×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಅಕ್ಷತಾ ಪೂಜಾರಿಯ ಮೇಲೆ ದೌರ್ಜನ್ಯ ಎಸಗಿರುವುದು ತೀವ್ರ ಖಂಡನೀಯ – ಬೆಳ್ಳೆ ಶಿವಾಜಿ ಎಸ್ ಸುವರ್ಣ

ನ್ಯಾಯ ನೀಡುವ ಪೊಲೀಸ್ ಕೈಗಳಲ್ಲಿಯೇ ಅನ್ಯಾಯ! ಅಕ್ಷತಾ ಪೂಜಾರಿಯವರ ಮನೆಗೆ ದಿನಾಂಕ 10/12/2025 ರಂದು ಮುಂಜಾನೆ ಸುಮಾರು 4:00 ಗಂಟೆಗೆ, ಪೊಲೀಸರು ಕೋರ್ಟ್ ಅಮೀನ್ ಇಲ್ಲದೆ, ಮತ್ತು ಮನೆಗೆ ಅಕ್ರಮ ಪ್ರವೇಶ ಮಾಡಿ , ತಮ್ಮ ಅಧಿಕಾರದ ಪರಮ ದುರುಪಯೋಗವನ್ನು ಪ್ರದರ್ಶಿಸಿ ವಿದ್ಯಾರ್ಥಿನಿಯ ಮೇಲೆ ದೌರ್ಜನ್ಯ ಎಸಗಿರುದನ್ನು ರಾಷ್ಟೀಯ ಬಿಲ್ಲವರ ಮಹಾ ಮಂಡಲ ಮೂಲ್ಕಿ ಇದರ ಕಾರ್ಯದರ್ಶಿ ಬೆಳ್ಳೆ ಶಿವಾಜಿ ಎಸ್ ಸುವರ್ಣ ತೀವ್ರ .ಖಂಡಿಸಿದ್ದಾರೆ ತಮ್ಮ ತಪ್ಪನ್ನು ಮುಚ್ಚಿಹಾಕಿಕೊಳ್ಳುವ ಉದ್ದೇಶದಿಂದ ದೌರ್ಜನ್ಯಕ್ಕೆ ಒಳಗಾದ ಆ ಬಡ ವಿದ್ಯಾರ್ಥಿನಿಯ ಮತ್ತು ತಾಯಿಯ ಮೇಲೆ, ಕರ್ತವ್ಯ ಅಡ್ಡಿ ಪಡಿಸಿದೆ ಎಂದು ಸುಳ್ಳು FIR ದಾಖಲಿಸಿರುವುದು. ಇದು ನ್ಯಾಯ ವ್ಯವಸ್ಥೆಗೆ ಮಸಿ ಬಳಿದಂತಾಗಿದೆ.

ಈ ಗಂಭೀರ ವಿಚಾರದ ಕುರಿತು ಬಿಲ್ಲವ ಸಂಘಟನೆಗಳು, ಸಮಾಜದ ಮುಖಂಡರು, ಮಹಿಳಾ ಆಯೋಗದ ಪ್ರತಿನಿಧಿಗಳು ಸೇರಿ ಸಭೆ ನಡೆಸಿ, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಿ ನ್ಯಾಯಕ್ಕಾಗಿ ಕೇಳಿಕೊಳ್ಳಲಾಯಿತು. ಆ ಸಂದರ್ಭದಲ್ಲಿ ನ್ಯಾಯ ದೊರಕಿಸುವ ಭರವಸೆಯ ಮಾತುಗಳನ್ನು ನೀಡಲಾಗಿತ್ತು. *ಆದರೆ ಇಷ್ಟರವರೆಗೆ ಯಾವುದೇ ಸ್ಪಷ್ಟ ಕ್ರಮ ಅಥವಾ ಪ್ರತಿಕ್ರಿಯೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿಂದ ಲಭಿಸಿಲ್ಲ. ಈ ಹಿನ್ನೆಲೆಯಲ್ಲಿ, ದಿನಾಂಕ : 17-12-2025 (ಬುಧವಾರ) ಸಮಯ : ಮಧ್ಯಾಹ್ನ 3:00 ಗಂಟೆಗೆ
ಸ್ಥಳ : ಬ್ರಹ್ಮಾವರ ಪೊಲೀಸ್ ಠಾಣೆ ಮುಂಭಾಗ ನ್ಯಾಯಕ್ಕಾಗಿ “ಬೃಹತ್ ಪ್ರತಿಭಟನೆ” ನಡೆಯಲಿದೆ .ಎಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ.), ಉಡುಪಿ ಪ್ರಕಟಣೆಯಲ್ಲಿ ತಿಳಿಸಿದೆ

Leave a Reply

Your email address will not be published. Required fields are marked *