×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಬೊಳ್ಳೂರಿನ ರಿಲಯನ್ಸ್ ಎಸೋಸಿಯೇಶನ್ ವತಿಯಿಂದ ಉಚಿತ ಪುಸ್ತಕ ವಿತರಣೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ

ರಿಲಯನ್ಸ್ ಎಸೋಸಿಯೇಶನ್ ಬೊಳ್ಳೂರು ಹಳೆಯಂಗಡಿ ಇದರ ವತಿಯಿಂದ ತೈತೋಟ ಚಾರಿಟೇಬಲ್ ಟ್ರಸ್ಟ್ ಬೊಳ್ಳೂರು ಇದರ ಸಹಭಾಗಿತ್ವದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಮತ್ತು SSLC ಹಾಗು PUC ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಇಂದಿರಾನಗರದ ರಿಲಯನ್ಸ್ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ರಿಲಯನ್ಸ್ ಅಸೋಸಿಯೇಷನ್ ಅಧ್ಯಕ್ಷ ಎಂ.ಎ ಇಕ್ಬಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಉದ್ಘಾಟಿಸಿ ಮಾತನಾಡಿದ ಬೊಳ್ಳೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶಶಿಕಲಾ ಇಲ್ಲಿನ ರಿಲಯನ್ಸ್ ಸಂಸ್ಥೆಯು ಕಳೆದ ಹಲವಾರು ವರ್ಷಗಳಿಂದ ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಕೊಂಡು ಸದಾ ಒಂದಲ್ಲೊಂದು ಕಾರ್ಯಕ್ರಮಗಳನ್ನು ನಡೆಸುವ ಉತ್ತಮ ಬೆಳವಣಿಗೆಯನ್ನು ಹೊಂದಿದೆ. ಬಡ ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಪ್ರತಿ ವರ್ಷವೂ ಅವರಿಗೆ ಪ್ರೋತ್ಸಾಹಧನ ಜೊತೆಗೆ ಗೌರವಪೂರ್ವಕ ಸನ್ಮಾನ ನೀಡುವ ಕಾರ್ಯಕ್ರಮಗಳನ್ನು ನಡೆಸುತ್ತಾ, ರಿಲಯನ್ಸ್ ಸಂಸ್ಥೆಯು ಮಕ್ಕಳ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಪ್ರೇರಣೆ ನೀಡುತ್ತಿದೆ. ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿ ಪ್ರತಿಭಾವಂತ ಮಕ್ಕಳನ್ನು ಪ್ರೋತ್ಸಾಹಿಸುವುದರಿಂದ ಅವರು ಭವಿಷ್ಯದಲ್ಲಿ ಇನ್ನಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತದೆ’ ಎಂದರು. ಈ ವರ್ಷವೂ ಸಂಸ್ಥೆಯೊಂದಿಗೆ ಮನವಿ ಮಾಡಿದಾಗ ಉತ್ತಮ ರೀತಿಯಲ್ಲಿ ಸ್ಪಂದಿಸಿ, ಶಾಲೆಯ ಎಲ್ಲಾ ಮಕ್ಕಳಿಗೆ ಉಚಿತ ಪುಸ್ತಕದ ಜೊತೆಗೆ ಕೊಡೆಯ ವ್ಯವಸ್ಥೆ ಮಾಡಿದರು.

ವೇದಿಕೆಯಲ್ಲಿ ತೈತೋಟ ಚಾರಿಟೇಬಲ್ ಟ್ರಸ್ಟ್ ನ ಬದ್ರುದ್ದೀನ್, ಉದ್ಯಮಿ ಶರೀಫ್ ಸೌದಿ ಅರೇಬಿಯಾ, ರಿಲಯನ್ಸ್ ಸೌದಿ ಘಟಕದ ಅಧ್ಯಕ್ಷರಾದ ಜಲೀಲ್ ನವರಂಗ್, ಮಾಜಿ ಅಧ್ಯಕ್ಷ ಕಲಂದರ್ ಕೌಶಿಕ್ ಹಾಗು ಟೈಕ್ವೊಂಡೋ ಸಹ ತರೆಬೇತುದಾರ ಅಯಾಜ್ ಅವರು ಉಪಸ್ಥಿತರಿದ್ದರು.

2025-26ನೇ ಸಾಲಿನ SSLC ಹಾಗು PUC ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡ ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರತಿಭಾವಂತ SSLC ವಿದ್ಯಾರ್ಥಿಗಳಾದ ಆಯೇಷಾ ಸಜ್ಮ್ , ರೋಶನಿ ಐಓನ, ಆಯಿಷಾ ನಿಜ್ಮ್, ತನ್ವಿ ಎಸ್ ಸಾಲಿಯಾನ್, ಆಯಿಷಾ ಅಶಿರ, ಫಾತಿಮಾ ಆಫೀಫಾ, ಜಿತೇಶ್ ಎಸ್ ಕರ್ಕೇರ, ಜಿತೀನ್ ಎಸ್ ಕರ್ಕೇರ ಹಾಗು PUC ವಿದ್ಯಾರ್ಥಿಗಳಾದ ಆಯಿಷಾ ನೀಮಾ, ಚೈತ್ರ ಶೆಟ್ಟಿಗಾರ್, ಅಫ್ರೀನಾ, ಮಿಶಲ್, ಫಾತಿಮಾ ರೈಫಾನ, ಶೊಇಬತುಲ್ ಅಸ್ಲಾಮಿಯ, ಆಫ್ಸೀನ್ ಖತೀಜ, ರಿದಾ ಫಾತಿಮಾ, ಶೇಖ್ ಅರ್ಕಾನ್ ಅನ್ವರ್, ಫಾತಿಮಾ ತನ್ವಿರ ಇವರಿಗೆ ಇದೇ ವೇಳೆ ಸಂಸ್ಥೆಯ ವತಿಯಿಂದ ಪ್ರೋತ್ಸಾಹಧನ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಕೊನೆಯಲ್ಲಿ ಸಂಸ್ಥೆಯಲ್ಲಿ ನೂತನವಾಗಿ ಪ್ರಾರಂಭಿಸಿದ ಟೈಕ್ವೊಂಡೋ ಮಾರ್ಸಲ್ ಆರ್ಟ್ಸ್ ತರಗತಿಯ ಉದ್ಘಾಟನೆಯು ನಡೆಯಿತು. ಟೈಕ್ವೊಂಡೋ ಕರಾಟೆ ತರೆಬೇತುದಾರರಾದ ಆಸೀಫ್ ಕಿನ್ಯ ಅವರು ಕರಾಟೆಯ ಶಕ್ತಿ ಪ್ರದರ್ಶನಗಳನ್ನು ನೀಡಿದರು. ಸಂಸ್ಥೆಯ ಉಪಾಧ್ಯಕ್ಷ ಇಲ್ಯಾಸ್ ಅಲ್ ಅಕ್ಸ, ಕಾರ್ಯದರ್ಶಿ ಮುಬಾರಕ್ ಬೊಳ್ಳೂರು, ಲೆಕ್ಕ ಪರಿಶೋಧಕ ಅಕ್ಬರ್ ಬೊಳ್ಳೂರು ಅವರು ಈ ವೇಳೆ ಉಪಸ್ಥಿತರಿದ್ದರು.

ಈ ವೇಳೆ ರಿಲಯನ್ಸ್ ನ ಸದಸ್ಯರಾದ ಶಮೀಮ್ ಬೊಳ್ಳೂರು, ಮಮ್ತಾಜ್ ಕಲ್ಲಾಪು, ಫಾರೂಕ್ ಫ್ಯಾನ್ಸಿ, ಸಿದ್ದಿಕ್ ಬೊಳ್ಳೂರ್, ಬಾವ ನವರಂಗ್, ಯೂಸುಫ್ ಹೈದರ್ ಬೊಳ್ಳೂರು, ಶಂಶೀರ್ ಎಂ.ಎಂ, ನಜೀರ್ ಎಂ.ಎಂ , ಹಕೀಮ,ಅಶ್ರಫ್ ದುಬೈ, ರಿಯಾಜ್, ಯೂಸುಫ್, ಯಾಸೀನ್, ಸಾಹುಲ್, ಇಸ್ಮಾಯಿಲ್ ಬಾವ, ರಿಯಾಜ್ ಬೊಳ್ಳೂರ್ ಹಾಗು ಇನ್ನಿತರ ಸದಸ್ಯರು ಹಾಜರಿದ್ದರು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮೊಯಿದಿನ್ ಬಿ.ಎಂ ಕಾರ್ಯಕ್ರಮ ನಿರೂಪಿಸಿದರು.ಸಂಸ್ಥೆಯ ಸಲಹೆಗಾರರಾದ ಆರಿಶ್ ನವರಂಗ್ ವಂದಿಸಿದರು.

Leave a Reply

Your email address will not be published. Required fields are marked *