×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಜೂನ್ 26ರಂದು ಕಾಪುವಿನಲ್ಲಿ ಮುಕ್ತ ಹಾಗೂ ಮಕ್ಕಳ ರಾಪಿಡ್ ಚೆಸ್ ಸ್ಪರ್ಧೆ

ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್ ಕಾಪು ವತಿಯಿಂದ 29th ಶ್ರೀ ನಾರಾಯಣ ಗುರು ಟ್ರೋಫಿ ಚೆಸ್ ಸ್ಪರ್ಧೆ ಶ್ರೀ ಹಳೇ ಮಾರಿಯಮ್ಮ ಸಭಾಭವನದಲ್ಲಿ ತಾ 26 ಜೂನ್ 2026 ರಂದು ಜರುಗಲಿದೆ. ಮುಕ್ತ ವಿಭಾಗದಲ್ಲಿ 15 ನಗದು ಬಹುಮಾನಗಳು ಮೂರು ಟ್ರೋಫಿ ಹಾಗೂ ವಯೋಮಿತಿ 7 9 11 13 ಮತ್ತು 17ರಲ್ಲಿ ಪ್ರತಿ ವಿಭಾಗದಲ್ಲಿ 20 ಟ್ರೋಫಿ ಅನ್ನು ಕೊಡಲಾಗುವುದು ಹಿರಿಯ ನಾಗರಿಕರಿಗೆ 750 ರೊಂದಿಗೆ ಪ್ರಥಮ ನಗದು ಹಾಗೂ ಒಟ್ಟು ಐದು ಟ್ರೋಫಿ, ಉತ್ತಮ ಮಹಿಳಾ ಆಟಗಾರರಿಗೆ 750 ಪ್ರಥಮ ನಗದು ಹಾಗೂ ಒಟ್ಟು 5 ಟ್ರೋಫಿ ಅತಿ ಕಿರಿಯ ಬಾಲಕ ಬಾಲಕಿಯರಿಗೆ ಎರಡು ಟ್ರೋಫಿ ವಯೋಮಿತಿ ಏಳರಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಳುಗಳಿಗೆ ಬಹುಮಾನವನ್ನು ಕೊಡಲಾಗುವುದು ಒಟ್ಟಿಗೆ ನಗದು 25500 ಟ್ರೋಫಿ 115ನ್ನು ಒಳಗೊಂಡಿರುತ್ತದೆ

ಜೂನ್ 26ರಂದು ಬೆಳಗ್ಗೆ ಉದ್ಘಾಟನಾ ಸಮಾರಂಭದಲ್ಲಿ ಅಪಿಲಿಯನ್ಸ್ ಟೆಕ್ನಾಲಜಿ ಮಂಗಳೂರು ಸಂಸ್ಥಾಪಕ ಶ್ರೀ ಅವಿನಾಶ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ, ನಿವೃತ್ತ ಉಡುಪಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಶ್ರೀ ಸೀತಾನದಿ ವಿಠಲ ಶೆಟ್ಟಿ ಹೆಬ್ರಿ ದೀಪ ಪ್ರಜ್ವಲನೆ ಮಾಡಲಿದ್ದಾರೆ ಎಸ್ ಎನ್ ಜಿ ಸ್ಪೋರ್ಟ್ಸ್ ಅಂಡ್ ಎಜುಕೇಶನ್ ಟ್ರಸ್ಟ್ ಕಾಪು ಅಧ್ಯಕ್ಷ ಶ್ರೀ ಉಮಾನಾಥ್ ಕಾಪು ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಶನ್ ಕಾರ್ಯದರ್ಶಿ ಶ್ರೀ ಸಿದ್ದಕೃಷ್ಣ ಆಸರೆ ಚಾರಿ ಟೇಬಲ್ ಟ್ರಸ್ಟ್ (ರಿ.)ಪಾಂಗಳ ಸಂಸ್ಥಾಪಕ ಶ್ರೀ ಪೆನ್ವಿಲ್ ಸೋನ್ಸ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ

ಜೂನ್ 26ರಂದು ಸಂಜೆ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಎಸ್ ಎನ್ ಜಿ ಸ್ಪೋರ್ಟ್ಸ್ & ಎಜುಕೇಶನ್ ಟ್ರಸ್ಟ್ ಕಾಪು ಅಧ್ಯಕ್ಷ ಶ್ರೀ ಉಮಾನಾಥ ಕಾಪು, ಬಹುಮಾನ ವಿತರಕರಾಗಿ ಶ್ರೀ ಪ್ರಭಾಕರ್ ಪೂಜಾರಿ ಉಡುಪಿ ಉದ್ಯಮಿ ಬಹುಮಾನವನ್ನು ವಿತರಿಸಲಿದ್ದಾರೆ. ಶ್ರೀ ಸಿದ್ಧಿ ವಿನಾಯಕ ಚೆಸ್ ಅಕಾಡೆಮಿ ಕುಂದಾಪುರ ಸಂಸ್ಥಾಪಕ ಶ್ರೀ ಬಾಬು ಪೂಜಾರಿ ಸುನಿಲ್ ಪೂಜಾರಿ ಎಸ್ ಬಿ ಐ ಕಾಪು ಶ್ರೀ ನಾಗೇಶ್ ಕಾರಂತ್ ಪಾಂಗಳ ಉಪಸ್ಥಿತಿಯಿರುವರು

Leave a Reply

Your email address will not be published. Required fields are marked *