×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಉಡುಪಿ-ಉಚ್ಚಿಲ ದಸರಾ 2025ಕ್ಕೆ ವೈಭವದ ತೆರೆ

ಉಚ್ಚಿಲ: ದ. ಕ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮಿ ನಡೆಯುತ್ತಿರುವ ದೇವಸ್ಥಾನದಲ್ಲಿ ‘ಉಡುಪಿ-ಉಚ್ಚಿಲ ದಸರಾ 2025’ ಇದರ 4ನೇ ವರ್ಷದ ‘ಉಡುಪಿ ಉಚ್ಚಿಲ ದಸರಾ’ ವೈಭವಕ್ಕೆ ಗುರುವಾರ ರಾತ್ರಿ ಅಂತಿಮ ತೆರೆ ಬಿದ್ದಿದೆ.ಉಚ್ಚಿಲ ದಸರಾ ಉತ್ಸವ ಪ್ರಯುಕ್ತ ಶಾಲಿನಿ ಜಿ ಶಂಕರ್ ತೆರೆದ ಸಭಾಭವನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ನವದುರ್ಗೆಯರು ಮತ್ತು ಶಾರದಾ ಮಾತೆಯ ವಿಗ್ರಹಗಳ ಜಲಸ್ತಂಭನಾ ಕಾರ್ಯವು ಸಾವಿರಾರು ಸಮ್ಮುಖದಲ್ಲಿ ಕಾಪು ಕಡಲ ತೀರದಲ್ಲಿ ನೆರೆವೇರಿತು. ಅಕರ್ಷಕ ಗಂಗಾರತಿ ವಿಷೇಶವಾಗಿ ಕಾಶಿ ಗಂಗಾತೀರದಲ್ಲಿ ಗಂಗಾರತಿ ನಡೆಸುವ ಅರ್ಚಕರು ಉಡುಪಿ ಉಚ್ಚಿಲ ದಸರಾಕ್ಕೆ ಆಗಮಿಸಿ ಸಮುದ್ರ ದೇವಿ, ನವ ದುರ್ಗೆಯರು ಮತ್ತು ಮಾತೆ ಶಾರದೆಗೆ ಆರತಿ ಬೆಳಗಿದ್ದಾರೆ ಮಹಿಳೆಯರಿಂದ ಆರತಿ ಅರ್ಚಕರಿಂದ ವಿಸರ್ಜನಾ ಪೂಜೆ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಕೆ ವಿ ರಾಘವೇಂದ್ರ ಉಪಾಧ್ಯಾಯರಿಂದ ನವ ದುರ್ಗೆಯರು ಮತ್ತು ಶಾರದೆ ಮಾತೆಗೆ ವಿಸರ್ಜನಾ ಪೂಜೆಯ ಬಳಿಕ ಜಲಸ್ಥಂಭನಕ್ಕೆ ಚಾಲನೆ ದೊರೆಯಿತು. ಕಳೆದ 11 ದಿನಗಳಿಂದ ನಡೆದ ದಸರಾ ಉತ್ಸವವು ನವದುರ್ಗೆಯರ ಸಹಿತ ಶಾರದಾ ಮಾತೆಯ ಮೃಣ್ಮಯ ವಿಗ್ರಹಗಳ ಜಲಸ್ಥಂಭನದೊಂದಿಗೆ ಯಾವುದೇ ವಿಘ್ನಗಳಿಲ್ಲದೆ ಸಮಾಪನಗೊಂಡ ಈ ಉತ್ಸವದ ಯಶಸ್ಸಿನ ಬಗ್ಗೆ ಆಡಳಿತ ಮಂಡಳಿ ನಿಟ್ಟಿಸಿರು ಬಿಟ್ಟಿದೆ.

ರೂವಾರಿ ನಾಡೋಜ ಡಾ. ಜಿ. ಶಂಕರ್, ಉಡುಪಿ ಶಾಸಕ ಯತ್ಪಾಲ್ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೊಟ್ಯಾನ್ ಬೆಳ್ಳಂಪಳ್ಳಿ, ಉಪಾಧ್ಯಕ್ಷರಾದ ಮೋಹನ್ ಬೇಂದ್ರೆ, ದಿನೇಶ್ ಎರ್ಮಾಳು, ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕ್ಷೇತ್ರಾಡಳಿಯ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ಉಚ್ಚಿಲ ದಸರಾ ಉತ್ಸವ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಮಹಿಳಾ ಸಂಚಾಲಕಿ ಸಂಧ್ಯಾದೀಪ ಸುನೀಲ್, ದೇವಳದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ, ಉದ್ಯಮಿ ಸಾಧು ಸಾಲ್ಯಾನ್, ಉದಯ ಕುಮಾರ್ ಹಟ್ಟಿಯಂಗಡಿ, ಯುವರಾಜ್ ಕಿದಿಯೂರು ಮಸ್ಕತ್, ಉಷಾ ರಾಣಿ ಮಂಗಳೂರು, ಮನೋಜ್ ಕಾಂಚನ್, ಸುಜಿತ್ ಸಾಲ್ಯಾನ್, ಸತೀಶ್ ಕಾಂಚನ್, ಶಿವಕುಮಾರ್ ಮೆಂಡನ್, ಸುಗುಣ ಕರ್ಕೇರ, ಪದ್ಮಾಕರ್, ಕೇಶವ ಕೋಟ್ಯಾನ್, ಗಿರೀಶ್ ಕುಮಾರ್, ಶಿಲ್ಪಾ ಗಂಗಾಧರ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು ಮತ್ತು ದೇವಳದ ಪ್ರಧಾನ ವ್ಯವಸ್ಥಾಪಕ ಸತೀಷ್ ಅಮೀನ್ ಪಡುಕರೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *