ಹೆಮ್ಮಾಡಿ : ಡಾ। ಎಂ.ಎನ್. ರಾಜೇಂದ್ರ ಕುಮಾರ್ ಸಹಕಾರದಿಂದ ಉದಯ ಕುಮಾರ್ ಅವರ ನೇತೃತ್ವದಲ್ಲಿ ಬ್ಯಾಂಕ್ ಸದೃಢವಾಗಿ ಮೂಡಿ ಬಂದಿದೆ ನನ್ನ ತಾಯಿ ಕೂಡ ಮೀನು ಮಾರಾಟ ಮಾಡುತ್ತಿದ್ದ ಕಾರಣ ಮೀನುಗಾರ ಮಹಿಳೆಯರ ಕಷ್ಟ ಗೊತ್ತಿದೆ. ಸಂಕಷ್ಟದಲ್ಲಿ ಜೀವನ ಮಾಡುತ್ತಿರುವ ಬಡ ಮೀನುಗಾರರಿಗೆ ಸಹಕಾರಿ ರಂಗದಿಂದ ಇನ್ನಷ್ಟು ನೆರವು ಸಿಗುವಂತಾಗಲಿ ಎಂದು ಡಾ| ಜಿ. ಶಂಕರ್ ಹೇಳಿದರು.ಅವರು ರವಿವಾರ ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ರಜತ ಸಂಭ್ರಮ ಸಮಾರಂಭಉದ್ಘಾಟಿಸಿ, ಮಾತನಾಡಿದರು.ಹೆಮ್ಮಾಡಿ ಮೀನುಗಾರರ ಸಂಘ ಕಟ್ಟಿ ಬೆಳೆಸುವಲ್ಲಿ ಗೋಪಾಲ ಪೂಜಾರಿ ಯವರು ಮುಖ್ಯ ಪಾತ್ರವಹಿಸಿದ್ದರು ಎಂದರು.
ಮತ್ಯಜ್ಯೋತಿ ಪುರಸ್ಕಾರ ಡಾ| ಜಿ. ಶಂಕರ್ ಅವರಿಗೆ ಸಂಘದ ಮತ್ತೆ ಜ್ಯೋತಿ ಪುರಸ್ಕಾರ ಪ್ರದಾನ ಮಾಡಲಾಯಿತು

ಉಡುಪಿ ಜಿಲ್ಲೆಗೆ ವಿಸ್ತರಿಸಲಿ ಡಾ। ಎಂ.ಎನ್. ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಈ ಸಮಾರಂಭವು ಮೀನುಗಾರರ ಚಳವಳಿಗೆ ನಾಂದಿಯಾಗುತ್ತದೆಈ ಸಂಘ ಬಲಾಡ್ಯವಾಗಿ ಬೆಳೆಯಲು ಸಹಕಾರ ರತ್ನ ಪಡೆದ ಉದಯ ಕುಮಾರ್ ಪಾತ್ರ ಪ್ರಮುಖವಾಗಿದೆ. ಮಾರ್ಚ್ ನೊಳಗೆ 100 ಕೋ. ರೂ. ಠೇವಣಿ ಗುರಿ ಸಾಧಿಸಿದರೆ ಬಂಗಾರದ ಪದಕ ನೀಡಿ ಗೌರವಿಸಲಾಗುವುದು. ರಜತ ಮಹೋತ್ಸವದ ಅಂಗವಾಗಿ 5 ಲಕ್ಷರೂ. ಘೋಷಿಸಿದರು ಈ ಸಂದರ್ಭದಲ್ಲಿ ಡಾ। ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಸಮ್ಮಾನಿಸಲಾಯಿತು.

ಆನಂದ ಸಿ. ಕುಂದರ್, ದ.ಕ.ಮೊಗವೀರ ಮಹಾಜನ ಸಂಘ ಉಚ್ಚಿಲದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಮುಂಬಯಿಅಧ್ಯಕ್ಷ ಸಂತೋಷ್ ಪುತ್ರನ್, ಮಾಜಿ ಅಧ್ಯಕ್ಷ ಗೋಪಾಲ ಎಸ್. ಪುತ್ರನ್, ಬೆಂಗಳೂರು ಅಧ್ಯಕ್ಷಶಂಕರ್‌ಕುಂದರ್, ಚಿನ್ಮಯಿ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ| ಉಮೇಶ್ ಪುತ್ರನ್, ಎಸ್ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಹೇಶ್ ಹೆಗ್ಡೆ ಸಹಕಾರಿ ಸಂಘಗಳ ಉಪನಿಬಂಧಕಿ ಕೆ.ಆರ್. ಲಾವಣ್ಯ, ಸ.ನಿಬಂಧಕ ಜೆ. ಸುಧೀರ್ ಕುಮಾರ್, ಮೀನುಗಾರಿಕಾ ಜಂಟಿ ನಿರ್ದೇಶಕ ಕುಮಾರಸ್ವಾಮಿ ಬಿ.ವಿ., ಉದ್ಯಮಿ ಜಗದೀಶ್ ಶೆಟ್ಟಿ ಭದ್ರಮಹಾಕಾಳಿ ದೇವಸ್ಥಾನದ ಅಧ್ಯಕ್ಷ ಕೆ. ಆನಂದ ಶೆಟ್ಟಿ ಪಂಚಗಂಗಾ ರೈ, ಸೇ.ಸ.ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಮೊಗವೀರ ಯುವ ಸಂಘಟನೆಯ ಜಯಂತ ಅಮೀನ್ ಕೋಡಿ, ಮೀನುಗಾರರ ಸಂಘದ ಉಪಾಧ್ಯಕ್ಷೆ ಸುಮತಿ ಉಪಸ್ಥಿತರಿದ್ದರು.ಉದಯ ಕುಮಾರ್ ಹಟ್ಟಿಯಂಗಡಿ ಪ್ರಸ್ತಾವಿಸಿದರು. ಸುಬ್ರ ಹಣ್ಯ ಪಡುಕೋಣೆ ನಿರೂಪಿಸಿದರು



ನಿರ್ದೇಶಕರಿಗೆ ಬ್ಯಾಂಕ್ ಸಿಬ್ಬಂದಿಗಳಿಗೆ ಸನ್ಮಾನಿಸಲಾಯಿತು

