×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕೌಶಲ್ಯದಿಂದ ಬದುಕು ಹಸನು : ಶ್ರೀ. ಶಿವರಾಮ್ ಎಂ ಬಾಬು, ಐ ಎಫ್ ಎಸ್, ಉಪ- ಅರಣ್ಯ ಸಂರಕ್ಷಣಾಧಿಕಾರಿಗಳು, ಕುದುರೆಮುಖ ವನ್ಯ ಜೀವಿ ವಿಭಾಗ

ಬ್ರಹ್ಮಾವರ: ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್ ಸೆಟ್) ಸಂಸ್ಥೆ, ಬ್ರಹ್ಮಾವರ ಇವರ ಆಶ್ರಯದಲ್ಲಿ ಫೋಟೋಗ್ರಫಿ ಮತ್ತು ವೀಡಿಯೋಗ್ರಫಿ ತರಬೇತಿಯ ಉದ್ಘಾಟನಾ ಸಮಾರಂಭವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಶ್ರೀ. ಶಿವರಾಮ್ ಎಂ ಬಾಬು, ಐ ಎಫ್ ಎಸ್, ಉಪ- ಅರಣ್ಯ ಸಂರಕ್ಷಣಾಧಿಕಾರಿಗಳು, ಕುದುರೆಮುಖ ವನ್ಯ ಜೀವಿ ವಿಭಾಗ, ಫೋಟೋಗ್ರಫಿ ಹಾಗೂ ವೀಡಿಯೋಗ್ರಫಿ ತರಬೇತಿಯು ಬಹಳ ಬೇಡಿಕೆಯಿರುವ ಕ್ಷೇತ್ರವಾಗಿರುವುದರಿಂದ ಆಸಕ್ತಿಯನ್ನು ಹೊಂದಿ ತರಬೇತಿಯಲ್ಲಿ ಪಾಲ್ಗೊಳ್ಳಿ ಎಂದರು. ಇಂತಹ ಅವಕಾಶಗಳನ್ನು ಎಂದಿಗೂ ವ್ಯರ್ಥ ಮಾಡದೇ, ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಕರೆ ನೀಡಿದರು. ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ಯಾವುದಾದರೂ ಒಂದು ಕ್ಷೇತ್ರದಲ್ಲಿ ಕೌಶಲ್ಯವನ್ನು ಕಲಿತು, ಪಕ್ವತೆ ಪಡೆದುಕೊಳ್ಳುವುದು ಬಹಳ ಮುಖ್ಯ. ನಾವು ಅರಸಿಕೊಂಡು ಹೋಗುವ ಉದ್ಯೋಗ ಕೈಗೆ ಸಿಗದಿದ್ದರೂ ನಮ್ಮಲ್ಲಿರುವ ಕೌಶಲ್ಯದಿಂದ ಬದುಕು ಕಟ್ಟಿಕೊಳ್ಳಬಹುದು. ಹಾಗಾಗಿ ಕೌಶಲ್ಯದಿಂದ ಬದುಕು ಹಸನಾಗುವುದು ಖಂಡಿತ. ಈ ನಿಟ್ಟಿನಲ್ಲಿ ಒಂದು ತಿಂಗಳು ತಮ್ಮ ಇತರೆ ಕೆಲಸಗಳನ್ನು ಬದಿಗಿರಿಸಿ, ಸಂಸ್ಥೆಯು ನೀಡುವ ತರಬೇತಿಯನ್ನು ಉತ್ತಮ ರೀತಿಯಲ್ಲಿ ಪಡೆದು ಯಶಸ್ವಿ ಉದ್ಯಮಗಳಾಗಿ ಎಂದು ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ಅದೇ ರೀತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ ಡಾ. ಬೊಮ್ಮಯ್ಯ ಎಂ ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿ ತರಬೇತಿಯನ್ನು ಶ್ರದ್ಧೆಯಿಂದ ಕಲಿಯಿರಿ, ಕಲಿತ ವಿದ್ಯೆ ಎಂದಿಗೂ ನಿಮ್ಮ ಕೈ ಬಿಡುವುದಿಲ್ಲ. ಶ್ರದ್ಧೆಯಿಂದ, ಗಮನವಿಟ್ಟು ಕಲಿಯಿರಿ. ಎಂದು ಹೇಳಿದರು. ಅದೇ ರೀತಿ ಸಂಸ್ಥೆಯ ಅನುಭವವನ್ನು ಇತರರೊಂದಿಗೆ ಹಂಚಿಕೊಳ್ಳುವ ಮೂಲಕ ಗ್ರಾಮೀಣ ಜನರು ತರಬೇತಿಯನ್ನು ಪಡೆದು ಆರ್ಥಿಕ ಪ್ರಗತಿಯನ್ನು ಸಾಧಿಸುವಂತೆ ಪ್ರೇರೇಪಿಸಿ ಎಂದು ಹೇಳಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮವನ್ನು ಉಪನ್ಯಾಸಕಿ ಶ್ರೀಮತಿ ಚೈತ್ರ ಕೆ. ನಿರೂಪಿಸಿ, ಸ್ವಾಗತಿಸಿದರು. ಹಿರಿಯ ಉಪನ್ಯಾಸಕರಾದ ಸಹಾಯಕ ಶ್ರೀ. ಸಂತೋಷ್ ವಂದಿಸಿದರು.

Leave a Reply

Your email address will not be published. Required fields are marked *