×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಪುಸ್ತಕಗಳನ್ನು ಓದುವುದರಿಂದ ಕಲ್ಪನಾ ಶಕ್ತಿ ಹೆಚ್ಚಿಸಲು ಸಾಧ್ಯ~ ಹೆಚ್.ಡುಂಡಿರಾಜ್

ಉಡುಪಿ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ ಇದರ ಜನಪ್ರಿಯ ಅಭಿಯಾನದಲ್ಲಿ ಒಂದಾದ ಮನೆಯೇ ಗ್ರಂಥಾಲಯ ಅಭಿಯಾನದ 175 ನೇ ಗ್ರಂಥಾಲಯವನ್ನು ಖ್ಯಾತ ಸಾಹಿತಿ ಹನಿಗವಿ ಹೆಚ್.ಡುಂಡಿರಾಜ್ ರವರು ಸಿದ್ದಬಸಯ್ಯಸ್ವಾಮಿ ಚಿಕ್ಕಮಠ ಅವರಿಗೆ ಪುಸ್ತಕಗಳನ್ನು ಹಸ್ತಾಂತರಿಸುವ ಮೂಲಕ ಸೋಮವಾರದಂದು ಚಾಲನೆ ನೀಡಿ ಮಾತನಾಡಿದರು.

ಕಸಾಪ ಉಡುಪಿ ತಾಲೂಕು ಘಟಕದ ವಿನೂತನ ಕಾರ್ಯಕ್ರಮವಾಗಿದೆ. ಪುಸ್ತಕಗಳನ್ನು ಓದುವುದರಿಂದ ನಮ್ಮ ಭಾಷಾಜ್ಞಾನ ಹೆಚ್ಚುವುದು ಮಾತ್ರವಲ್ಲ ಕಲ್ಪನಾ ಶಕ್ತಿ ಇಮ್ಮಡಿಯಾಗುತ್ತದೆ, ಮೆದುಳಿಗೆ ಒಳ್ಳೆ ಕೆಲಸ ಸಿಗುತ್ತದೆ, ಚಿಂತೆಯನ್ನೂ ದೂರ ಮಾಡುತ್ತವೆ. ಈಗಾಗಲೇ ಸುಮಾರು ನಾಲ್ಕು ಸಾವಿರಕ್ಕಿಂತಲೂ ಅಧಿಕ ಪುಸ್ತಕಗಳನ್ನು ಕಸಾಪ ಉಡುಪಿ ತಾಲೂಕು ಘಟಕ ನೀಡಿರುವುದು ಅಭಿನಂದನಾಹ೯ ಎಂದರು.

ಈ ಸಂದರ್ಭದಲ್ಲಿ ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಹೆಚ್.ಪಿ, ಉಡುಪಿ ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಜನಾದ೯ನ್ ಕೊಡವೂರು, ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಾಡಿ, ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಅಸ್ಟ್ರೋ ಮೋಹನ್, ಜಿಲ್ಲಾ ಕಸಾಪ ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾದ೯ನ್, ಅಭಿಯಾನದ ಸಂಚಾಲಕ ರಾಘವೇಂದ್ರ ಪ್ರಭು ಕವಾ೯ಲು, ಪ್ರವೀಣಾ ಮೋಹನ್, ಪ್ರಜ್ಞಾ ಕೊಡವೂರು, ಸಂಹಿತ್, ಆಶ್ಲೇಷ್, ಉಮಾ ಚಿಕ್ಕಮಠ, ಶ್ರೀಗುರು ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *