×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಬಂಟಕಲ್‌ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪದವಿ ಪ್ರದಾನ ಸಮಾರಂಭ

ಬಂಟಕಲ್:‌ ಬಂಟಕಲ್‌ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 12 ನೇ ಪದವಿ ಪ್ರದಾನ” ಸಮಾರಂಭವು ಶನಿವಾರ ಕಾಲೇಜಿನ ಆವರಣದಲ್ಲಿ ನಡೆಯಿತು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಡಾ. ವಿದ್ಯಾಶಂಕರ್‌ ಎಸ್‌ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಅವರು ಮಾತನಾಡಿ, ಕೃತಕ ಬುದ್ಧಿಮತ್ತೆ, ಕ್ವಾಂಟಮ್‌ಕ0ಪ್ಯೂಟಿಂಗ್, ಬಯೋಟೆಕ್ ಮತ್ತು ಸೆಮಿ ಕಂಡಕ್ಟರ್‌ಗಳಂತಹ ಉದಯೋನ್ಮುಖ ಕ್ಷೇತ್ರಗಳಲ್ಲಿ ನಿರಂತರ ಕಲಿಕೆಯ ಮಹತ್ವವನ್ನು ತಿಳಿಸಿ, ಮುಂದುವರೆದ ತಂತ್ರಜ್ಞಾನಗಳಲ್ಲಿ ಭಾರತದ ಸ್ಥಾನ ಮತ್ತು “ವಿಕಸಿತ ಭಾರತ್” ನ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮುಖ್ಯ ಪಾತ್ರ ವಹಿಸಬೇಕೆಂದು ಕರೆ ನೀಡಿದರು.

ನಿವಿಯಸ್ ಸೊಲ್ಯೂಷನ್ ಮಂಗಳೂರು ಇದರ ಸಹ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ  ಸುಯೋಗ್ ಶೆಟ್ಟಿಯವರು ಕಾರ್ಯಕ್ರಮದ ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು.

 ಅವರು ತಮ್ಮ ವೃತ್ತಿ ಜೀವನದ ಅನುಭವಗಳನ್ನು ಹಂಚಿಕೊಳ್ಳುತ್ತಾ, ಗೂಗಲ್‌ನೊಂದಿಗೆ ಅವರ ಸಹಯೋಗ ಮತ್ತು ನೀವಿಯಸ್ ಸಂಸ್ಥೆಗೆ ಬಂಟಕಲ್‌ಕಾಲೇಜಿನ ವಿದ್ಯಾರ್ಥಿಗಳ ಕೊಡುಗೆಯನ್ನುಒತ್ತಿ ಹೇಳಿದರು.

ಅವಕಾಶಗಳನ್ನು ನೀರೀಕ್ಷಿಸುವ ಬದಲು ಹುಡುಕಬೇಕು. ಜೀವನದ ವೈಫಲ್ಯಗಳನ್ನು ಸವಾಲಾಗಿ ಸ್ವೀಕರಿಸಿ ಆತ್ಮ ವಿಶ್ವಾಸದೊಂದಿಗೆ ಮುನ್ನಡೆಯಬೇಕೆಂದು ಸಲಹೆ ನೀಡಿದರು.

ಶ್ರೀ ಸೋದೆ ವಾದಿರಾಜ ಮಠದ ಪರಮ ಪೂಜ್ಯ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿಯವರು ಅಧ್ಯಕ್ಷತೆ ವಹಿಸಿ, ಸಕಾರಾತ್ಮಕ ಅಂಶಗಳ ಮೇಲೆ ಗಮನ ಕೇಂದ್ರಿಕರಿಸಿ, ಸವಾಲುಗಳನ್ನು ಸ್ವೀಕರಿಸಿ ಉತ್ತಮ ಮನಸ್ಥಿತಿಯೊಂದಿಗೆ ಶ್ರೇಷ್ಠ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳಬೇಕು ಎಂದು ತಮ್ಮ ಆಶೀರ್ವಚನದಲ್ಲಿ ತಿಳಿಸಿ, ವಿದ್ಯಾರ್ಥಿಗಳು ತಮ್ಮ ಪೋಷಕರ ಮತ್ತು ಶಿಕ್ಷಕರ ಕೊಡುಗೆಗಳನ್ನು ಗೌರವಿಸುವಂತೆ ಹೇಳಿದರು.

ಸೋದೆ ಶಿಕ್ಷಣ ಸಮೂಹ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ. ರಾಧಾಕೃಷ್ಣಎಸ್ ಐತಾಳ್ ಮಾತನಾಡಿ, ಪೋಷಕರು ತಮ್ಮ ಮಕ್ಕಳ ಬೆಳವಣಿಗೆಯ ಬಗ್ಗೆ ನಂಬಿಕೆ ಇಟ್ಟು ವಿದ್ಯಾಭ್ಯಾಸಕ್ಕೆ ನಮ್ಮ ಸಂಸ್ಥೆಯನ್ನು ಆಯ್ಕೆ ಮಾಡಿ ಕೊಂಡದಕ್ಕಾಗಿ ಧನ್ಯವಾದ ಸಮರ್ಪಿಸಿ, ವಿದ್ಯಾರ್ಥಿಗಳು ವಿಶ್ವ ದರ್ಜೆಯ ಎಂಜಿನಿಯರ್‌ಗಳಾಗಲು ಆವಿಷ್ಕಾರ ಮತ್ತು ನಾವೀನ್ಯತೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.

