×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನಲ್ಲಿ ವಿದ್ಯಾರ್ಥಿ ಕ್ಷೇಮಪಾಲನ ಮಂಡಳಿ ಉದ್ಘಾಟನ ಸಮಾರಂಭ

ಉಡುಪಿ: ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜು, ಉಡುಪಿಯಲ್ಲಿ 2025-26ನೇ ಸಾಲಿನ ವಿದ್ಯಾರ್ಥಿ ಕ್ಷೇಮಪಾಲನಾ ಮಂಡಳಿಯ ಸ್ಥಾಪನಾ ಸಮಾರಂಭವು ಸೆಪ್ಟೆಂಬರ್ 3, 2025ರಂದು ಬುಧವಾರ ಮಧ್ಯಾಹ್ನ 3.00 ಗಂಟೆಗೆ ನೂತನ ರವೀಂದ್ರ ಮಂಟಪದಲ್ಲಿ ಜರುಗಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪ್ರೊ. ನಿತ್ಯಾನಂದ ವಿ. ಗಾಂವ್ಕರ್ ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ತೆಂಕನಿಡಿಯೂರ್ ಇವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಶಿಸ್ತು ಮತ್ತು ಸಮಾಜ ಸೇವೆಯ ಮನೋಭಾವ ಬೆಳೆಸಿಕೊಳ್ಳುವಂತೆ ತಿಳಿಸಿದರು. ಯುವಕರು ದೇಶದ ಭವಿಷ್ಯದ ಕಂಬವಾಗಿರುವುದರಿಂದ ಜವಾಬ್ದಾರಿತನದಿಂದ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ದೇವಿದಾಸ್ ಎಸ್. ನಾಯಕ್ ಅವರು ಅಧ್ಯಕ್ಷತೆ ವಹಿಸಿದರು. ಅತಿಥಿ ಗೌರವಾನ್ವಿತರಾಗಿ ಪ್ರೊ. ವನಿತಾ ಮೈಯ ಪ್ರಾಂಶುಪಾಲರು, ಎಂ.ಜಿ.ಎಂ. ಪದವಿ ಕಾಲೇಜು, ಉಡುಪಿ, ಹಾಗೂ ಶ್ರೀ ಟಿ. ರಂಗ ಪೈ ನಿರ್ದೇಶಕರು, ಟಿ.ಎಂ.ಎ. ಪೈ ಸ್ಕಿಲ್ ಡೆವಲಪ್‌ಮೆಂಟ್ ಇನ್ಸ್‌ಟಿಟ್ಯೂಟ್ ಉಡುಪಿ ಹಾಗೂ ಎಂ.ಜಿ.ಎಂ ಕಾಲೇಜಿನ ಉಪಪ್ರಾಂಶುಪಾಲರು ,ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ. ಎಂ. ವಿಶ್ವನಾಥ್ ಪೈ ಮತ್ತು ಬಿಕಾಂ/ಬಿಬಿಎ ಸಂಯೋಜಕಿ ಡಾ. ಮಲ್ಲಿಕಾ ಎ. ಶೆಟ್ಟಿ ಉಪಸ್ಥಿತರಿದ್ದರು. 2025-26ನೇ ಸಾಲಿನ ವಿದ್ಯಾರ್ಥಿ ಕ್ಷೇಮಪಾಲನ ಮಂಡಳಿಯ ಸದಸ್ಯರಾದ ಅಧ್ಯಕ್ಷ: ಧೀರಜ್ (ತೃತೀಯ ಬಿಕಾಂ), ಕಾರ್ಯದರ್ಶಿ: ಕ್ಯಾರೆನ್ ಲಿಸಾ ಅರೋನ್ (ತೃತೀಯ ಬಿಸಿಎ), ಉಪಾಧ್ಯಕ್ಷರ: ಪುಣ್ಯ (ತೃತೀಯ ಬಿಸಿಎ), ಪ್ರತೀಕ್ (ತೃತೀಯ ಬಿಸಿಎ), ತೇಜಸ್ವಿ (ದ್ವಿತೀಯ ಬಿಸಿಎ), ಸಹ ಕಾರ್ಯದರ್ಶಿಗಳು: ದನ್ಯಾ (ತೃತೀಯ ಬಿಸಿಎ), ಅನನ್ಯಾ (ತೃತೀಯ ಬಿಸಿಎ ), ಪ್ರಿಯಾ (ದ್ವಿತೀಯ ಬಿಬಿಎ)
ಕ್ರೀಡಾ ಕಾರ್ಯದರ್ಶಿಗಳು: ಛಾಯಾ (ತೃತೀಯ ಬಿಸಿಎ), ರೋಶೆಲ್ (ತೃತೀಯ ಬಿಕಾಂ) ಸಾಂಸ್ಕೃತಿಕ ಕಾರ್ಯದರ್ಶಿ: ಪ್ರಜ್ಞಾ (ತೃತೀಯ ಬಿಸಿಎ) ಸಾಹಿತ್ಯ ಕಾರ್ಯದರ್ಶಿ: ಅನುಪಮಾ (ದ್ವಿತೀಯ ಬಿಕಾಂ) ಇವರೆಲ್ಲರೂ ಪ್ರತಿಜ್ಜಾ ವಿಧಿ ಸ್ವೀಕರಿಸಿದಿರು. ಪ್ರಸಿಜಾ ಹಾಗೂ ತಂಡದವರು ಪ್ರಾರ್ಥನೆ ಮಾಡಿ, ಧೀರಜ್ ಪ್ರವೀಣ್ ಕುಮಾರ್, ತೃತೀಯ ಬಿಕಾಂ ಸ್ವಾಗತಿಸಿ, ಕ್ಯಾರನ್ ಲಿಸಾ, ತೃತೀಯ ಬಿಸಿಎ ವಂದಿಸಿ, ಮಧುರ, ದ್ವಿತೀಯ ಬಿಸಿಎ ನಿರೂಪಿಸಿದರು.

Leave a Reply

Your email address will not be published. Required fields are marked *