×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಪಡುಬಿದ್ರಿ : ಅಂಬೇಡ್ಕರ್ ಯುವ ಸೇನೆ(ರಿ.) ಸಂಘದ ನೂತನ ಕಛೇರಿ ಉದ್ಘಾಟನೆ

ಪಡುಬಿದ್ರಿ ಅಂಬೇಡ್ಕರ್ ಯುವ ಸೇನೆ(ರಿ.) ಸಂಘದ ನೂತನ ಕಛೇರಿ ಪಡುಬಿದ್ರಿಯ ಮಾರ್ಕೆಟ್ ರಸ್ತೆ ಗ್ರಾಮ ಪಂಚಾಯತ್ ಕಟ್ಟಡದಲ್ಲಿ ಉದ್ಘಾಟನೆಗೊಂಡಿತು ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದ ಅಂಬೇಡ್ಕ‌ರ್ ಯುವ ಸೇನೆ ಉಡುಪಿ ಜಿಲ್ಲೆ ಅಧ್ಯಕ್ಷ ಗಣೇಶ್ ನೆರ್ಗಿ ಮಾತನಾಡಿ ಸುಮಾರು 15 ವರ್ಷ ದ ಹಿಂದೆ ಉಡುಪಿ ಯಲ್ಲಿ ಅಂಬೇಡ್ಕರ್ ಯುವಸೇನೆ ಜಯನ್ ಮಲ್ಪೆ ಇವರ ನೇತ್ರತ್ವದಲ್ಲಿ ಸ್ಥಾಪಿಸಲ್ಪಟ್ಟಿತ್ತು ದಲಿತ ಸಮುದಾಯದಿಂದ ಬಹಳಷ್ಟು ನೊಂದು ಬಂದವರಿಗೆ ದೌರ್ಜನ್ಯಒಳಪಡುತ್ತಿದ್ದವರಿಗೆ ನ್ಯಾಯ ಕೊಡಿಸುವುದರ ಮೂಲಕ ಸಂಘಟನೆಯು ಕ್ರಾಂತಿ ಯನ್ನೇ ಮಾಡಿತು ಎಂದು ಹೇಳಿದರು ಭಾರತದ ಸಂವಿಧಾನ ವಿಶಿಷ್ಟವಾದುದು. ಇದನ್ನು ರಚಿಸಿದ ಅಂಬೇಡ್ಕರ್ ವಿಶ್ವಕಂಡಂತಹ ಮಹಾನ್ ನಾಯಕ. ಎಲ್ಲರೂ ಇವರ ಆದರ್ಶ ಅನುಸರಿಸಬೇಕು ಅಂಬೇಡ್ಕರ್ ಅವರ ವಿಚಾರದಾರೆಯನ್ನು ಯುವ ಸಮುದಾಯದಕ್ಕೆ ತಿಳಿಸುವುದು ಸಂಘಟನೆಯ ಉದ್ದೇಶವಾಗಿದೆ ಎಂದು ತಿಳಿದರು ನೂತನ ಕಛೇರಿಯನ್ನು ಶ್ರೀಮತಿ ಶಶಿಕಲಾ ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರು ಉದ್ಘಾಟಿಸಿದರು ಈ ಸಂದರ್ಭದಲ್ಲಿ ಶ್ರೀ ವೈ. ಸುಧೀರ್ ಕುಮಾರ್ ಅಧ್ಯಕ್ಷರು, ಪಡುಬಿದ್ರಿ ವ್ಯವಸಾಯ ಸೇವಾ ಸಹಕಾರಿ ಸಂಘ ಪಡುಬಿದ್ರಿ ಶ್ರೀ ನವೀನ್ ಶೆಟ್ಟಿ ಮಾಜಿ ಅಧ್ಯಕ್ಷರು, ಬಂಟರ ಸಂಘ, ಪಡುಬಿದ್ರಿ ಶ್ರೀ ಶಕ್ತಿವೇಲು ಠಾಣಾಧಿಕಾರಿ ಪಡುಬಿದ್ರಿ ಪ್ರಕಾಶ್ ಶೆಟ್ಟಿ ಉಡುಪಿ ಜಿಲ್ಲಾ ಉಪಾಧ್ಯಕ್ಷರು ಬಿಜೆಪಿ ಶ್ರೀ ವೈ. ಸುಕುಮಾರ್ ಪಡುಬಿದ್ರಿ ಅಧ್ಯಕ್ಷರು, ದಕ್ಷಿಣ ಕಾಂಗ್ರೆಸ್, ಕಾಪು ತಾಲೂಕು ಹೇಮಚಂದ್ರ ಪಡುಬಿದ್ರಿ ಉಪಾಧ್ಯಕ್ಷರು, ಗ್ರಾಮ ಪಂಚಾಯತ್ ಪಡುಬಿದ್ರಿ ಅಧ್ಯಕ್ಷರು / ಕಾರ್ಯದರ್ಶಿ, ಸರ್ವಉಪಸ್ಥಿತರಿದ್ದರು

Leave a Reply

Your email address will not be published. Required fields are marked *