×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಉಡುಪಿ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ವತಿಯಿಂದ “ನಮ್ಮ ನಡೆ ವಾರ್ಡ್ ಕಡೆಗೆ”

ಕರ್ನಾಟಕ ರಾಜ್ಯ ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರ ಬದುಕಿಗೆ ಬೆಳಕಾಗಿದ್ದು ಈ ಯೋಜನೆಗಳು ಇನ್ನಷ್ಟು ಸಮರ್ಪಕವಾಗಿ ಅನುಷ್ಠಾನವಾಗಲು ಕಾರ್ಯಕ್ರಮಗಳು ರೂಪಿಸಿಕೊಂಡಿದ್ದು “ನಮ್ಮ ನಡೆ ಗ್ರಾಮ ಪಂಚಾಯತ್ ಕಡೆಗೆ” ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಈಗ ಉಡುಪಿ ತಾಲೂಕಿನಡಿಯಲ್ಲಿ ಬರುವ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ “ನಮ್ಮ ನಡೆ ವಾರ್ಡ್ ಕಡೆಗೆ” ಕಾರ್ಯಕ್ರಮವು ತಾ. 16.12.2025 ಹಾಗೂ ತಾ. 17.12.2025ರಂದು ನಡೆಯಲಿದೆ.

ತಾ. 16.12.2025ರಂದು ಬೆಳಿಗ್ಗೆ 10.00 ಗಂಟೆಗೆ ಸರಳೇಬೆಟ್ಟು, ಶೆಟ್ಟಿಬೆಟ್ಟು, ಪರ್ಕಳ, ಈಶ್ವರನಗರ, ಮಣಿಪಾಲ, ಸಗ್ರಿ, ಇಂದ್ರಾಳಿ, ಕುಂಜಿಬೆಟ್ಟು, ಇಂದಿರಾನಗರ ಮತ್ತು ಕಸ್ತೂರ್ಬಾನಗರ ವಾರ್ಡ್‌ಗಳ ಸಭೆಯು ಇಂದ್ರಾಳಿಯ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ.
ಮದ್ಯಾಹ್ನ 3.00 ಗಂಟೆಗೆ ಗುಂಡಿಬೈಲು, ಕಕ್ಕುಂಜೆ, ಕರಂಬಳ್ಳಿ, ಮೂಡುಪೆರಂಪಳ್ಳಿ, ನಿಟ್ಟೂರು, ಗೋಪಾಲಪುರ ಮತ್ತು ಕಡಿಯಾಳಿ ವಾರ್ಡ್‌ಗಳ ಸಭೆಯು ಗುಂಡಿಬೈಲು ಜನತಾ ವ್ಯಾಯಾಮ ಶಾಲೆಯಲ್ಲಿ ನಡೆಯಲಿದೆ.

ತಾ. 17.12.2025ರಂದು ಬೆಳಿಗ್ಗೆ 10.00 ಗಂಟೆಗೆ ಬಡಗುಬೆಟ್ಟು, ಚಿಟ್ಪಾಡಿ, ಬನ್ನಂಜೆ, ತೆಂಕಪೇಟೆ, ಒಳಕಾಡು, ಬೈಲೂರು, ಕಿನ್ನಿಮೂಲ್ಕಿ, ಅಜ್ಜರಕಾಡು, ಶಿರಿಬೀಡು ಹಾಗೂ ಅಂಬಲಪಾಡಿ ವಾರ್ಡ್‌ಗಳ‌ ಸಭೆಯು ಅಜ್ಜರಕಾಡು ಪುರಭವನದ ಊಟದ ಹಾಲ್‌ನಲ್ಲಿ ನಡೆಯಲಿದೆ.
ಮದ್ಯಾಹ್ನ 3.00 ಗಂಟೆಗೆ ಕೊಳ, ವಡಭಾಂಡೇಶ್ವರ, ಮಲ್ಪೆ ಸೆಂಟ್ರಲ್, ಕೊಡವೂರು, ಕಲ್ಮಾಡಿ, ಮೂಡುಬೆಟ್ಟು, ಕೊಡಂಕೂರು ಮತ್ತು ಸುಬ್ರಹ್ಮಣ್ಯನಗರ ವಾರ್ಡ್‌ಗಳ ಸಭೆಯು ಆದಿಉಡುಪಿಯ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *