×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ : ವಿವಿಧ ಶಾಲಾ ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಅರಿವು   ಕಾರ್ಯಕ್ರಮ

ಪಡುಬಿದ್ರಿ: ಅಂತರಾಷ್ಟ್ರೀಯ ಸಹಕಾರಿ ವರ್ಷ-2025  ಸಲುವಾಗಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಆದೇಶದನ್ವಯ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಆಶ್ರಯದೊಂದಿಗೆ ಪಡುಬಿದ್ರಿ ಸಿ.ಎ. ಸೊಸೈಟಿ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ  ಸಹಯೋಗದೊಂದಿಗೆ ವಿವಿಧ  ಶಾಲಾ ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಅರಿವು ಮೂಡಿಸುವುದು ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಶುಕ್ರವಾರ ಪಡುಬಿದ್ರಿಯ ಸಾಗರ್ ವಿದ್ಯಾಮಂದಿರ ಅಂಗ್ಲ ಮಾಧ್ಯಮ ಶಾಲೆ, ತೆಂಕ ಎರ್ಮಾಳು ಕಿನಾರ ಆಂಗ್ಲ ಮಾಧ್ಯಮ ಶಾಲೆ ಮತ್ತು ಹೆಜಮಾಡಿ ಅಲ್ ಅಝಾರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಕೊಳ್ಳಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಜಾನಪದ ವಿದ್ವಾಂಸಕೆ. ಎಲ್ ಕುಂಡಂತಾಯರವರು  ಉದ್ಘಾಟಿಸಿದರು.  ಮಾತನಾಡಿದ ಅವರು ಕಾಡನ್ನು ಕಡಿದು ನಾಡು ಕಟ್ಟುತ್ತಿದ್ದರು. ಆದರೆ ಕಾಲ ಬದಲಾಗಿದೆ ಕಾಡನ್ನು ಬೆಳೆಸಿ ರಕ್ಷಿಸುವುದು ಅನಿವಾರ್ಯವಾಗಿದೆ. ಹಸಿರನ್ನು ಕಟ್ಟುವ,  ಹಸಿರನ್ನು ಬೆಳೆಸುವ ಕಾರ್ಯ ವಿದ್ಯಾರ್ಥಿಗಳನ್ನು ಮುಂದಿಟ್ಟುಕೊಂಡು ಸಹಕಾರ ಸಂಸ್ಥೆಗಳು ಮಾಡುತ್ತಿದೆ ಎಂದರು‌. ಪಡುಬಿದ್ರಿ ಸಿ.ಎ. ಸೊಸೈಟಿ ಅಧ್ಯಕ್ಷ  ವೈ ಸುಧೀರ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.   ಕಾರ್ಯಕ್ರಮದಲ್ಲಿಕೆ.ಎಲ್ ಕುಂಡಂತಾಯ ಹಾಗೂ ರಾಮಕೃಷ್ಣ ಶರ್ಮ, ಬಂಟಕಲ್ಲು ಇವರನ್ನು ಗೌರವಿಸಲಾಯಿತು. ಈ ಸಂದರ್ಭ ಸಾಗರ ವಿದ್ಯಾ ಸಂಸ್ಥೆಯ ಸಂಚಾಲಕ ಸುಕುಮಾರ್ ಶ್ರೀಯಾನ್, ಮುಖ್ಯೋಪಾಧ್ಯಾಯಿನಿ ಪದ್ಮಶ್ರೀ, ಸುರೇಶ್ ರಾವ್, ಉಡುಪಿ ಕಾರ್ಪೊರೇಟ್ ಯೂನಿಯನ್ ಮ್ಯಾನೇಜರ್ ವಿಶ್ವನಾಥ್, ಗಣಪತಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್‌ ಕೋಟ್ಯಾನ್‌,  ಪಡುಬಿದ್ರಿ ಸಿ.ಎ.‌ ಸೊಸೈಟಿ ಉಪಾಧ್ಯಕ್ಷರಾದ ಗುರುರಾಜ್ ಪೂಜಾರಿ, ನಿರ್ದೇಶಕರಾದ ಗಿರೀಶ್ ಪಲಿಮಾರು, ಕೃಷ್ಣ ಬಂಗೇರ, ಮಾಧವ ಆಚಾರ್ಯ, ವಾಸು ದೇವಾಡಿಗ, ಕಾಂಚನಾ, ರೋಹಿಣಿ ಎ., ಕುಸುಮಾ ಕರ್ಕೇರ, ಶಿವರಾಮ ಎನ್ ಶೆಟ್ಟಿ, ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೋಭಾ ಎಚ್.ಪುತ್ರನ್ ಮತ್ತು ಸಹಕಾರ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ನಿಖಿಲ್ ಪೂಜಾರಿ ನಿರೂಪಿಸಿ, ವಂದಿಸಿದರು 

Leave a Reply

Your email address will not be published. Required fields are marked *