ಕಟಪಾಡಿ ವೆಹಿಕಲ್ ಒವರ್ ಪಾಸ್ ಕಾಮಗಾರಿ ನಿರ್ಮಾಣದಲ್ಲಿ ಜಿಲ್ಲಾಧಿಕಾರಿಯವರು ವಾಹನ ಹಾಗೂ ಜನ ಸಂಚಾರದ ಬಗ್ಗೆ ಕೆಲವು ಮಾರ್ಗಗಳನ್ನು ಸೂಚಿಸಿ ಅಧಿಸೂಚನೆ ಹೊರಡಿಸಿದ್ದು,ಅದರಂತೆ ನಡೆದಲ್ಲಿ ಜನ ಹಾಗೂ ವಾಹನ ಸಂಚಾರ ಅಸ್ತವ್ಯಸ್ತವಾಗುವ ಪರಿಸ್ಥಿತಿ ಉದ್ಭವಿಸುವುದರಿಂದ ಕಟಪಾಡಿ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ಪ್ರಮುಖ ಗ್ರಾಮ ಪಂಚಾಯತ್ ಗಳಾದ ಕೋಟೆ,ಕಟಪಾಡಿ,ಕುರ್ಕಾಲು,ಶಿರ್ವಾ,ಮಣಿಪುರ,ಉದ್ಯಾವರ, ಅಲೆವೂರುನ ಸಾರ್ವಜನಿಕರ ಹಾಗೂ ಜನಪ್ರತಿನಿಧಿಗಳ ಅಹವಾಲುಗಳನ್ನು ಸ್ವೀಕರಿಸಲಿ ಸ್ವತಃ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಎಲ್ಲಾ ಅಧಿಕಾರಿಗಳೊಂದಿಗೆ ಸಾರ್ವಜನಿಕ ಸಭೆಯನ್ನು ನಡೆಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು. ಈ ವೇಳೆ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ವಿದ್ಯಾ ಸಂಸ್ಥೆಯ ಹಾಗೂ ಕಟಪಾಡಿ ವೆಂಕಟರಮಣ ದೇವಸ್ಥಾನದ ಮುಖ್ಯಸ್ಥರಾದ ಕೆ.ಸತ್ಯೇಂದ್ರ ಪೈ ಗ್ರಾಮ ಪಂಚಾಯತ್ ಅಧ್ಯಕ್ಷರುಗಳಾದ, ಶ್ರೀಮತಿ ಪ್ರಭಾ ಶೆಟ್ಟಿಕಟಪಾಡಿ, ಪ್ರಶಾಂತ್ ಪೂಜಾರಿ, ಕುರ್ಕಾಲು, ಪ್ರಮೀಳಾ ಪ್ರಶಾಂತ್ ಜತ್ತನ್ನ,ಕೋಟೆ, ಚೈತ್ರಾ ಮಣಿಪುರ ಯತೀಶ್ ಕುಮಾರ್ ಅಲೆವೂರು ಹಾಗೂ ಪ್ರಮುಖರಾದ ವಿಲ್ಸನ್ ರೊಡ್ರಿಗಸ್, ರಿಕ್ಷಾ ಯೂನಿಯನ್ ನ ಪ್ರೇಮ್ ಕುಮಾರ್, ವೈ ಸುಕುಮಾರ್, ನವೀನ್ ಚಂದ್ರ ಸುವರ್ಣ ಅಡ್ವೆ, ರೆ.ಫಾ ರಾಜೇಶ್ ಪಸನ್ನ,ಪ್ರಸಾದ್ ಕುಮಾರ್ ಶೆಟ್ಟಿ.ಸುಗುಣ ಪೂಜಾರಿ,ಪ್ರಭಾಕರ ಆಚಾರ್ಯ,ಜಾನ್ ಸಿಕ್ವೇರ, ಮಹೇಶ್ ಶೆಟ್ಟಿ, ಕೆ.ಗಣೇಶ್ ಕಿಣಿ, ಮಹೇಶ್ ಅಂಚನ್, ಮಹೇಶ್ ಪೂಜಾರಿಕಟಪಾಡಿ, ಶರ್ಫುದ್ದೀನ್, ಶೇಖ್, ಹಸನಬ್ಬ,ಶೇಖ್, ನಿತಿನ್. ಜೆ ಸಾಲಿಯಾನ್, ಪ್ರಕಾಶ್ ಉದ್ಯಾವರ, ಅನ್ವರ್ ಇಮ್ರಾನ್ , ಮಾರ್ಗರೇಟ್ ಸೀಮಾ ಡಿಸೋಜ, ರಾಜೇಶ್ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.