ಕಾರ್ಯದಶಿಗಳಾದ ಶ್ರೀ ರತ್ನಕುಮಾರ್‌ ರವರು ಪದವೀಧರರನ್ನುಅಭಿನಂದಿಸಿ, ತಮ್ಮ ಬದ್ದತೆಯ ಮೂಲಕ ಪದವಿ ಪಡೆದ ಪದವೀಧರರು ಮತ್ತುಅವರ ಪೋಷಕರನ್ನು ಶ್ಲಾಘಿಸಿದರು. ವಿದ್ಯಾರ್ಥಿಗಳು ತಮ್ಮ ಹೆತ್ತವರ ನಿರೀಕ್ಷೆಯನ್ನು ಹುಸಿ ಮಾಡದೆ, ಜೀವನದಲ್ಲಿ ಸಾಧನೆ ಮಾಡುವಂತೆ ಕರೆ ನೀಡಿದರು.

 ಈ ಸಂದರ್ಭದಲ್ಲಿ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಮತ್ತು ಡಾಟಾ ಸೈನ್ಸ್ ವಿಭಾಗದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 2024-25 ನೇ ಸಾಲಿನಲ್ಲಿ ಮೂರನೇ ರ್ಯಾಂಕ್‌ ಪಡೆದ ಪ್ರಥಮ್‌ ಎಲ್‌ಕಾಮತ್ ಮತ್ತು ಆರನೇ  ರ್ಯಾಂಕ್‌ ಪಡೆದ ನಿಧಿ ಪ್ರಭು ಇವರನ್ನು ಸನ್ಮಾನಿಸಲಾಯಿತು.

ಮಂಗಳೂರಿನ ಪ್ರತಿಷ್ಠಿತ ಎಸ್. ಎಲ್. ಶೇಟ್‌ ಜ್ಯುವೆಲ್ಲರ್ಸ್‌ ಪ್ರಾಯೋಜಿತವಾದ ಚಿನ್ನದ ಪದಕಗಳನ್ನು ಪೂಜ್ಯ ಸ್ವಾಮೀಜಿಯವರು ಪ್ರಥಮ್‌ ಎಲ್‌ ಕಾಮತ್, ಸಮೀಕ್ಷ ನಾಯಕ್, ವಿನಯ್‌ಕುಮಾರ್, ಶ್ರೀಲಕ್ಷ್ಮೀ ಕಾಮತ್, ಚೈತನ್ಯ, ಭಾರ್ಗವಿ ಇವರ ಶೈಕ್ಷಣಿಕ ಸಾಧನೆಗಾಗಿ ನೀಡಿ ಆಶೀರ್ವದಿಸಿದರು.

ಕಾಲೇಜಿನ ಸಂಶೋಧನಾ ಕೇಂದ್ರದಿಂದ ಡಾಕ್ಟರೇಟ್ ಪದವಿ ಪಡೆದ ಡಾ. ಅಶ್ವಿನ್ ಶೆಟ್ಟಿಯವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.

ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಅತಿಥಿಗಳನ್ನು ಸ್ವಾಗತಿಸಿದರು. ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಉಪಾಧ್ಯಕ್ಷರಾದ ಶ್ರೀನಿವಾಸ ತಂತ್ರಿಗಳು, ಆಡಳಿತ ಮಂಡಳಿಯ ಸದಸ್ಯರಾದ ಹರೀಶ್ ಬೆಳ್ಮಣ್, ಡೀನ್‌ಗಳಾದ ಡಾ. ಸುದರ್ಶನ್‌ರಾವ್, ಡಾ. ನಾಗರಾಜ್ ಭಟ್, ಡಾ. ಸಚಿನ್ ಭಟ್ ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಎಂ.ಬಿ.ಎ ವಿಭಾಗದ ನಿರ್ದೇಶಕರಾದ ಡಾ. ಸೂರಜ್ ನೊರೊನ್ಹಾರವರು ಮುಖ್ಯ ಅತಿಥಿಗಳನ್ನು ಹಾಗೂ ವಿದ್ಯಾಸಂಸ್ಥೆ ಮತ್ತು ಕೈಗಾರಿಕೆಗಳ ಸಮನ್ವಯ ಕೋಶದ ಅಧಿಕಾರಿ ಆದಿತ್ಯ ಕುಡ್ವರವರು ಗೌರವ ಅತಿಥಿಗಳನ್ನು ಪರಿಚಯಿಸಿದರು.

ಡಾ. ನಾಗರಾಜ್ ಭಟ್‌ ಅವರು ಪದವೀಧರರಿಗೆ ಪ್ರಮಾಣವಚನ ಭೋದಿಸಿದರು. ಭೌತಶಾಸ್ತç ವಿಭಾಗದ ಮುಖ್ಯಸ್ಥರಾದ ಡಾ. ರವೀಂದ್ರ ಹೆಚ್‌ ಜೆ ವಂದಿಸಿದರು. ವಿದ್ಯಾರ್ಥಿ ಮನೀಶ್ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಪ್ರಾಧ್ಯಾಪಕಿ ಶ್ರೀಮತಿ ಸೌಮ್ಯ ಭಟ್‌ ಮತ್ತು ರಾಘವೇಂದ್ರ ಜಿ ಎಸ್ ನಿರೂಪಿಸಿದರು.

Leave a Reply

Your email address will not be published. Required fields are marked *