ಉಡುಪಿ, ಅ. 5: ಅಜ್ಜರಕಾಡು ಭುಜಂಗ ಪಾರ್ಕ್ ಸಮೀಪ ಇರುವ ತನ್ನ ಗ್ರಾಹಕರಿಗಾಗಿ ಭಾನುವಾರ ನಗರದ ಐಸ್‌ಕ್ರೀಂ ಪಾರ್ಲರ್ ‘ಬಬ್ಬಾಸ್ ಕೆಫೆ’ಯಲ್ಲಿ ಹಮ್ಮಿ ಕೊಂಡ ಡಬಲ್ ಧಮಾಕ ಆಫರ್‌ನಡಿ ಪ್ರತಿ 750 ರೂ. ಖರೀದಿಯ ಮೇಲೆ ನೀಡಲಾದ ಕೂಪನ್ ಅದೃಷ್ಟವಂತರ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ವಿಜೇತರಾದ ಮಣಿಪಾಲದ ಪ್ರಣಮ್ ಯು. ಅವರಿಗೆ ಬಿಜೆಪಿಯ ಮಂಗಳೂರು ಜಿಲ್ಲಾ ಉಸ್ತುವಾರಿ ಉದಯ ಕುಮಾರ್ ಶೆಟ್ಟಿ, ಉದ್ಯಮಿ ಸುಭಾಷ್ ಎಂ. ಸಾಲ್ಯಾನ್ ಅವರು ಜುಪಿಟರ್ ಸ್ಕೂಟಿ ವಿತರಿಸಿ ಶುಭ ಹಾರೈಸಿದರು. ಡ್ರಾ ವನ್ನು ಪಾರದರ್ಶಕತೆಯಿಂದ ನಡೆಸಿ ಗ್ರಾಹಕರಿಗೆ ಬಹುಮಾನ ವಿತರಣೆ ಮಾಡಲಾಗಿದೆ ಪ್ರಥಮ್ ಪಿ. ಪೂಜಾರಿ, ಕವನ ಕೆ. ಆಚಾರ್ಯ, ಕೇವಿನ್ ಅಲ್ಲೇ ಜತ್ತನ್ನ ಉಪಸ್ಥಿತರಿದ್ದರು.
ಇಲ್ಲಿ ಏಕಕಾಲದಲ್ಲಿ 170 ಮಂದಿಗೆ ಆಸನ ವ್ಯವಸ್ಥೆ, ಡೋರ್ ಡೆಲಿವರಿ, ಪಾರ್ಕಿಂಗ್ ವ್ಯವಸ್ಥೆ ಇದೆ. ಬರ್ತ್‌ಡೇ, ಗೆಟ್ ಟುಗೆದರ್, ಸಮ್ಮಾನ, ಬೀಳ್ಕೊಡುಗೆ ಇತ್ಯಾದಿ ಯಾವುದೇ ಪಾರ್ಟಿ ಮಾಡಲು ಶುಚಿ-ರುಚಿಯಾದ ಐಟಮ್ಗಳನ್ನು ಮಾಡಿಕೊಡಲಾಗುವುದು. ಗ್ರಾಹಕರು ತಮ್ಮ ವಾಹನದಲ್ಲೇ ಕುಳಿತು ಬೇಕಾದ ಐಟಮ್‌ಗಳನ್ನು ಆರ್ಡರ್ ಮಾಡಿದಲ್ಲಿ ಸರ್ವಿಸ್ ಮಾಡಲಾಗುವುದು. ಬೆಳಗ್ಗೆ 9.30ರಿಂದ ರಾತ್ರಿ 11.30ರ ತನಕ ಕೆಫೆ ತೆರೆದಿರುತ್ತದೆ ಎಂದು ಕೆ. ಕೃಷ್ಣಮೂರ್ತಿ ಆಚಾರ್ಯ ತಿಳಿಸಿದ್ದಾರೆ.

