
ಕಾಪು ಪರಿಸರದ ಜನಪ್ರಿಯ ಆರ್ಥಿಕ ಸಂಸ್ಥೆ ಅಕ್ಷಯಧಾರ ಕ್ರೆಡಿಟ್ ಕೋ-ಆಪರೇಟಿವ ಸೊಸೈಟಿ, ಇದರ 2021-32ರ ಸಾಲಿನ ವಾರ್ಷಿಕ ಮಹಾಸಭೆ ಕಾಪು ಭಾಸ್ಕರ ಸೌಧದಲ್ಲಿ ಅಧ್ಯಕ್ಷ ಲವ.ಎನ್.ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. 2022 ನೇ ಸಾಲಿನ ಅಂದಾಜು ಆಯವ್ಯಯ ಪಟ್ಟಿಯನ್ನು ಸಭೆಯಲ್ಲಿ ಮಂಜೂರು ಮಾಡಲಾಯಿತು. ಈ ಸಂಧರ್ಭದಲ್ಲಿ ವಾಣಿಜ್ಯ ವಿಭಾಗದ ಸ್ನಾತಕೋತ್ತರ ಪದವಿಯಲ್ಲಿ ಉತ್ತಮ ಅಂಕದೊಂದಿಗೆ ಕೀರ್ತನ ಯು ಕುಂದರ್ ಬಿ.ಎಸ್.ಸಿ.ಯಲ್ಲಿ ಪ್ರಥಮ ರಾಂಕ್ ಪಡೆ ಶ್ರಾವಿಕ ಶೆಟ್ಟಿ, ಎಸ್.ಎಸ್.ಎಲ್.ಸಿ ಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದ ಕೃತಿ ಎಸ್ ಆಚಾರ್ಯ ಇವರನ್ನು ಸನ್ಮಾನಿಸಲಾಯಿತು ಹಾಗೂ ಹೈದರಾಬಾದ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಕರಾಟೆಯಲ್ಲಿ ಪ್ರಥಮ ಸ್ಥಾನ ಪಡೆದ ಜಿಯಾ ಪೂಜಾರಿಯನ್ನು ಸನ್ಮಾನಿಸಲಾಯಿತು. ಸಂಸ್ಥೆಯೊಂದಿಗೆ ಆರಂಭದ ದಿನದಿಂದಲೂ ಆರ್ಥಿಕ ವ್ಯವಹಾರ ಮಾಡುತ್ತಿರುವ ಕೊಡುಗೆ ದಾನಿ ಚಂದ್ರ ಆಯ ಬಂಗೇರ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು ಸದಸ್ಯರ ಪರವಾಗಿ ಸೀತಾಲಕ್ಷ್ಮಿ ವ್ಯಾಸ ಸೀತಾರಾಮ ಸಾಲ್ಯಾನ್ ಮಾತನಾಡಿ ಸಲಹೆ ಸೂಚನೆ ನೀಡಿದರು. ಲೆಕ್ಕ ಪರಿಶೋಧಕರಾದ ಅಜಿತ್ ಕುಮಾರ್ ಸೊಸೈಟಿಯ ಒಟ್ಟು ವ್ಯವಹಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಸಲಹೆ ನೀಡಿದರು. ಅಧ್ಯಕ್ಷೀಯ ಭಾಷಣ ಮಾಡಿದ ಲವ ಕರ್ಕೇರ ಕಳೆದ 13 ವರ್ಷಗಳಿಂದ ನಮ್ಮ ಆರ್ಥಿಕ ಸಂಸ್ಥೆ ಶೇರುದಾರರ, ಗ್ರಾಹಕರ ಈವಣಿದಾರರ ಹಿತೈಷಿಗಳ ಸಹಕಾರದಿಂದ ಮುನ್ನಡೆಯುತ್ತಿದ್ದು, ಸಂಸ್ಥೆಯು ಬಲಿಷ್ಠವಾಗಿ ಬೆಳೆಯುವಲ್ಲಿ ಮುಂದಕ್ಕೂ ಎಲ್ಲರೂ ಸ್ಪಂದಿಸಬೇಕು. ನಮ್ಮ ಸಂಸ್ಥೆ ಗ್ರಾಹಕರಿಗೆ ಸಣ್ಣ ಉದ್ದಿಮೆದಾರರಿಗೆ ವಿವಿಧ ಸಾಲ ಸೌಲಭ್ಯಗಳನ್ನು ನೀಡುತ್ತಿದ್ದು ಇವರ ಸಂಸ್ಥೆ ಬೆಳೆಯುದರೊಂದಿಗೆ ನಮ್ಮ ಸಂಸ್ಥೆಯನ್ನು ಬೆಳೆಸಬೇಕು ಎಂದರು ಕಾರ್ಯದರ್ಶಿ ಅಮಿತಾ ದೇವದಾಸ್ ವಾರ್ಷಿಕ ವರದಿ ವಾಚಿಸಿದರೆ, ನಿರ್ದೇಶಕ ಜಗದೀಶ್ ಮೆಂಡನ್ ಲೆಕ್ಕಪತ್ರ ಮಂಡಿಸಿದರು.ಸೊಸೈಟಿಯ ಉಪಾಧ್ಯಕ್ಷ ಮೊಹಮ್ಮದ್ ಇರ್ಫಾನ್ ನಿರ್ದೇಶಕರುಗಳಾದ ವಿಜಯ ಶೆಟ್ಟಿ ಶಿವರಾಂ ಆಚಾರ್ಯ, ವೇದಿಕೆಯಲ್ಲಿ ಉಪಸ್ಥಿತರಿದ್ದರು

