ಫೈಝುಲ್ ಇಸ್ಲಾಂ ಪಬ್ಲಿಕ್ ಸ್ಕೂಲ್, ಶಿರ್ವ ಇಲ್ಲಿಯ ವಿಜ್ಞಾನ ಪ್ರದರ್ಶನವು ಇಂದು ಶಾಲಾ ಆವರಣದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು. ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮನೋಭಾವ ಹಾಗೂ ಸೃಜನಶೀಲ ಚಿಂತನೆ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ವಿಭಿನ್ನ ತರಗತಿಗಳ ವಿದ್ಯಾರ್ಥಿಗಳು ಪವಿತ್ರ ಕುರಾನ್ ಆಧಾರಿತ ವಿಜ್ಞಾನ, ಪರಿಸರ ಸಂರಕ್ಷಣೆ, ಆರೋಗ್ಯ, ನವೀಕರಿಸಬಹುದಾದ ಶಕ್ತಿ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಮಾದರಿಗಳನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳ ನವೀನ ಆಲೋಚನೆಗಳು ವೀಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಜನಾಬ್ ಕೆ.ಎಸ್. ಶೇಖ್ ಕರ್ಣಿರೆ ಯವರು ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಶ್ಲಾಘಿಸಿ, ವಿಜ್ಞಾನ ಕಲಿಕೆಯಲ್ಲಿ ಆಸಕ್ತಿ ಹೆಚ್ಚಿಸಿಕೊಳ್ಳುವಂತೆ ಪ್ರೋತ್ಸಾಹಿಸಿದರು.
ವಿಜ್ಞಾನ ಪ್ರದರ್ಶನವು ಯಶಸ್ವಿಯಾಗಿ ನೆರವೇರಿದ್ದು, ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಹಾಗೂ ಹೊಸ ಕಲಿಕೆಯ ಅನುಭವವನ್ನು ನೀಡಿತು.ಕನ್ನಡ,ಗಣಿತ,ಚಿತ್ರ ಕಲೆ,ಹಾಗೂ ಕರಾಟೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಜನಾಬ್ ಎಮ್ .ಎ .ಗಫೂರ್ ,ಜನಾಬ್ ಡಾ.ರಿಝ್ವಾನ್ ಅಹ್ಮದ್, ಅಶ್ರಪ್ ಕೋಡಿ ಬೆಂಗ್ರೆ,ಹಾಜಿ ಅಬ್ದುಲ್ ಜಲೀಲ್ ಸಾಹೇಬ್,ಜನಾಬ್ ಮೊಹ್ಶಿನ್ ಹೊನ್ನಾಳ,ಜನಾಬ್ ಇಕ್ಬಾಲ್ ಮನ್ನ, ಕುಮಾರಿ ಅಝ್ಬ ಹಾಗೂ ಶಾಲಾ ಆಡಳಿತ ಮಂಡಳಿಯ ಸದಸ್ಯರು ,ಅಧ್ಯಕ್ಷ ರಾದ ಖಾಲಿದ್ ಮಹಮ್ಮದ್ ,ಶಾಲಾ ಮುಖ್ಯ ಶಿಕ್ಷಕಿ ಜನನಖೈರುನ್ನಿಸ,ಧರ್ಮ ಗುರುಗಳಾದ ಉಬೇದುರ್ರಹ್ಮಾನ್ ರವರು ಉಪಸ್ಥಿತರಿದ್ದರು.ಸಹ ಶಿಕ್ಷಕಿ ಅಲ್ಫಿಯಾ ಕಾರ್ಯಕ್ರಮ ನಿರೂಪಿಸಿ ,ಧನ್ಯವಾದ ಗೈದರು.ಈ ಸಂದರ್ಭದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು


