×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ಕಾಪು ವಲಯ ಸಮಿತಿಯ ರಜತ ಸಂಭ್ರಮ ಉದ್ಘಾಟಿಸಿದ – ಶಾಸಕ ಗುರ್ಮೆ ಸುರೇಶ್ ಶೆಟ್ಟಿ

ಕಾಪು, ಎ. 19: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ಕಾಪು ವಲಯ ಸಮಿತಿಯ ರಜತ ಸಂಭ್ರಮವು ಮಹಾದೇವಿ ಪ್ರೌಢಶಾಲೆಯಲ್ಲಿ ರವಿವಾರ ಜರಗಿತು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿ ಮಾತನಾಡಿ,ಟೈಲರ್‌ಗಳ ಕಷ್ಟವನ್ನು ಹತ್ತಿರದಿಂದ ಅರಿತಿದ್ದೇನೆ. ಸರಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಅಸೋಸಿಯೇಶನ್ ಪದಾಧಿಕಾರಿಗಳ ನಿಯೋಗವನ್ನು ಸರಕಾರದ ಬಳಿಗೆ ಕರೆದೊಯ್ದು ಮತ್ತೊಮ್ಮೆ ಸರಕಾರದ ಗಮನ ಸೆಳೆಯುವೆ ನಮ್ಮ ಪ್ರಯತ್ನ ನಿರಂತರ ಇರುತ್ತದೆ ನಾನು ಕೂಡ ತುಂಬಾ ಬಡತನ ಕುಟುಂಬದಲ್ಲಿ ಹುಟ್ಟಿದವನು ಹಸಿವು ಗೊತ್ತಿದೆ ಬಡತನ ಗೊತ್ತಿದೆ ಏಕಾಏಕಿ ಸಾಮಾಜಿಕ ಕ್ಷೇತ್ರಕ್ಕೆ ಬಂದವನಲ್ಲ ಇದನ್ನೆಲ್ಲಾ ಅನುಭವಿಸಿ ಒಂದು ಸ್ಥಾನಮಾನ ಈಗ ಸಿಕ್ಕಿದೆ ನನಗೆ ಬೇರೇನು ಆಸೆ ಇಲ್ಲ ಒಂದಷ್ಟು ಜನರ ಋಣವನ್ನು ತೀರಿಸಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದರು ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ದಯಾನಂದ ಕೋಟ್ಯಾನ್ ಮಾತನಾಡಿ, ಇಂದಿನ ದಿನಗಳಲ್ಲಿ ಜನರ ಆನ್ ಲೈನ್ ಖರೀದಿ, ಮಾಲ್‌ಗಳ ಮೇಲಿನ ಗ್ರಾಮೀಣ ಪರದಾಡುವಂತಾಗಿದೆ. ನಮ್ಮ ಬೇಡಿಕೆಗಳ ವ್ಯಾಮೋಹದಿಂದಾಗಿ ಭಾಗದ ಟೈಲರ್‌ಗಳು ಕೆಲಸವಿಲ್ಲದೆ ಬಗ್ಗೆ ಸರಕಾರ, ಜನಪ್ರತಿನಿಧಿಗಳ ಗಮನ ಸೆಳೆಯುವ ಕೆಲಸ ಮಾಡಬೇಕಿದೆ ಎಂದರು. ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಮಾಧವ ಆರ್. ಪಾಲನ್, ಕಾಪು ಲಕ್ಷ್ಮೀಜನಾರ್ದನ ‘ಟೆಕ್ಸ್‌ಟೈಲ್ಸ್ ಮಾಲಕ ಲಕ್ಷ್ಮೀನಾರಾಯಣ ತಂತ್ರಿ ಶುಭಾಶಂಸನೆಗೈದರು.

ಕೆಎಸ್ ಟಿಎ ಕಾಪು ವಲಯ ಸಮಿತಿ ಅಧ್ಯಕ್ಷ ಸುಧಾಕರ ಎನ್. ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ಕೆ. ಶ್ರೀನಿವಾಸ್ ಟೈಲರ್ ಅಸೋಸಿಯೇಶನ್ ಮತ್ತು ಟೈಲರ್‌ಗಳ ವಿವಿಧ ಬೇಡಿಕೆಗಳ ಬಗ್ಗೆ ಪ್ರಸ್ತಾವಿಸಿದರು. ಕೆಎಟಿಎ ರಾಜ್ಯ ಸಮಿತಿ ರಾಜ್ಯಾಧ್ಯಕ್ಷ ಸುರೇಶ್ ಸಾಲ್ಯಾನ್ ಮಂಗಳೂರು, ರಾಜ್ಯ ಸಮಿತಿ ಮಾಜಿ ಕೋಶಾಧಿಕಾರಿ ಅಬ್ದುಲ್ ಖಾದರ್, ದ.ಕ. ಜಿಲ್ಲಾ ಸಮಿತಿ ಪದಾಧಿಕಾರಿಗಳಾದ ಜಯಂತ್ ಗುರ್ಲಾಂಡಿ, ಕುಲಾಲ್, ನಾಗೇಶ್ ಆನಂದ ಪುತ್ರನ್,

ಉಡುಪಿ ಜಿಲ್ಲಾ ಸಮಿತಿ ಪ್ರ. ಕಾರ್ಯದರ್ಶಿ ಬಿ.ಕೆ. ಶ್ರೀನಿವಾಸ್, ಬೆಳ್ಳಣ್ಣುವಲಯ ಸಮಿತಿ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಕಟಪಾಡಿ ವಲಯ ಸಮಿತಿ ಅಧ್ಯಕ್ಷೆ ಹೇಮಲತಾ ಹೆಗ್ಡೆ ಪಡುಬಿದ್ರಿ ವಲಯ ಸಮಿತಿ ಅಧ್ಯಕ್ಷೆ ಪುಷ್ಪಲತಾ

ಶಿರ್ವ ವಲಯ ಸಮಿತಿ ಅಧ್ಯಕ್ಷೆಶರ್ಮಿಳಾ ಆಚಾರ್ಯ ಅತಿಥಿಗಳಾಗಿದ್ದರು. ವಿದ್ಯಾರ್ಥಿವೇತನ ಸಾಧಕರನ್ನು ವಿತರಿಸಿ, ಸಮ್ಮಾನಿಸಲಾಯಿತು. ಲಕ್ಕಿಡಿಪ್ ಡ್ರಾ ಫಲಿತಾಂಶ ಮತ್ತು ವೃತ್ತಿ ಬಾಂದವರಿಗಾಗಿ ಕ್ರೀಡಾ ಕೂಟ ಏರ್ಪಡಿಸಿದ್ದರು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಕಾಪು ವಲಯ ಸಮಿತಿ ಮಾಜಿ ಅಧ್ಯಕ್ಷೆ ಸುರೇಖಾ ಶೈಲೇಶ್ ಸ್ವಾಗತಿಸಿ, ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ ರಮಣಿ ಎಸ್. ಆಚಾರ್ಯ ವಂದಿಸಿದರು. ದಂಡತೀರ್ಥ ವಿದ್ಯಾ ಸಂಸ್ಥೆಯ ಉಪನ್ಯಾಸಕ ಶಿವಣ್ಣ ಬಾಯಾರು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *