×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಉಡುಪಿ ನೂತನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ‘ಸಹಕಾರ ಸಾನಿಧ್ಯ’ ಅದ್ದೂರಿ ಯಾಗಿ ಉದ್ಘಾಟನೆ

ಉಡುಪಿ: ನೂತನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ನಿ.) ಉಡುಪಿ ಇದರ ನೂತನ ಸ್ವಂತ ಕಟ್ಟಡ “ಸಹಕಾರ ಸಾನಿಧ್ಯ” ಉದ್ಘಾಟನಾ ಸಮಾರಂಭವು ಡಿ.14 ರಂದು ಅಜ್ಜರಕಾಡು, ಟೀಚರ್ ಟ್ರೈನಿಂಗ್ ಸ್ಕೂಲ್ ಬಳಿ ಅದ್ದೂರಿಯಾಗಿ ನಡೆಯಿತು. ನೂತನ ಕಟ್ಟಡದ ಉದ್ಘಾಟನೆಯನ್ನು ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ, ಶ್ರೀ ಅದಮಾರು ಮಠ ಉಡುಪಿ ಇವರು ನೆರವೇರಿಸಿ .ಮಾತನಾಡಿದ ಅವರು ಸಹಕಾರಿ ಸಂಸ್ಥೆಗಳ ಮೇಲೆ ಜನ ಹೆಚ್ಚು ನಂಬಿಕೆ ಇಟ್ಟಿದ್ದಾರೆ. 10 ವರ್ಷದ ಹಿಂದೆ ಆರಂಭವಾದ ಈ ಸಂಸ್ಥೆ ಇಷ್ಟು ಎತ್ತರಕ್ಕೆ ಏರಬೇಕಾದರೆ ಗ್ರಾಹಕರಿಗೆ ಇವರು ನೀಡುತ್ತಿರುವ ಅತ್ಯುತ್ತಮ ಸೇವೆ ಹಾಗೂ ವಿಶ್ವಾಸ ಕಾರಣವಾಗಿದೆ ದುಡ್ಡಿನ ವ್ಯವಹಾರ ಬೆಂಕಿಯ ವ್ಯವಹಾರದ್ದಂತೆ ಎಚ್ಚರಿಕೆಯಿಂದ ಇರಬೇಕಾಗುತ್ತದೆಎಂದು ಶ್ರೀ ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹೇಳಿದರು.

ಶಾಸಕ ಯಶ್‌ಪಾಲ್ ಸುವರ್ಣ ಬೇರೆ ಯಾವ ಭದ್ರತಾ ಕೊಠಡಿ ಉದ್ಘಾಟಿಸಿ,ನಮ್ಮ ಜಿಲ್ಲೆ ಸಹಕಾರಿ ಕ್ಷೇತ್ರದ ಸಾಧನೆ ಇತರ ಜಿಲ್ಲೆಯ ಸಹಕಾರಿ ಕ್ಷೇತ್ರಕ್ಕೆ ಮಾದರಿಯಾಗಿದೆ ಸಹಕಾರಿ ಕ್ಷೇತ್ರಕ್ಕೆ ಭವಿಷ್ಯವಿದೆ ಬ್ಯಾಂಕ್ ಮತ್ತು ಸಹಕಾರಿ ಸಂಸ್ಥೆಗಳಲ್ಲಿ ಚಿನ್ನವನ್ನು ಮಾತ್ರ ಅಡಮಾನ ಇಡುತ್ತಿದ್ದರು. ಮುಂದಿನ ಮಾರ್ಚ್ ಬಳಿಕ ಬೆಳ್ಳಿಯನ್ನು ಅಡಮಾನ ಇಡುವ ಅವಕಾಶವನ್ನು ಕೇಂದ್ರ ಸರಕಾರ ಕಲ್ಪಿಸಲಿದೆ ಎಂದರು

ಮದರ್ ಆಫ್ ಸಾರೋಸ್ ಚರ್ಚಿನ ಸಹಾಯಕ ಧರ್ಮಗುರು ವಂ। ಲಿಯೋ ಪ್ರವೀಣ್ ಡಿ’ಸೋಜಾ ಶುಭ ಹಾರೈಸಿದರು.

ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿಸಹಕಾರಿ ಕ್ಷೇತ್ರದಲ್ಲಿ ಮನುಷ್ಯನ ಎಲ್ಲಾ ಸವಲತ್ತುಗಳನ್ನು ನೀಡುವ ದಿನಗಳು ಇನ್ನು ಹತ್ತಿರದಲ್ಲೇ ಇದೆ ಅನೇಕ ಸಾಮಾಜಿಕ ಕಳಕಳಿಯ ಚಿಂತನೆಯನ್ನು ಇಟ್ಟುಕೊಂಡು ಮಕ್ಕಳ ಶೈಕ್ಷಣಿಕ ಹಾಗೂ ಆರೋಗ್ಯದ ಬಗ್ಗೆ ಸಮಾಜಮುಖಿ ಕಾರ್ಯಗಳನ್ನು ಕೂಡ ಸಂಸ್ಥೆಯು ಮಾಡುತಾ ಬಂದಿದೆ ಜಿಲ್ಲೆಯಲ್ಲಿ 750 ಸಹಕಾರಿ ಸಂಸ್ಥೆಯು ನೋಂದಣಿಕೆಗೊಂಡಿದೆ ರಾಷ್ಟ್ರಕಿತ ಬ್ಯಾಂಕುಗಳು ಸರಕಾರದ ಧೋರಣೆ ಯಿಂದ ವಿಲೀನಗೊಂಡಿದೆ ಕಟ್ಟ ಕಡೆಯ ವ್ಯಕ್ತಿಗೂ ಸಹಕಾರಿ ಕ್ಷೇತ್ರದಿಂದ ಸೇವೆ ಮಾಡಬೇಕು ಈ ದೆಸೆಯಲ್ಲಿ ಸಹಕರಿಕ್ಷೇತ್ರವು ಬೆಳೆದಿದೆ ಎಂದರು

ಆಡಳಿತ ಮಂಡಳಿ ಸುಮಿತ್ರಾ ಅಧ್ಯಕ್ಷೆಯನ್ನು ವಹಿಸಿದ್ದರು

ಉಡುಪಿ ನೂತನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸಹಕಾರ ಸಾನಿಧ್ಯದ ಕಚೇರಿ ಕೀ ಹಸ್ತಾಂತರ ಸ್ವಂತ ಕಟ್ಟಡ ‘ಸಹಕಾರ ಸಾನಿಧ್ಯ’ದ ಕಚೇರಿಯ ಕೀ ಯನ್ನು ಶ್ರೀ ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಶೇರಿಗಾರ್ ಅವರಿಗೆ ಗಣೇಶ್ ಹಸ್ತಾಂತರಿಸಿದರು.

ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ನೂತನಾಮೃತ ನಿಧಿಗೆ ಚಾಲನೆ ನೀಡಿದರು. ಉಡುಪಿ ಸಹಕಾರಿ ಸಂಘಗಳ ಉಪನಿಬಂಧಕಿ ಲಾವಣ್ಯಾ ಕೆ.ಆರ್., ಕುಂದಾಪುರ ಸಹಕಾರಿ ಸಂಘಗಳ ಸಹಾಯಕ ಉಪ ನಿಬಂಧಕ ಜೆ. ಸುಧೀರ್ ಕುಮಾರ್, ಉಪಾಧ್ಯಕ್ಷ ಬ್ಯಾಪ್ಟಿಸ್ ಡಯಾಸ್, ನಿರ್ದೇಶಕರಾದ ಮೋಹನ್ ದೇವಾಡಿಗ, ಮೊಹಮ್ಮದ್ ಸದಾಖತ್, ಗೀತಾ ನಾಗೇಶ್, ಸ್ಟೀಫನ್ ಫೆರ್ನಾಂಡಿಸ್, ಎಸ್‌. ವಸಂತ್ ಕುಮಾರ್, ಜಾಮ್ ಜಾಕೋಬ್, ಪ್ರಭಾಕರ ಕೆ. ಪೂಜಾರಿ, ಅಶೋಕ್ ಶೆಟ್ಟಿ ಶಾಖಾ ವ್ಯವಸ್ಥಾಪಕ ಅಶ್ವಿನಿ ಕೆ.ವಿ. ಉಪಸ್ಥಿತರಿದ್ದರು.

ಪ್ರಧಾನ ವ್ಯವಸ್ಥಾಪಕ ಗಣೇಶ್ ಶೇರಿಗಾರ್ ಸ್ವಾಗತಿಸಿ, ಪ್ರಸ್ತಾವನೆ ಗೈದರು. ಉಪನ್ಯಾಸಕ ದಯಾನಂದ ಕರ್ಕೇರ ನಿರೂಪಿಸಿದರು. ನಿರ್ದೇಶಕ ದಯಾನಂದ ಡಿ. ವಂದಿಸಿದರು. ಈಸಂದರ್ಭದಲಿ ಆಡಳಿತ ಮಂಡಳಿ ಸುಮಿತ್ರಾ ಅಧ್ಯಕ್ಷೆಯನ್ನು ಮತ್ತು ಪ್ರಧಾನ ವ್ಯವಸ್ಥಾಪಕ ಗಣೇಶ್ ಶೇರಿಗಾರ್ ಸನ್ಮಾನಿಸಲಾಯಿತು

Leave a Reply

Your email address will not be published. Required fields are marked *