×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಆನೆಗುಂದಿ ಶ್ರೀಗಳ ಪಟ್ಟಾಭಿಷೇಕ ವರ್ಧಂತಿ, ಪ್ರಶಸ್ತಿ ಪ್ರದಾನ

ಕಾಪು : ಭಾರತೀಯ ಸಂಸ್ಕೃತಿಯೇ ದೇವಾಲಯದ ಸಂಸ್ಕೃತಿ ಶಿಲ್ಪಗಳಾಗಿವೆ. ಆಧುನಿಕ ವಿಜ್ಞಾನಗಳಿಗೆ ಸವಾಲಾಗಿರುವ ವಿಶ್ವಕರ್ಮ ಶಿಲ್ಪಿ ಸಮುದಾಯದ ಅದ್ಭುತ ಶಿಲ್ಪಗಳ ದೇವಾಲಯಗಳ ಶಿಲ್ಪವೇ ಭಾರತೀಯ ಸಂಸ್ಕೃತಿಯಾಗಿದೆ. ಹೀಗೆ ಪ್ರವಾಸೋದ್ಯಮಕ್ಕೆ ಆಧಾರವಾಗಿರುವ ಭಾರತೀಯ ಶಿಲ್ಪ ವೈಭವಗಳ ದೇವಾಲಯಗಳು ಭಾರತ ಸರಕಾರದ ಆದಾಯದ ಮೂಲವೂ ಆಗಿದೆ ಎಂದು ಪಡುಕುತ್ಯಾರು ಶ್ರೀಮತ್‌ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಶ್ವವರ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಹೇಳಿದರು.

ಶ್ರೀಗಳವರು ಪಡುಕುತ್ಯಾರಿನ ಮಹಾಸಂಸ್ಥಾನದಲ್ಲಿ ತಮ್ಮ ೧೬ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವದ ವರ್ಧಂತ್ಯುತ್ಸವದ ಸಂದರ್ಭ ಜರಗಿದ ಧಾರ್ಮಿಕ ಸಭೆಯಲ್ಲಿ ವಾಸ್ತುಶಿಲ್ಪ ಮತ್ತು ಶಿಲ್ಪಕಲೆ ಸಾಧಕರಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ, ಆನೆಗುಂದಿಶ್ರೀ ಪ್ರಶಸ್ತಿ ವಿತರಣೆ ಹಾಗೂ ಯುವ ಶಿಲ್ಪಿಗಳಿಗೆ ಅಭಿನಂದನಾ ಕಾರ್ಯಕ್ರಮವನ್ನು ನೆರವೇರಿಸಿ ಬಳಿಕ ತಮ್ಮ ಆಶೀರ್ವಚನದಲ್ಲಿ ಸಂದೇಶ ನೀಡಿದರು. ನವ್ಯ ಶಿಲ್ಪ ಮತ್ತು ಪಾರಂಪರಿಕ ಶಿಲ್ಪ ಕಲೆಯನ್ನು ಉಳಿಸಿ, ಬೆಳೆಸಬೇಕೆಂಬ ಸಂಕಲ್ಪದೊಂದಿಗೆ ಶಾಸ್ತ್ರ ಸಹಿತವಾದ ಶಿಲ್ಪ ಅಧ್ಯಯನ ಕೇಂದ್ರ ಮತ್ತು ಶಿಲ್ಪ ಮ್ಯೂಸಿಯಂ ಕೇಂದ್ರ ವನ್ನು ಸ್ಥಾಪಿಸಬೇಕೆಂಬ ಮಹದಾಸೆಯಿದೆ. ಅದಕ್ಕೆ ಸರ್ಕಾರ ಮತ್ತು ಸಮಾಜ ಭಾಂಧವರೆಲ್ಲರ ಸಹಕಾರದ ಅಗತ್ಯವಿದೆ ಎಂದು ಅವರು ಅಭಿಪ್ರಾಯಿಸಿದರು. ಸಂಕಲ್ಪ ವಿಕಲ್ಪಗಳು ಮನಸ್ಸಿನ ಸ್ವಭಾವ. ದೇಹವೇ ದೇಶವಾಗಿದೆ. ದೇಹದೊಳಗಿನ ಆತ್ಮವೇ ರಾಜ. ಅರಿಷಡ್ವರ್ಗಗಳನ್ನು ಗೆದ್ದು, ಹೃದಯ ಸಿಂಹಾಸನದಲ್ಲಿ ಕುಳಿತುಕೊಳ್ಳುವವರಿಗೆ ಪಟ್ಟಾಭಿಷೇಕ ಆಗುತ್ತದೆ.

ದರ ದ್ಯೋತಕವಾಗಿ ಅಂತರಂಗದ ಪಟ್ಟಾಭಿಷೇಕಕ್ಕೆ ಹಾಗೂ ಬಾಹ್ಯ ವರ್ಧಂತ್ಯೋತ್ಸವವನ್ನು ಶ್ರದ್ಧಾ ಭಕ್ತಿಯ ಪ್ರತೀಕವಾಗಿ ನೆರವೇರಿಸಿದ್ದು, ಬಹಳಷ್ಟು ಖುಷಿಯ ವಿಚಾರವಾಗಿದೆ, ಸಂಸ್ಕಾರದ ತಳಹದಿಯಲ್ಲಿ ಸಮಾಜವನ್ನು ಕಟ್ಟಬೇಕು. ಆ ನಿಟ್ಟಿನಲ್ಲಿ ದೇವಸ್ಥಾನ – ಮಠ – ಸಮಾಜವು ಒಂದಾಗಿ ಸಾಗುವುದು ಆರೋಗ್ಯಕರ, ಶ್ರೀಮಠದ ಸಮಸ್ತ ಯೋಜನೆಗಳಿಗೆ ಸಮಾಜವು ಕೈ ಜೋಡಿಸುವಂತೆ ವಿನಂತಿಸಿದರು.

ಆಸ್ಥಾನ ವಿದ್ವಾಂಸ ಪಂಜ ಭಾಸ್ಕರ ಭಟ್ ಮಾತನಾಡಿ, ಆಧುನಿಕತೆಯ ಸೋಗಿನಲ್ಲಿ ನಶಿಸುತ್ತಿರುವ ಸಾಂಪ್ರದಾಯಿಕ ಶಿಲ್ಪಕಲಾ ವೈಭವನ್ನು ಮತ್ತಷ್ಟು ಮುನ್ನಲೆಗೆ ತರುವ ನಿಟ್ಟಿನಲ್ಲಿ ಪ್ರಯತ್ನಗಳು ಮುಂದವರಿಯಬೇಕಿವೆ. ವಿಶೇಷವಾಗಿ ಕಾಷ್ಠ ಶಿಲ್ಪಕಲೆಯ ಬಗ್ಗೆ ಹೆಚ್ಚಿನ ಉತ್ಸಾಹ ಮತ್ತು ಕಾಳಜಿ ತೋರಿಸಬೇಕಿದೆ ಎಂದರು. ಬ್ರಹ್ಮಶ್ರೀ ವಿದ್ವಾನ್ ಶಂಕರಾಚಾರ್ಯ ಕಡ್ಡಾಸ್ಕರ್ ಪಂಡಿತ್ ಹುಬ್ಬಳ್ಳಿ ಅವರು ಮಹಾಸಂಸ್ಥಾನದ ಪರಂಪರೆಯ ಬಗ್ಗೆ ವಿವರಣೆನೀಡಿ ಧರ್ಮ ಸಂದೇಶ ನೀಡಿದರು

Leave a Reply

Your email address will not be published. Required fields are marked *