕಿ ಜನರನ್ನು ಸೇರಿಸುವ ಮ‌ೂಲಕ ಟೋಲ್ ವಿರುದ್ಧ ಬ್ರಹತ್ ಪ್ರತಿಭಟನೆ ನಡೆಸುವುದು.
✅ ಸಂಘ ಸಂಸ್ಥೆಯವರು ನಾಗರಿಕರು , ಪಕ್ಷದ ಕಾರ್ಯಕರ್ತರು ಒಗ್ಗೂಡಿ ವ್ಯವಸ್ಥಿತ ರೀತಿಯಲ್ಲಿ ಹೆಜಮಾಡಿ ಹಾಗೂ ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ನಡೆಸುವುದು.
✅15 ಮಂದಿಯ Working Committee ರಚಿಸಲಾಯಿತು.ಈ ಮೂಲಕ ಪ್ರತಿಭಟನೆಯ ಕೆಲಸಕ್ಕೆ ಚಾಲನೆ ನೀಡಲಾಯಿತು.
✅ ಅಗಸ್ಟ್ 01 ರಂದು ಬೆಳಿಗ್ಗೆ 10:00 ಗಂಟೆಗೆ ಹೆಜಮಾಡಿ ಬ್ಯೆಪಾಸ್ ಬಳಿಯ PWD ರಸ್ತೆಯ ಟೋಲ್ ಬಳಿ ನಡೆಸುವುದು.


ಸಭೆಯಲ್ಲಿ ಪ್ರಮುಖರಾದ ವ್ಯೆ ಸುಕುಮಾರ್, ನವೀನ್ ಎನ್ .ಶೆಟ್ಟಿ , ಅಬ್ದುಲ್ ಅಜೀಜ್ ಹೆಜ್ಮಾಡಿ,ಸುಧೀರ್ ಕರ್ಕೇರ,ಪ್ರಬೋಚಂದ್ರ ಹೆಜ್ಮಾಡಿ, ರಮೀಜ್ ಹುಸೇನ್ ,ಕೇಶವ್ ಸಾಲ್ಯಾನ್, ಶೇಕಬ್ಬ ಕೋಟೆ, ಕರುಣಾಕರ್ ಪೂಜಾರಿ, ಸಂತೋಷ್ ಪಡುಬಿದ್ರಿ, ವಿಶಾಲ್ ಬಂಗೇರ ,ಸೌಮ್ಯ ರಿತೇಶ್ ,ಹಸನ್ ಕೋಡಿ, ಮಜೀದ್ ಕನ್ನಾಂಗರ್ ,ಶರೀಫ್ ಬೋರುಗುಡ್ಡೆ , ಮಹಮ್ಮದ್ ಇಕ್ಬಾಲ್ ,ಹಮೀದ್ ಹಾಜಿ,ಅಬ್ದುಲ್ ರಝಾಕ್ , ಸಫ್ವಾನ್ ಹಾಗೂ ಪಕ್ಷದ ಕಾರ್ಯಕರ್ತರು ಹಾಗೂ ನಾಗರಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *