ಶಿರ್ವ : ಮಕ್ಕಳ ಉತ್ತಮ ಶಿಕ್ಷಣಕ್ಕೆ ಪೂರಕ ವಾತಾವರಣ ನಿರ್ಮಿಸಲು ಅಗತ್ಯ ಕೊಠಡಿಗಳ ನಿರ್ಮಾಣ ಮಾಡಲಾಗಿದೆ ಎಂದು ಅಧ್ಯಕ್ಷರು ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಎಂ.ಆರ್. ಎಂ .ಎ ಗಫೂರ ಹೇಳಿದರು. ಶನಿವಾರ ಫೈಝುಲ್ ಇಸ್ಲಾಂ ಪಬ್ಲಿಕ್ ಸ್ಕೂಲ್ ದಾನಿಗಳ ನೇರವಿನೊಂದಿಗೆ 4 ಶಾಲಾ ಕೊಠಡಿ ಮತ್ತು ಒಂದು ಹಾಲ್ ಉದ್ಘಾಟಿಸಿ ಅವರು ಮಾತನಾಡಿದರು ಉದ್ಘಾಟಿಸಿ ಮಾತನಾಡಿದ ಅವರು, ‘ಪ್ರಪಂಚದಲ್ಲಿ ಒಳಿತು ಕೆಡುಕುಗಳ ನಡುವೆ ಬದುಕಬೇಕಾಗಿದೆ ಈ ಬದುಕು ಸುಂದರ ವಾಗಬೇಕಾದಲ್ಲಿ ಮಕ್ಕಳ ಮನಸ್ಸಿನಲ್ಲಿ ಅವರ ಹೃದಯದಲ್ಲಿ ಇಸ್ಲಾಮಿನ ತತ್ವ ವನ್ನು ಮತ್ತು ನಂತರ ಜೀವನವನ್ನು ಯಾವರೀತಿ ನಡೆಸಬೇಕು ಎಂದು ತಂದೆ ತಾಯಿ ತಿಳಿಸಬೇಕಾಗಿದೆ‘ ಧಾರ್ಮಿಕ ಶಿಕ್ಷಣವನ್ನು ಹಣದ ಮೂಲಕ ಕಟ್ಟಲು ಸದ್ಯವಿಲ್ಲ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಅಧ್ಯಕ್ಷ ಖಾಲಿದ್ ಮೊಹಮ್ಮದ್ ಮಾತನಾಡಿ ಶಿಕ್ಷಣ ದೊಂದಿಗೆ ಲೌಕಿಕ ಜೀವನವು ಮಕ್ಕಳಿಗೆ ಮುಖ್ಯ ವಾಗಿದ್ದು ಈ ನಿಟ್ಟಿನಲ್ಲಿ ಸಂಸ್ಥೆಯೂ ಮುನ್ನಡೆಯುತಿದೆ ಸರಕಾರದಿಂದ ಶಾಲೆಗೆ ಸಹಕಾರ ಮಾಡಲು ಮನವಿ ಮಾಡಿದರು, ಈ ಸಂದರ್ಭದಲ್ಲಿ ಎಂ . ಎ ಗಫೂರ್ ,ಅಬ್ದುಲ್ ಲತೀಫ್ ,ಅಬ್ದುಲ್ ಹಮೀದ್ , ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು

ಅಧ್ಯಕ್ಷರು ಉಡುಪಿ ತಾಲೂಕು ಜಿಲ್ಲಾ ಮುಸ್ಲಿಂ ಒಕೂಟ್ಟ ಮೊಹಮ್ಮದ್ ಇರ್ಷಾದ್ ಮಾತನಾಡಿ ವಿದ್ಯಾರ್ಥಿಗಳಿಗೆ ಶಿಕ್ಷಣ ದೊಡ್ಡ ಆಸ್ತಿ ಯಾಗಿದ್ದು ಪ್ರತೀ ಯೊಬ್ಬ ವಿದ್ಯಾರ್ಥಿಯೂ ಉತ್ತಮ ಶಿಕ್ಷಣ ಪಡೆಯಬೇಕು ಎಂದು ತಿಳಿಸಿದರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಶಬೀ ಅಹಮೆದ್ ಅಧ್ಯಕ್ಷರು ಫೈಝುಲ್ ಇಸ್ಲಾಂ ಎಜುಕೇಷನಲ್ ಟ್ರಸ್ಟ್ ,ಮುಮ್ತಾಜ್ ಅಲಿ ಮಾಜಿ ಅಧ್ಯಕ್ಷರು ಫೈಝುಲ್ ಇಸ್ಲಾಂ ಪಬ್ಲಿಕ್ ಸ್ಕೂಲ್ , ವೈ ಸಿ ರಸೂಲ್ ಮಾಜಿ ಅಧ್ಯಕ್ಷರು ಫೈಝುಲ್ ಇಸ್ಲಾಂ ಪಬ್ಲಿಕ್ ಸ್ಕೂಲ್ ಎಂ ವಾಹಿದ್ ಅಹ್ಮದ್ ಪ್ರದಾನ ಕಾರ್ಯದರ್ಶಿ ಮೊಹಮ್ಮದ್ ಇಂದ್ರಾಳಿ ,ಉಮ್ಮರ್ ಇಸ್ಮಾಯಿಲ್ ಹಸನಬ್ಬ ಶೇಕ್ ಪರ್ವೇಜ್ ಸಲೀಂ ಶಾಲಾ ಮುಖ್ಯೋಪಾಧ್ಯಾಯಿನಿ ಖೈರುನ್ನೀಸಾ ,ಒಬೈದುರ್ ರಹಮಾನ್ ನದ್ವಿ ಉಪಸ್ಥಿತರಿದ್ದರು

