ಮುಲ್ಕಿ:ಹಳೆಯಂಗಡಿ ವಲಯ ಮುಸ್ಲಿಮ್ ಜಮಾತ್ ಒಕ್ಕೂಟದ ಆಶ್ರಯದಲ್ಲಿ ಹಿರಿಯ ಪತ್ರಕರ್ತ, ಸಾಹಿತಿ, ಸಂಘಟಕ ಹಾಗೂ ಸಾಮಾಜಿಕ ಚಿಂತಕ 2025ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಳೆಯಂಗಡಿ ಬೆಳ್ಳಾಯರು ಗ್ರಾಮದ ಸಾಧಕ ಜನಾಬ್ ಬಿ.ಎಂ. ಹನೀಫ್ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜೈಕೃಷ್ಣ ಕೋಟ್ಯಾನ್‌ರವರಿಗೆ

ಹುಟ್ಟೂರ ಸಮ್ಮಾನ ಕಾರ್ಯಕ್ರಮ ನ.23 ನೇ ಭಾನುವಾರ ಸಂಜೆ ಹಳೆಯಂಗಡಿಯ ಬಿಲ್ಲವ ಭವನದಲ್ಲಿ ನಡೆಯಿತು ಕಾರ್ಯಕ್ರಮವನ್ನು ಬೊಳ್ಳೂರು ಜುಮ್ಮಾ ಮಸೀದಿಯ ಮುದಗ್ರಿಸ್ ಬಹು| ಮುಹಮ್ಮದ್ ಶರೀಫ್ ಅರ್ಶದಿ ಉದ್ಘಾಟಿಸಿ ಮಾತನಾಡಿದರು ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ಜನಾಬ್ ಮುಹಮ್ಮದ್ ಇರ್ಷಾದ್ ಕದಿಕೆ ವಹಿಸಿ ಅಭಿನಂದನಾ ನುಡಿಯನ್ನು ನೀಡಿದರು ಕದಿಕೆ ಕೇಂದ್ರ ಜುಮ್ಮಾ ಮಸೀದಿಯ ಖತೀಬ ಬಹು। ಅಬ್ದುಲ್ಲಾ ಝೇನಿ ಬಡಗನ್ನೂರು ನೀಡಿದರು ಮುಖ್ಯ ಅತಿಥಿಗಳಾಗಿ ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ, ಸದಸ್ಯ ಅಬ್ದುಲ್ ಅಜೀಜ್ ಹಳೆಯಂಗಡಿ ಅಮ್ಮಾನ್ ಮೆಮೋರಿಯಲ್ ಚರ್ಚ್ ನ ಧರ್ಮ ಗುರು ರೆಫಾ| ಅಮೃತ್ ರಾಜ್ ಖೋಡೆ, ಕದಿಕೆ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರೆಹಮಾನ್ ಕುಡುಂಬೂರು ಸಾಗ್, ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ್ ನಾಣಿಲ್,ಬೊಳ್ಳೂರು ಜುಮ್ಮಾ ಮಸೀದಿ ಅಧ್ಯಕ್ಷ ಜನಾಬ್ ಬಿ.ಇ,ಮುಹಮ್ಮದ್,ಇಂದಿರಾನಗರ ರೈಲ್ವೇಗೇಟ್ ತತ್ವಾ ಜುಮಾ ಮಸೀದಿ ಅಧ್ಯಕ್ಷ ಜನಾಬ್ ಅಬ್ದುಲ್ ಲತೀಫ್ ಲೈಟ್‌ಹೌಸ್,ಸಾಗ್ ಮಸೀದಿ ಅಧ್ಯಕ್ಷ ಜನಾಬ್ ಅಬ್ದುಲ್ ಖಾದರ್ ಸಾಗ್ (ಅದ್ದು), ತೋಕೂರು ಮಸೀದಿ ಅಧ್ಯಕ್ಷ ಜನಾಬ್ ಅಲ್ತಾಫ್ ಹುಸೇನ್ ಮೆಹೆತಾಬ್,ಸಂತೆಕಟ್ಟೆ ಹಿಮಾಯತುಲ್ ಇಸ್ಲಾಂ ಜುಮಾ ಮಸೀದಿ ಅಧ್ಯಕ್ಷ ಜನಾಬ್ ಅಶ್ರಫ್ ಪಡು ತೋಟ ಉಪಸ್ಥಿತರಿದ್ದರು ಹಳೆಯಂಗಡಿ ವಲಯ ಮುಸ್ಲಿಮ್ ಜಮಾತ್ ಒಕ್ಕೂಟದ ಕಾರ್ಯದರ್ಶಿ ವಾಹಿದ್ ತೋಕೂರು ಸ್ವಾಗತಿಸಿದರು ಹ್ಯಾರಿಸ್ ನವರಂಗ್ ಧನ್ಯವಾದ ಅರ್ಪಿಸಿದರು ಮಯ್ಯದ್ದಿ ನಿರೂಪಿಸಿದರು ಬಳಿಕ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಳೆಯಂಗಡಿ ಬೆಳ್ಳಾಯರು ಗ್ರಾಮದ ಸಾಧಕ ಜನಾಬ್ ಬಿ.ಎಂ. ಹನೀಫ್ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜೈಕೃಷ್ಣ ಕೋಟ್ಯಾನ್‌ರವರಿಗೆ ಹುಟ್ಟೂರ ಸಮ್ಮಾನ ಕಾರ್ಯಕ್ರಮ ನಡೆಯಿತು

