ಸಮಾಜ ಸೇವಕರು, ಸಮಾಜದ ಅಭಿವೃದ್ಧಿ, ಮಾನವೀಯ ಮೌಲ್ಯಗಳ ಪ್ರತಿಷ್ಠಾಪನೆ, ಜನಸೇವೆ ಹಾಗೂ ಸಮಾಜಮುಖಿ ಕಾರ್ಯಗಳ ಮೂಲಕ ಜನಸಾಮಾನ್ಯರ ಹಿತಕ್ಕಾಗಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಕೆ.ಪಿ. ಇಬ್ರಾಹಿಂ ಅವರ ಸಮಾಜಸೇವಾ ಕ್ಷೇತ್ರದ ವಿಶಿಷ್ಟ ಕೊಡುಗೆ, ಸೇವಾ ಮನೋಭಾವ ಹಾಗೂ ಜನಪರ ಕಾರ್ಯಗಳನ್ನು ಪರಿಗಣಿಸಿ, ದಿನಾಂಕ: 28-06-2026ನೇ ಭಾನುವಾರ ಮಲ್ಲಿಗೆನಾಡು ಹೂವಿನಹಡಗಲಿ ಎಸ್.ಆರ್ ಎಂ.ಪಿ.ಪಿ. ಪದವಿ ಕಾಲೇಜು ಆವರಣದಲ್ಲಿ, ನಡೆದ. ಉದಯ ದಿಗಂತ ದಿನಪತ್ರಿಕೆಯ 2026ನೇ ಸಾಲಿನ ವಾರ್ಷಿಕೋತ್ಸವ ಹಾಗೂ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ‘ರಾಜ್ಯ ಮಟ್ಟದ ರಾಜರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು

ಈ ಸಂದರ್ಭದಲ್ಲಿ ಮ.ನಿ.ಪ್ರ. ಅಭಿನವ ಚನ್ನಬಸವ ಮಹಾಸ್ವಾಮಿಗಳು, ಮಲ್ಲನಕೆರೆ ಮಠ, ಹೂವಿನಹಡಗಲಿ.ಶ್ರೀ ಹಜರತ್ ಸುಫಿಯಾನ್ ಸಖಾಫಿ, ರಾಜ್ಯಾಧ್ಯಕ್ಷರು, ಎಸ್.ಎಸ್.ಎಫ್. ಸಂಘಟನೆ. ಬೆಂಗಳೂರು. ಫಾ॥ ಸಲ್ವಕುಮಾರ್, ಮಠಾಧಿಪತಿಗಳು, ಬಾಲಯೇಸುವಿನ ದೇವಾಲಯ, ಹೂವಿನಹಡಗಲಿ. ಶ್ರೀ ಸದ್ಗುರು ಗಾಡಿ ತಾತನವರು, ಚೌಕಿಮಠ, ಕೊಂಬಳಿ. ಇಮಾಮ್ ನಿಯಾಜ್, ಹುಡಾ ಅಧ್ಯಕ್ಷರು, ಹೊಸಪೇಟೆ. ಶ್ರೀ ಸುರೇಶ್ ಅಂಗಡಿ, ಸದಸ್ಯರು, ವಿಜಯನಗರ ಜಿಲ್ಲಾ ಕನ್ನಡ ಜಾಗೃತಿ ಸಮಿತಿ, ಕರ್ನಾಟಕ ಮುಂತಾದವರು ಉಪಸ್ಥಿತರಿದ್ದರು

