ಯುವ, ಬ್ರಹ್ಮಾವರ ಎಂದೇ ಖ್ಯಾತಿಯನ್ನು ಪಡೆದಿರುವ ಯುನೈಟೆಡ್ ವಾಲಂಟಿಯರ್ಸ್ ಅಸೋಸಿಯೇಷನ್, ಬ್ರಹ್ಮಾವರ ಒಂದು ಉತ್ತಮ ಯುವಕರ ಸಂಘಟನೆಯಾಗಿದ್ದು ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಕಳೆದ 5 ವರ್ಷಗಳಿಂದ ನಿರಂತರವಾಗಿ ಹುಲಿವೇಷ ಕುಣಿತವನ್ನು ಮಾಡುವುದರ ಮೂಲಕ ಉತ್ತಮ ಜನಬೆಂಬಲವನ್ನು ಪಡೆದಿದೆ. ಸಂಪ್ರದಾಯ. ಯಕ್ಷಗಾನದಲ್ಲಿ ಚೌಕಿ ಪೂಜೆ ಇದ್ದಂತೆ ಬೇರೆ ಬೇರೆ ಕಲಾ ಪ್ರಕಾರದಲ್ಲಿ ಬೇರೆ ಬೇರೆ ಸಂಪ್ರದಾಯಗಳಿವೆ. ಈ ಪೈಕಿ ಹುಲಿ ವೇಷ ಹೊರಡುವ ಮುನ್ನ ನಡೆಯುವ ಆರಾಧನೆಯೇ ‘ಊದು 40 ದಿನಗಳ ಮುನ್ನವೇ ಹುಲಿ ವೇಷ ಹಾಕುವವರು ಮುಹೂರ್ತ ಮಾಡುತ್ತಿದ್ದರು. ಇದಕ್ಕೆ ‘ಊದು’ ಇಡುವುದು ಎನ್ನುತ್ತಾರೆ. ಆದರೆ ಆಧುನಿಕವಾಗಿ ಕಾಲ ಬದಲಾದ ಕಾರಣದಿಂದ 40 ದಿನ ಇದ್ದ ಊದು ಕ್ರಮ ಒಂದೆರಡು ದಿನಕ್ಕೆ ಸೀಮಿತವಾಗಿದೆ.ಕಾರ್ಯಕ್ರಮನ್ನು ಉದ್ಘಾಟಿಸಿ ಉಪಮುಖ್ಯಮಂತ್ರಿ ಡಿ.ಕೆ .ಶಿವಕುಮಾರ್ ಸಂಘಟಕರಿಗೆ ಶುಭ ಹಾರೈಸಿದರು

ಈ ಸಂದರ್ಭದಲ್ಲಿ ಅರ್ಜುನ್ ನಾಯರಿ ವಿನಯ್ ಕುಮಾರ್ ಸೊರಕೆ ಪ್ರಸಾದ್ ಕಾಂಚನ್ ಜಯಪ್ರಕಾಶ್ ಹೆಗ್ಡೆ ಅಶೋಕ್ ಕುಮಾರ್ ಕೊಡವುರ್ ಮಿಥುನ್ ರೈ ರಮೇಶ್ ಕಾಂಚನ್ ಗಫೂರ್ ಉದಯ ಕುಮಾರ್ ಶೆಟ್ಟಿ ಸೌರಭ್ ಬಲ್ಲಾಳ್ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು

