×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಎಸ್ ಐ ಆರ್: ಸಾಂವಿಧಾನಿಕ ಹಕ್ಕು ಕಾಪಾಡಲು ಸಿಪಿಐ(ಎಂ) ಮನವಿ

ಭಾರತ ಚುನಾವಣಾ ಆಯೋಗವು ದೇಶದಾದ್ಯಂತ “ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐ ಆರ್) ಜೂನ್ 30 ರಿಂದ ಪ್ರಕ್ರಿಯೆ ಆರಂಭವಾಗಲಿದ್ದು ಕೆಲವು ದಾಖಲೆಗಳನ್ನು ಕೇಳುತ್ತಿದ್ದು ಭಾರತೀಯನಾಗಿದ್ದು ಕೆಲವು ದಾಖಲೆಗಳನ್ನು ಒದಗಿಸಲು ಸಮಸ್ಯೆಯಾದರೆ ಜಿಲ್ಲಾಡಳಿತವು ಅಂತಹ ದಾಖಲೆಗಳನ್ನು ಸುಸೂತ್ರವಾಗಿ ಶೀಘ್ರ ದಾಖಲೆಗಳನ್ನು ಒದಗಿಸಲು ಮುಂದಾಗಬೇಕು ಎಂದು ಸಿಪಿಎಂ ಜಿಲ್ಲಾ ಸಮಿತಿ ಇಂದು ಅಪರ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ ನೀಡಿತು.
ಸಾಂವಿಧಾನಿಕ ಹಕ್ಕನ್ನು ಚಲಾಯಿಸಲು ಕೆಲವು ದಾಖಲೆಗಳನ್ನು ಹೊಂದಿಸಿಕೊಳ್ಳಲಾಗದ ಕೋಟ್ಯಂತರ ಬಡಜನರು, ಕೂಲಿಕಾರರು, ವಲಸೆ ಕಾರ್ಮಿಕರು, ಮಹಿಳೆಯರು,ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು ದೇಶದಲ್ಲಿ ಈಗಾಗಲೇ ಎಸ್ ಐ ಆರ್ ನಡೆಸಿರುವ ರಾಜ್ಯಗಳಲ್ಲಿ ಸುಮಾರು 6.5 ಕೋಟಿ ಜನ ಮತದಾರರು ಪಟ್ಟಿಯಿಂದ ಹೊರಗುಳಿಯುವಂತಾಗಿದೆ.
ಇದುವರೆಗಿನ ಎಸ್ ಐ ಆರ್ ಜಾರಿಯಲ್ಲಿ ಪಶ್ಚಿಮ ಬಂಗಾಳವನ್ನು ಹೊರತುಪಡಿಸಿದರೆ ಬೇರಾವ ರಾಜ್ಯಗಳಲ್ಲೂ ಜಾರಿ ಮಾಡದಿದ್ದ ‘ತಾರ್ಕಿಕ ವ್ಯತ್ಯಾಸ’ ಮಾನದಂಡವನ್ನು ಕರ್ನಾಟಕ ರಾಜ್ಯದಲ್ಲಿ ಚುನಾವಣಾ ಆಯೋಗ ಅಳವಡಿಸಿರುವುದು ಖಂಡನೀಯವಾಗಿದೆ.
ಕೇಂದ್ರದ ಬಿಜೆಪಿ ಸರಕಾರವು ಸಂವಿಧಾನ ವಿರೋಧಿಯಾದ ಎಸ್ ಐ ಆರ್ ಜಾರಿಗೊಳಿಸಿರುವುದನ್ನು ಕರ್ನಾಟಕ ರಾಜ್ಯ ಸರ್ಕಾರ ಎಲ್ಲರ ಹಕ್ಕುಗಳನ್ನು ರಕ್ಷಿಸಲು ಮುಂದಾಗಬೇಕು ಎಂದು ಸಿಪಿಎಂ ಜಿಲ್ಲಾ ಸಮಿತಿ ಆಗ್ರಹಿಸಿದೆ.
ಬೇಡಿಕೆಗಳು:
1.ಪ್ರತಿಯೊಬ್ಬ ನಾಗರಿಕರ ಮತದಾನದ ಹಕ್ಕು ರಕ್ಷಿಸಬೇಕು ದಾಖಲೆಗಳ ಕೊರತೆಯಿಂದ ಯಾರ ಹೆಸರನ್ನೂ ಮತದಾರರ ಪಟ್ಟಿಯಿಂದ ತೆಗೆಯದಂತೆ ಅಗತ್ಯ ಕ್ರಮವಹಿಸಬೇಕು.
2.ಯಾರಿಗೆ ಚುನಾವಣಾ ಆಯೋಗ ನಿಗದಿಪಡಿಸಿರುವ 11 ದಾಖಲೆಗಳ ಪೈಕಿ ಒಂದು ದಾಖಲೆಯನ್ನೂಒದಗಿಸಲು ಸಾಧ್ಯವಿಲ್ಲವೋ ಅಂತವರಿಗೆ ಜನನ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ,ಖಾಯಂ ವಾಸ ದೃಢೀಕರಣ ಪತ್ರ ಇತ್ಯಾದಿ ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವಂತೆ ನಿಯಮಗಳನ್ನು ಸರಳಗೊಳಿಸಿ, ಸುಲಭವಾಗಿ ಮತ್ತು ಶೀಘ್ರವಾಗಿ ರಾಜ್ಯ ಸರ್ಕಾರವೇ ಒದಗಿಸಲು ಕ್ರಮ ತೆಗೆದುಕೊಳ್ಳಬೇಕು.
ದಾಖಲೆಯಿಲ್ಲ ಎಂಬ ಆತಂಕಕ್ಕೆ ಒಳಗಾಗುವ ಜನರಲ್ಲಿ ವಿಶ್ವಾಸ ತುಂಬುವ ದ್ರಷ್ಟಿಯಿಂದ ಮತದಾರರಿಗೆ ಆಗುವ ಅನಗತ್ಯ ವೆಚ್ಚ,ಸಮಯ ತಾಪತ್ರಯಗಳನ್ನು ತಪ್ಪಿಸಬೇಕು.
3.’ತಾರ್ಕಿಕ ವ್ಯತ್ಯಾಸ’ ಹೆಸರಿನಲ್ಲಿ ಪರಿಷ್ಕರಣೆಯನ್ನು ರಾಜ್ಯದಲ್ಲಿ ಅಳವಡಿಸದಂತೆ ಚುನಾವಣಾ ಆಯುಕ್ತರಿಗೆ ರಾಜ್ಯ ಸರ್ಕಾರ ಮನವಿ ನೀಡಬೇಕು.ಹೆಸರುಗಳ ಉಪನಾಮ,ಇನಿಷಿಯಲ್ ವ್ಯತ್ಯಾಸಗಳು,ವಯಸ್ಸಿನ ಅಂತರ ಕಡಿಮೆ ಅಥವಾ ಹೆಚ್ಚಿದೆಯೆಂದು, ಮತದಾರರ ಪಟ್ಟಿಯಿಂದ ಕೈ ಬಿಡದಂತೆ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಲು ಚುನಾವಣಾ ಆಯೋಗಕ್ಕೆ ಕೋರಬೇಕು.
4.ಮತದಾರರ ಪಟ್ಟಿಯನ್ನು ಕಂಪ್ಯೂಟರ್ ಓದಬಲ್ಲ ಮಾದರಿಯಲ್ಲಿ ಪ್ರಕಟಿಸುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಬೇಕು.
5.ರಾಜ್ಯ ಸರಕಾರ ತನ್ನ ಆಡಳಿತದ ಯಂತ್ರ ಬಳಸಿ ಹಾಗೂ ಬಿಎಲ್ಒ ಗಳ ಸಹಾಯದಿಂದ ಪ್ರತಿ ವಾರ್ಡ್/ಪಂಚಾಯಿತಿಗೆ ಅಗತ್ಯ ಸಂಖ್ಯೆಯ ಮತದಾರರ ಸೇವಾ ಕೇಂದ್ರಗಳನ್ನು ತೆರೆದು ಜನರಿಗೆ ಅಗತ್ಯ ನೆರವು ನೀಡಲು ಮುಂದಾಗಬೇಕು ಎಂದು ಸಿಪಿಎಂ ಮನವಿಯಲ್ಲಿ ತಿಳಿಸಿದೆ. ನಿಯೋಗದಲ್ಲಿ ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಕಾರ್ಯದರ್ಶಿ ಮಂಡಳಿ ಸದಸ್ಯ ಚಂದ್ರಶೇಖರ ವಿ, ಶಶಿಧರ ಗೊಲ್ಲ, ಕವಿರಾಜ್ ಎಸ್ ಕಾಂಚನ್, ಉಮೇಶ್ ಕುಂದರ್, ನಳಿನಿ ಇದ್ದರು. *ಸುರೇಶ್ ಕಲ್ಲಾಗರ* ಕಾರ್ಯದರ್ಶಿ ಮೊ7760082920

Leave a Reply

Your email address will not be published. Required fields are marked *